ಕೇಂದ್ರ ಬಜೆಟ್‌ 2023-24: ಯಾವ ವಸ್ತುಗಳ ಬೆಲೆ ಏರಿಕೆ – ಯಾವ ವಸ್ತುಗಳ ಬೆಲೆ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-24ನೇ ಸಾಲಿನ ಈ ಬಾರಿ ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಇದರ ಪರಿಣಾಮ ಕೆಲವೊಂದಷ್ಟು ವಸ್ತುಗಳ ಬೆಲೆಯಲ್ಲಿಯೂ ಏರಿಳಿಕೆ ಆಗಿದೆ.

ಸಿಗರೇಟು ಮತ್ತು ಚಿನ್ನ ಸೇರಿದಂತೆ ಕೆಲವು ವಸ್ತುಗಳ ಬೆಲೆಗಳೂ ಏರಿವೆ. ಸಿಗರೇಟು ಬೆಲೆ ಶೇ. 16ರಷ್ಟು ಹೆಚ್ಚುವ ಸಾಧ್ಯತೆ ಇದೆ. ಗೋಲ್ಡ್ ಬಾರ್​ ಗಳಿಂದ ಮಾಡಿದ ಆರ್ಟಿಕಲ್​ಗಳ ಮೇಲಿನ ಬೇಸಿಕ್ ಕಸ್ಟಮ್ಸ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ.

ದುಬಾರಿಯಾಗಲಿರುವ ವಸ್ತುಗಳು:

ಸಿಗರೇಟು, ಚಿನ್ನ, ಬೆಳ್ಳಿ, ಆಮದಿತ ರಬ್ಬರ್, ಆಮದಿತ ಬೆಳ್ಳಿ ವಸ್ತು, ಎಲೆಕ್ಟ್ರಿಕ್ ಅಡುಗೆ ಚಿಮಣಿ, ವಜ್ರ, ಪ್ಲಾಟಿನಮ್, ವಿದೇಶಿ ವಾಹನಗಳು, ಬ್ರಾಂಡೆಡ್ ಬಟ್ಟೆ, ಎಕ್ಸ್​ರೇ, ಮೊಬೈಲ್‌ ಉಪಕರಣಗಳು,  ವೈದ್ಯಕೀಯ ಉತ್ಪನ್ನಗಳು.

ಅಗ್ಗವಾಗಲಿರುವ ವಸ್ತುಗಳು:

ಎಲೆಕ್ಟ್ರಿಕ್ ವಾಹನ, ಸೈಕಲ್, ಆಟಿಕೆ, ಆಟೋಮೊಬೈಲ್, ಟಿವಿಗಳು, ಎಲ್​ಇಡಿ ಟಿವಿ, ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್, ಜವಳಿ, ಇಂಗು, ಕೋಕೋಮ್, ಜೈವಿಕ ಅನಿಲ ಆಧಾರಿತ ಉತ್ಪನ್ನಗಳು. ಸೀಮೆಂಟ್, ಉಕ್ಕು ಪೂರೈಕೆ.

Donate Janashakthi Media

Leave a Reply

Your email address will not be published. Required fields are marked *