ಬೋಗಸ್‌ ಮತದಿಂದ ಯತ್ನಾಳ್‌ ಗೆಲುವು, ತನಿಖೆಗೆ ಕಾಂಗ್ರೆಸ್‌ ಆಗ್ರಹ

ವಿಜಯಪುರ : ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರ ಗೆಲುವು ಸಂಪೂರ್ಣ ಬೋಗಸ್‌ ಗೆಲುವಾಗಿದ್ದು, ಬೋಗಸ್‌ ಮತದಾನ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಅಬ್ದುಲ್‌ರಜಾಕ ಹೊರ್ತಿ, ವಿಜಯಪುರ ಮತದಾರರ ಪಟ್ಟಿಯಲ್ಲಿ ಅಸಂಬದ್ಧವಾಗಿ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ, ಸಂಬಂಧಿಸಿದ ಆರ್‌ಓಗಳಿಗೆ ಅಖಿತ ದೂರು ಸಲ್ಲಿಸಲಾಗಿದೆ. ಆದರೂ ಸಹ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ ಫಲವಾಗಿ ವಿಜಯಪುರ ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲುವಂತಾಗಿದೆ ಎಂದು ದೂರಿದ್ದಾರೆ.

ಚಿಂಚೋಳಿ ಮೊದಲಾದ ಭಾಗದ ಮತದಾರರನ್ನು ವಿವಿಧ ತಾಂಡಾಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಸಂಬದ್ಧವಾಗಿ ಸೇರ್ಪಡೆ ಮಾಡಲಾಗಿದೆ. ಮೇಲ್ನೋಟಕ್ಕೆ ಬೋಗಸ್‌ ಮತದಾರರ ಸೇಪರ್‍ಡೆಯಲ್ಲಿ ದೊಡ್ಡ ಮಟ್ಟದ ಮೋಸ ನಡೆದಿರುವುದು ಸ್ಪಷ್ಟವಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಮತದಾರರು ವಿಜಯಪುರ ನಗರದ ಬಡಾವಣೆಗಳಲ್ಲಿನ ಕಾಯಂ ನಿವಾಸಿಯಾಗಿಲ್ಲ ಎಂದು ದೂರಿದರು. ವಿಜಯಪುರ ನಗರ ಶಾಸಕರು ಹಾಗೂ ಅವರ ಹಿಂಬಾಲಕರು ಐಎಲ.ಓಗಳನ್ನು ಹೆದರಿಸಿ ಮತದಾರರ ನಕಲಿ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *