ತಿಪಟೂರು : ಕೇಂದ್ರದಲ್ಲಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದರೂ, ರಾಜ್ಯದಲ್ಲಿ ಉಳಿಸಿಕೊಂಡಿರುವ ಉದ್ದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಯೋಗೇಂದ್ರ ಯಾದವ್ ಪ್ರಶ್ನಿಸಿದ್ದಾರೆ.
ಎಂ.ಎಸ್.ಪಿ ಖಾತರಿ ಕಾನೂನಿಗೆ ಆಗ್ರಹಿಸಿ ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ರ ಅಪಾಯಗಳ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಾ, ಈ ಕಾಯ್ದೆಗೆ ಮುಂಚೆ ತಿಪಟೂರು ಎಪಿಎಂಸಿ ಯಲ್ಲಿ ವಾರ್ಷಿಕ 14 ಕೋಟಿ ರೂ ಸರ್ಕಾರಕ್ಕೆ ಆದಾಯ ಬರುತ್ತಿತ್ತು.ಈಗ ಕೇವಲ 80 ಲಕ್ಷಕ್ಕೆ ಇಳಿದಿದೆ. ಮೊದಲು ಪ್ರತಿದಿನ 40 ಸಾವಿರ ಚೀಲ ಕೊಬ್ಬರಿ ಮಾರುಕಟ್ಟೆ ಗೆ ಬರುತ್ತಿದ್ದರೆ ಈಗ ಕೇವಲ ಎರಡು ಸಾವಿರ ಚೀಲ ಮಾತ್ರ ಬರುತ್ತಿದೆ. ಈ ಕಾಯ್ದೆಯಿಂದ ಎಪಿಎಂಸಿ ಮಾರ್ಕೆಟ್ ಗಳಿಗೆ ತೊಂದರೆ ಇಲ್ಲ ಎಂದು ಹೇಳುತ್ತಿದ್ದವರು ಈಗ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ಕುರಿತು ಮಾತಾಡಿದ ಕರ್ನಾಟಕ ಪ್ರಾಂತ ರೈತ ಸಂಘ ದ ಟಿ ಯಶವಂತ ರವರು ಕೇಂದ್ರ ದ ಕೃಷಿ ಕಾಯ್ದೆಗಳು ರಾಜ್ಯದಲ್ಲಿ ಸುಲಲಿತವಾಗಿ ಜಾರಿಗೊಳ್ಳಲು ಅಗತ್ಯವಾಗಿ ರಾಜ್ಯ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ಭೂ ಹೀನತೆ ಪ್ರಮಾಣ ಶೇಕಡಾ 50 ಕ್ಕೆ ತಲುಪಿರುವಾಗ ಭೂ ಕೇಂದ್ರೀಕರಣ ಪ್ರೊತ್ಸಾಹಿಸುವುದು ನಿರುದ್ಯೋಗ, ಬಡತನ, ಹಸಿವು ,ಆತ್ಮಹತ್ಯೆ, ವಲಸೆಯನ್ನು ಉತ್ತೇಜಿಸುತ್ತದೆ. ಇದರಿಂದ ದೇಶದ ಆಹಾರ ಭದ್ರತೆ ನಾಶವಾಗಲಿದೆ ಅದ್ದರಿಂದ ರಾಜ್ಯ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಲವಾದ ಹೋರಾಟಗಳು ಮುಂದುವರೆಯಬೇಕು ಎಂದು ಯೋಗೇಂದ್ರ ಯಾದವ್ ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕ ಸಿ. ಯತಿರಾಜ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ ಕೆಳಹಟ್ಟಿ, ರೈತ ನಾಯಕರಾದ ಟಿ.ಯಶವಂತ್, ಅಜ್ಜಪ್ಪ ಸೇರಿದಂತೆ ಅನೇಕರಿದ್ದರು.