ಮತದಾನದ ಅಂಕಿ-ಅಂಶಗಳನ್ನು ಪ್ರಕಟಿಸುವಲ್ಲಿ ವಿಪರೀತ ವಿಳಂಬ ಮತ್ತು ಅಸಂಗತತೆ ಏರಿಕೆ ಏಕೆ?-ಸ್ಪಷ್ಟೀಕರಿಸಬೇಕು : ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ

ಮೇ3ರಂದು ಸೀತಾರಾಮ್ ಯೆಚುರಿ, ಸಿಪಿಐ(ಎಂ)  ಪ್ರಧಾನ ಕಾರ್ಯದರ್ಶಿಗಳು,  ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್, ಅವರಿಗೆ ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ಅವುಗಳಲ್ಲಿ ಅಸಾಂಗತ್ಯ ವಿರುವ   ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹನ್ನೊಂದು ದಿನಗಳ ವಿಪರೀತ ಮತ್ತು ವಿವರಿಸಲಾಗದ ವಿಳಂಬದ ನಂತರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಶೇಕಡಾವಾರು ಮತದಾನದ ಅಂತಿಮ ಅಂಕಿಅಂಶಗಳು ಲಭ್ಯವಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಅವರು ಹೇಳಿದ್ದಾರೆ.ಎರಡನೇ ಹಂತದ ಸಂದರ್ಭದಲ್ಲಿ ನಾಲ್ಕು ದಿನ ವಿಳಂಬವಾಗಿದೆ.

ಇದನ್ನು ಓದಿ : ರೇವಣ್ಣ ದಂಪತಿ ಪ್ರಜ್ವಲ್ಗೆ ಬುದ್ಧಿ ಹೇಳುವ ಬದಲು ಕತ್ತೆ ಕಾಯುತ್ತಿದ್ದರೇ? ಶಿವರಾಮೇಗೌಡ

ದುರದೃಷ್ಟವಶಾತ್, ಈ ಅನಗತ್ಯ ವಿಳಂಬದ ಕಾರಣಕ್ಕೆ ಚುನಾವಣಾ ಆಯೋಗ ಯಾವುದೇ ವಿವರಣೆಯನ್ನು ನೀಡಿಲ್ಲ. ಅದು ಬಿಡುಗಡೆ  ಮಾಡಿದ ಆರಂಭಿಕ ಅಂಕಿಅಂಶಗಳಿಗಿಂತ ಈ ಅಂತಿಮ ಅಂಕಿ ಅಂಶಗಳಲ್ಲಿ 6 % ದಷ್ಟು  ಏರಿಕೆಯಾಗಿದೆ. ಇದಕ್ಕೂ ವಿವರಣೆ ನೀಡಲಾಗಿಲ್ಲ. ಆರಂಭಿಕ ಮತ್ತು ಅಂತಿಮ ಅಂಕಿಅಂಶಗಳ ನಡುವೆ ಸ್ವಲ್ಪ ವ್ಯತ್ಯಾಸವಿರಬಹುದಾಗಿದ್ದರೂ, ಆರು ಶೇಕಡಾದ ಈ ವ್ಯತ್ಯಾಸವು ಅಸಾಮಾನ್ಯವಾಗಿದೆ ಮತ್ತು ಕೆಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದಿರುವ ಯೆಚುರಿಯವರು,ಇದಲ್ಲದೆ, ಶೇಕಡಾವಾರುಗಳನ್ನು ಪ್ರಕಟಿಸಲಾಗಿದ್ದರೂ,  ಚಲಾವಣೆಯಾದ ಒಟ್ಟು ಮತಗಳೆಷ್ಟು ಎಂಬ ಅಂಕಿಅಂಶಗಳನ್ನು (ಒದಗಿಸಲಾಗಿಲ್ಲ ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ.

ಮತದಾನ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ದೃಷ್ಟಿಯಿಂದ, ಈ ನಿಟ್ಟಿನಲ್ಲಿ ಉದ್ಭವಿಸಿರುವ ಸಂದೇಹಗಳನ್ನು ಚುನಾವಣಾ ಆಯೋಗ ನಿವಾರಿಸಬೇಕಾಗಿದೆ. ಅದು ರಾಜ್ಯವಾರು, ಕ್ಷೇತ್ರವಾರು ಮತ್ತು ವಿಧಾನಸಭಾ ವಿಭಾಗವಾರು ಆರಂಭಿಕ ಮತ್ತು ಅಂತಿಮ ಶೇಕಡಾವಾರು ಮತ್ತು ಚಲಾವಣೆಯಾದ ಮತಗಳ ಸಂಖ್ಯೆಗಳನ್ನು ಒದಗಿಸಬೇಕು. ಮತದಾನ ಯಂತ್ರಗಳು, ಅಂಚೆ ಮತಪತ್ರಗಳು, ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಮತದಾನಕ್ಕೆ ಅವಕಾಶ ಒದಗಿಸಿದ  ಕೇಂದ್ರಗಳಲ್ಲಿನ ಮತಗಳು ಇತ್ಯಾದಿ  ಯಾವ ವಿಭಾಗದ  ಅಡಿಯಲ್ಲಿ ಈ ಏರಿಕೆ ನಡೆದಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕಾಗಿದೆ ಎಂದು  ಸೀತಾರಾಮ ಯೆಚುರಿಯವರು ಚುನಾವಣಾ ಆಯುಕ್ತರಿಗೆ ಬರೆದಿರುವ ಈ ಪತ್ರದಲ್ಲಿ ಹೇಳಿದ್ದಾರೆ.

ಇದನ್ನು ನೋಡಿ : ಉತ್ತರ ಕನ್ನಡ ಲೋಕಸಭೆ : ಬಿಜೆಪಿಯ ಬಂಡಾಯ ಕಾಂಗ್ರೆಸ್‌ಗೆ ಲಾಭ! Janashakthi Media

Donate Janashakthi Media

Leave a Reply

Your email address will not be published. Required fields are marked *