ಯಾರಿಗೆ ಬಂತು ಎಲ್ಲಿಗೆ ಬಂತು ‘2014ರ ಸ್ವಾತಂತ್ರ್ಯ’…?

ವೇದರಾಜ ಎನ್‌ ಕೆ

2014 ರ ನಂತರದ ಅಚ್ಛೇದಿನ್/ನ್ಯೂಇಂಡಿಯಾದಲ್ಲಿ ಎದ್ದು ಕಾಣುತ್ತಿರುವ ‘ಥ್ಯಾಂಕ್ಯು’ ಸಂಪ್ರದಾಯದ ಅನುಸಾರ ಮಗದೊಂದು ಥ್ಯಾಂಕ್ಯು ಉತ್ಸವ ನಡೆಯಬೇಕಾಗಿತ್ತು. ಅದು ನಡೆಯಲಿಲ್ಲ. ಆದರೆ ಇದೇ ವೇಳೆಯಲ್ಲಿ 2014ರ ‘ಸ್ವಾತಂತ್ರ್ಯ’ದ  ಸುದ್ದಿ ಹರಡಿತು. ಅದರ ಬೆನ್ನಲ್ಲೇ ವ್ಯಂಗ್ಯಚಿತ್ರಗಳ ಮಹಾಪೂರವೇ ಹರಿದು ಬಂತು. ಈ ವಾರ ಇವುಗಳ ಒಂದು ಇಣುಕು ನೋಟ…

ನವೆಂಬರ್ 8 ಅಚ್ಛೇಧಿನ್‍ ಗಳ ಎರಡೇ ವರ್ಷಗಳಲ್ಲಿ ಕಪ್ಪುಹಣದ ಮೇಲೆ ನಡೆಸಿದ ಅತಿ ದೊಡ್ಡ ’ಮಿಂಚಿನ ದಾಳಿ’ (ಸರ್ಜಿಕಲ್‍ ಸ್ಟ್ರೈಕ್‍)ಯ 5ನೇ ವಾರ್ಷಿಕೋತ್ಸವದ ದಿನ.

ಅವರು ಇಲ್ಲಿ ನೋಟುರದ್ದತಿಯ 5ನೇ ವಾರ್ಷಿಕೋತ್ಸವದಂದು
5 ನಿಮಿಷಗಳ ಮೌನ ಆಚರಿಸಲು ಬಂದಿದ್ದಾರೆ”

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

ಹೌದು, 5ವರ್ಷಗಳ ಹಿಂದೆ ದಿನಗಟ್ಟಲೇ ಬ್ಯಾಂಕುಗಳ/ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತುದರ ನೆನಪಿನಲ್ಲಿ.

ಪಾಪ! ಎಟಿಎಂಗಳಿಗೂ ಆ ದಿನಗಳನ್ನು ನೆನಪಿಸಿಕೊಂಡು ಭಯದಿಂದ ಮೈನಡುಗುತ್ತದಂತೆ!

ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ

500ರೂ, 1000ರೂ. ನೋಟುಗಳನ್ನು ರದ್ದು ಮಾಡಿದ್ದರಿಂದ ಅಡಗಿಸಿಟ್ಟ ಕಪ್ಪು ನೋಟುಗಳನ್ನು ವಿನಿಮಯ ಮಾಡಲಾಗದೆ ಅವು ನಿರರ್ಥಕಗೊಳ್ಳುತ್ತವೆ, ಖೋಟಾ ನೋಟುಗಳ ಹಾವಳಿಯೂ ತಪ್ಪುತ್ತದೆ,  ಭಯೋತ್ಪಾದಕರಿಗೆ ಹಣ ಪೂರೈಕೆಯೂ ನಿಲ್ಲುತ್ತದೆ ಎನ್ನಲಾಗಿತ್ತು.

ಆದರೆ ನವೆಂಬರ್ 8ರಂದು ಅಮಾನ್ಯಗೊಳಿಸಿದ ನೋಟುಗಳಲ್ಲಿ 99.3%ಕ್ಕಿಂತಲೂ ಹೆಚ್ಚು ಬ್ಯಾಂಕುಗಳಿಗೆ ಮರಳಿದವು. ಮರಳಿ ಬರದ 0.7% ಕೂಡ ಕಪ್ಪುಹಣವಲ್ಲ, ಬಹುಪಾಲು ಹಳೆಯ ನೋಟುಗಳನ್ನು ಕ್ಯೂನಲ್ಲಿ ನಿಂತು ವಿನಿಮಯ ಮಾಡಿಕೊಳ್ಳಲಾಗದ ಬಡಜನಗಳದ್ದೇ ಎನ್ನಲಾಗಿದೆ. ಅಂದರೆ ಒಂದೋ ಹೊರಬಂದ ಕಪ್ಪುಹಣದ ಮೊತ್ತ ಸೊನ್ನೆ, ಇಲ್ಲವೇ ಎಲ್ಲ ಕಪ್ಪು ಹಣ ಬಿಳಿಯಾಯ್ತು! ಭಯೋತ್ಪಾದಕರಿಗೂ ತಮ್ಮಬಳಿಯಿದ್ದ ಕಪ್ಪು/ಖೋಟ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಏನೂ ಸಮಸ್ಯೆಯಾಗಲಿಲ್ಲ! ಇದು 5ವರ್ಷಗಳ ನಂತರ ಅದರ ವಿಶ್ಲೇಷಣೆ ಮಾಡುತ್ತಿರುವ ಹಲವರಿಗೆ ಕಂಡು ಬಂದಿರುವ ಸಂಗತಿ.

ಹೊಸ 2000ರೂ.ಗಳ ಖೋಟಾ ನೋಟುಗಳೂ ಸ್ವಲ್ಪ ಸಮಯದಲ್ಲೇ ಕಾಣಿಸಿಕೊಂಡವು ಎನ್ನಲಾಗಿದೆ. ಸ್ವತಃ ಸರಕಾರವೇ ಮಾರ್ಚ್‍ 2019ರಿಂದ ಮಾರ್ಚ್ 2021ರ ನಡುವೆ ಈ ಹೊಸ 2000ರೂ.ಗಳ 1.68 ಲಕ್ಷ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಿತು ಎಂದು ವರದಿಯಾಗಿದೆ.

ಅಂದರೆ ಈ ನವೆಂಬರ್ 8ರಂದು ಕಪ್ಪುಹಣವೂ 5ನೇ ವಾರ್ಷಿಕೋತ್ಸವ ಆಚರಿಸುತ್ತಿರಬಹುದು!

ಅಲೋಕ್‍ ನಿರಂತರ್, ಫೇಸ್‍ ಬುಕ್

ನೋಟುರದ್ಧತಿಯ ‘ಮಿಂಚಿನ ಪ್ರಹಾರ’ ಸಾಧಿಸಿದ್ದೇನು?

ಅದು ಆದಾಯ ತೆರಿಗೆ ತೆರುವವರ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದ 2 -3 ಲಕ್ಷ ಕೋಟಿ ರೂ.ಗಳು ಸರಕಾರದ ಖಜಾನೆಗೆ ಬರುತ್ತವೆ, ನಗದು ಚಲಾವಣೆಯನ್ನು  ಕಡಿಮೆ ಮಾಡಿ ಡಿಜಿಟಲ್ ಅರ್ಥವ್ಯವಸ್ಥೆಯತ್ತ ಸಾಗುತ್ತದೆ, ನಮ್ಮ ಅರ್ಥವ್ಯವಸ್ಥೆಯನ್ನು ಆಧುನೀಕರಿಸುತ್ತದೆ ಎಂದೆಲ್ಲ ಹೇಳಲಾಗಿತ್ತು. ವಿಶ್ಲೇಷಕರ ಪ್ರಕಾರ 5 ವರ್ಷಗಳ ನಂತರ ಕಾಣುತ್ತಿರುವ ವಾಸ್ತವ ಹೀಗಿದೆ:

  • ನೋಟುರದ್ಧತಿಯ ಮೊದಲು ವರ್ಷಕ್ಕೆ 9% ದರದಲ್ಲಿ ನಮ್ಮ ಅರ್ಥವ್ಯವಸ್ಥೆಯಲ್ಲಿ ನಗದಿನ ಪ್ರಮಾಣ ಹೆಚ್ಚುತ್ತಿತ್ತು. ಈಗಲೂ ಅದೇ ದರದಲ್ಲಿ ಹೆಚ್ಚುತ್ತಿದೆ.
  • ನೋಟುರದ್ಧತಿಯ ವೇಳೆಯಲ್ಲಿ ಚಲಾವಣೆಯಲ್ಲಿದ್ದ ನಗದು ಹಣದ ಮೊತ್ತ 5ಲಕ್ಷ ಕೋಟಿ ರೂ. ಈಗ ಅದು 28.5ಲಕ್ಷ ಕೋಟಿ ರೂ.
  • ಜಿಡಿಪಿ ಹೋಲಿಕೆಯಲ್ಲಿ  ನಗದಿನ ಪ್ರಮಾಣ ನೋಟುರದ್ಧತಿಯ ಮೊದಲು 2015-16ರಲ್ಲಿ 6% ಇತ್ತು ಈಗ ಅದು 13.9% . ಅಂದರೆ ನೋಟುರದ್ದತಿಯ ದಿನಗಳ ದೀರ್ಘ ಕ್ಯೂಗಳ ಒಟ್ಟು ಪರಿಣಾಮ ಸೊನ್ನೆಗಿಂತಲೂ ಕಡಿಮೆ.
  • ತೆರಿಗೆದಾರರ ಪ್ರಮಾಣ ಹೆಚ್ಚುವ ಬದಲು ಕಡಿಮೆಯಾಗಿದೆ, 11.9%ದಿಂದ 5%ಕ್ಕೆ ಇಳಿದಿದೆ.
  • ಜಿಡಿಪಿ ಬೆಳವಣಿಗೆ ದರ 2010ರಲ್ಲಿ 8.5%ಇದ್ದ್ದು, 2016ರಲ್ಲಿ 8.25%ಕ್ಕೆ, 2019ರಲ್ಲಿ(ಕೊವಿಡ್‍ ತಟ್ಟುವ ಮೊದಲೇ) 4%ಕ್ಕೆ ಇಳಿಯಿತು. ಕೊವಿಡ್‍ ನಂತರವಂತೂ (-)8%ಕ್ಕೆ ಕುಸಿಯಿತು!

ಪಿ.ಮಹಮ್ಮದ್, ವಾರ್ತಾಭಾರತಿ

ನೋಟುರದ್ಧತಿಯ ಮುಖ್ಯ ಪರಿಣಾಮವೆಂದರೆ ಅರ್ಥವ್ಯವಸ್ಥೆಯಲ್ಲಿ ಅನೌಪಚಾರಿಕ ವಲಯ ಸುಮಾರಾಗಿ ಧ್ವಂಸ ಗೊಂಡಿತು; ಸಣ್ಣ ಮತ್ತು ವಲಯ ಕೂಡ ಭಾರೀ ಹೊಡೆತ ತಿಂದಿತು; ದೇಶದಲ್ಲಿ ಉದ್ಯೋಗಾವಕಾಶ ನಿರ್ಮಾಣ ಮಾಡುವ ಬಹುದೊಡ್ಡ ವಲಯಗಳಿವು ಎಂಬುದು ಗಮನಾರ್ಹ ಎನ್ನುತ್ತಾರೆ ಅರ್ಥಿಕ ತಜ್ಞರು.

ವ್ಯಂಗ್ಯವೆಂದರೆ ಅರ್ಥವ್ಯವಸ್ಥೆಯ ಔಪಚಾರೀಕರಣ ಮತ್ತು ಡಿಜಿಟಲೀಕರಣ ನೋಟುರದ್ಧತಿಯ ಬಹುದೊಡ್ಡ ಸಾಧನೆ ಎಂದು ಆಳುವ ಪಕ್ಷದ ಕಟ್ಟಾ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ಅದೇಕೋ ಇದಕ್ಕಾಗಿ ಸರ್ವೋಚ್ಚ ನಾಯಕರಿಗೆ ‘ಥ್ಯಾಂಕ್ಯು’ ಹೇಳಿಲ್ಲ. ಅದಕ್ಕಾಗಿ ಅನೌಪಚಾರಿಕ ವಲಯದ ನಾಶ, ಅದರಿಂದಾಗಿ ಉದ್ಯೋಗ ನಿರ್ಮಾಣದ ಬಹು ದೊಡ್ಡ ಸ್ರೋತದ ನಾಶ ಎಂದು ತಜ್ಞರೇನೋ ಹೇಳುತ್ತಿದ್ದಾರೆ,  ನೀವು, ಇದಕ್ಕಾಗಿ ಅಳಬೇಡಿ ಎನ್ನುತ್ತಿದ್ದಾರೇನೋ?!

ನಾಚಿಕೆಗೇಡು! ನೋಟುರದ್ಧತಿಯ ಬಗ್ಗೆ ಇನ್ನೂ ಅಳುತ್ತಿದ್ದೀರಾ?”

(ಸತೀಶ ಆಚಾರ್ಯ, ಫೇಸ್‍ಬುಕ್)

***

ಹೌದು, ಅಳುವಂತದ್ದೇನೂ ಆಗಿಲ್ಲ, ಬದಲಿಗೆ ಸಂತೋಷ ಪಡಬೇಕಾಗಿದೆ- ಝಾನ್ಸಿ ರಾಣಿಯಾಗಿ ಅಮೋಘ ನಟನೆ ನೀಡಿದ ಬಾಲಿವುಡ್‍ ತಾರೆಯಂತೆ.

“ಅದು ಸ್ವಾತಂತ್ರ್ಯ ವಾಗಿರಲಿಲ್ಲ, ಭಿಕ್ಷೆಯಾಗಿತ್ತು, ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ “  ಎಂದು ಈಕೆ ಪದ್ಮಶ್ರೀ ಪ್ರಶಸ್ತಿ ಸ್ವೀಕಾರದ ನಂತರ  ಪತ್ರಿಕಾ ಸಂದರ್ಶನವೊಂದರಲ್ಲಿ ಇತಿಹಾಸ  ಪುನರ್ಲೇಖನಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.

ನಾವು, ನಿಜವಾದ ಸ್ವಾತಂತ್ರ್ಯ(2014) ಹೋರಾಟಗಾರರು”

(ಮಿಕಾ ಅಝೀಝ್, ಫೇಸ್‍ಬುಕ್)

ಈ ವ್ಯಂಗ್ಯಚಿತ್ರ  ಹೇಳುವಂತೆ, “ಆರನೇ ಜಾರ್ಜ್ ದೊರೆಯ ಕೃಪೆ! ಆತ ಇಡೀ ಸಾಮ್ರಾಜ್ಯವನ್ನು ಭಿಕ್ಷೆಯಾಗಿ ನೀಡಿದ! ಭಗವಂತನ ಹೆಸರಿನಲ್ಲಿ ಭಾರತ! ಅಲ್ಲಾನ ಹೆಸರಲ್ಲಿ ಪಾಕಿಸ್ತಾನ!”

ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್

“1947ರಲ್ಲಿ ಯಾವ ಯುದ್ಧ ನಡೆಯಿತು?”

ತಮ್ಮ ಟಿಪ್ಪಣಿಗೆ ಸವಾಲು ಹಾಕುವವರಿಗೆ ಈ ಪದ್ಮಶ್ರೀ ತಾರೆ ಪ್ರತಿಸವಾಲು ಹಾಕುತ್ತಾರೆ. ಆದರೆ 2014ರಲ್ಲಿ ಯಾವ ಯುದ್ಧ ನಡೆಯಿತು ಎಂದೇನೂ ಆಕೆ ಹೇಳಿಲ್ಲ.

ಆದರೂ, ಈ ಮನುಷ್ಯ ಯಾವುದಾದರೂ ಯುದ್ಧದ ಕಮಾಂಡರ್ ನಂತೆ ಕಾಣುತ್ತಾರೆಯೇ?

ಈತ ಭಾರತದ ಭಿಕ್ಷಾ ಆಂದೋಲನದ ನೇತೃತ್ವ ಕೊಟ್ಟವರಂತೆ ಕಾಣುತ್ತಾರಲ್ಲವೇ?”

( ಸತೀಶ ಆಚಾರ್ಯ, ಫೇಸ್‍ಬುಕ್)

ಗಾಂಧೀಜಿಯ ಬಗ್ಗೆ, ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂತಹ ‘ನೇರನುಡಿ’ ಯಿಂದ ಬೇಸರವಾಗುತ್ತಿದೆಯೇ? ಅದಕ್ಕೆ ಇವರನ್ನು ದೂರಬೇಡಿ.

ಕೆಲವು ದಿನಗಳ ಹಿಂದೆ ದೇಶದ ರಕ್ಷಣಾ ಮಂತ್ರಿಗಳೇ ಸಾವರ್ಕರ್ ರವರ ಕೃಪಾಭಿಕ್ಷೆಯ ಪ್ರಸ್ತಾಪ ಮಾಡಿ ಅದು ಗಾಂಧೀಜಿಯ ಸಲಹೆಯಂತೆ ನಡೆದದ್ದು ಎಂದು ಹೇಳಿರಲಿಲ್ಲವೇ?  ಇವರು  ಆ ಪರಂಪರೆಯನ್ನು  ಮುಂದುವರೆಸಿದ್ದಾರಷ್ಟೇ ಎಂದು ಕೆಲವು ಇತಿಹಾಸಕಾರರು ಸಮಾಧಾನಪಡಿಸುತ್ತಾರೆ.

“1857, ಅಸಹಕಾರ, ದಾಂಡೀಯಾತ್ರೆ, ಕ್ವಿಟ್‍ ಇಂಡಿಯ, ಆಝಾದ್‍ ಹಿಂದ್‍ ಸೇನೆ ಇತ್ಯಾದಿಯಿಂದ ನಮಗೆ ಎಳ್ಳಷ್ಟೂ ಚಿಂತೆಯಾಗಲಿಲ್ಲ. ನಮ್ಮ ಬುಡವನ್ನು ಅಲ್ಲಾಡಿಸಿದ್ದು, ಕ್ಷಮಾಭಿಕ್ಷೆ ಕೇಳಿ ಎಂದು ಜನಗಳಿಗೆ ಹೇಳಿದ ನಿಮ್ಮ ಕಾರ್ಯತಂತ್ರ”

( ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಆದರೂ ಕೃಪಾಭಿಕ್ಷೆ ಕೇಳಲು ನಿರಾಕರಿಸಿ ಬ್ರಿಟಿಶರ ನೇಣುಗಂಬಗಳನ್ನೇ ಆರಿಸಿಕೊಂಡವರಿಗೆ  ‘ಅದು ಭಿಕ್ಷೆ’ಯಾಗಿತ್ತು ಎಂದು ಹೇಳಬಹುದೇ?

ಭಿಕ್ಷೆ? ಅದೊಂದು ಪ್ರಶಸ್ತಿಯಾಗಿತ್ತು ಎಂದು ನೀವು ಭಾವಿಸುತ್ತೀರಾ?”

(ಅಲೋಕ್‍ ನಿರಂತರ್, ಫೇಸ್‍ಬುಕ್)

ನಿಜ, ಇವರು’ 2014ರ ಸ್ವಾತಂತ್ರ್ಯ’ ಹೋರಾಟ ನಡೆಸಿದವರಿಂದ ಪ್ರಶಸ್ತಿ ಪಡೆದ ನಂತರ  ಈ ಟಿಪ್ಪಣಿ ಮಾಡಿದ್ದಾರೆ. ಆದರೆ, ಭಗತ್ ಸಿಂಗ್‍ ರಂತಹ ಯುವಜನರು ಬ್ರಿಟಿಶರ ನೇಣುಶಿಕ್ಷೆಯನ್ನು ತಮ್ಮ ಹೋರಾಟಕ್ಕೆ ಸಿಕ್ಕಿದ ಪ್ರಶಸ್ತಿ ಎಂದು ಸಂತೋಷದಿಂದ ಸ್ವೀಕರಿಸಿದ್ದೂ ಇತಿಹಾಸ ತಾನೇ?

ಅದರೂ ಹಲವರಿಗೆ ಗೊಂದಲ. ‘2014ರ ಸ್ವಾತಂತ್ರ್ಯ’ದವರೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಇವರು ಭಿಕ್ಷೆಯ ಅಮೃತ ಮಹೋತ್ಸವ ಆಚರಿಸಬೇಕೆಂದಿದ್ದಾರೆಯೇ?

ಮಂಜುಲ್, ಫಸ್ಟ್ ಪೋಸ್ಟ್

ಇಲ್ಲ, ಇದು ಮೈಕ್‍ ಟೆಸ್ಟಿಂಗ್ ಅಷ್ಟೇ, ಕಥನ ರೂಪೀಕರಿಸುವಾಗಿನ ಪರೀಕ್ಷಣೆ ಎಂದೊಬ್ಬ ಟ್ವಿಟರಿಗರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ಅವರು ಈ ಟಿಪ್ಪಣಿ ಮಾಡಿದ ಪತ್ರಿಕಾ ಸಂದರ್ಶನದ ವೇಳೆ ಎದುರಲ್ಲಿದ್ದ ಹಲವು ಸೂಟುಬೂಟಿನವರು  ಅದಕ್ಕೆ ಚಪ್ಪಾಳೆ ತಟ್ಟಿದರು ಎಂಬ ಸಂಗತಿಯತ್ತ  ಪ್ರಖ್ಯಾತ ಟಿವಿ ಪತ್ರಕರ್ತ ರವೀಶ್‍ ಕುಮಾರ್‍ ಗಮನ ಸೆಳೆದಿದ್ದಾರೆ.

ಆದರೂ, ಆಕೆಯ ಮೇಲೆ  ಈಗ ಸಾಮಾನ್ಯವಾಗಿರುವ ರಾಜದ್ರೋಹದ ಕೇಸು  ಹಾಕಬೇಕು, ಏನಿಲ್ಲೆಂದರೂ ಆಕೆಗೆ ಇತ್ತಿಚೆಗಷ್ಟೇ ಕೊಟ್ಟ ಪ್ರಶಸ್ತಿಯನ್ನು ವಾಪಾಸು ಪಡೆಯಬೇಕು ಎಂಬ ಕೂಗು ಅಲ್ಲಲ್ಲಿ ಕೇಳಬರುತ್ತಿದೆ.

ಆದರೆ ಅದು ಸರಿಯಲ್ಲ ಎನ್ನುತ್ತದೆ ಈ ವ್ಯಂಗ್ಯಚಿತ್ರ.

ಅಸಂಭವ!.. ಪ್ರಶಸ್ತಿಯ ಹಕ್ಕನ್ನು ಮೇಡಮ್‍ ಎಲ್ಲಕ್ಕೂ ಮೊದಲೇ ನೆರವೇರಿಸಿದ್ದಾರೆ,
ಆದರೂ ಮನಸಾರೆ ಕ್ಷಮಿಸಲಾರೆ ಎಂದೇನಾದರೂ ಹೇಳಿಬಿಡಬಹುದೇನೋ!”

(ಶೇಖರ್ ಗುರೇರ, ಕಾರ್ಟೂನಿಸ್ಟ್ ಕ್ಲಬ್‍ ಆಫ್‍ ಇಂಡಿಯ)

ಹೌದು, ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಮಾಡಿದ  ಟಿಪ್ಪಣಿ  ತಪ್ಪು, ಗಾಂಧೀಜಿ ಅಥವ ಗೋಡ್ಸೆ ಬಗ್ಗೆ ಹೇಳಿರುವುದು ಕೆಟ್ಟ ಮಾತು, ಆ ಬಗ್ಗೆ ಅವರು ಕ್ಷಮೆ ಕೇಳಿದ್ದಾರಾದರೂ, ಅದನ್ನು ನಾನು ಮನಸಾರೆ ಕ್ಷಮಿಸಲಾರೆ ಎಂದು ಪ್ರಧಾನಿಗಳು ಟ್ವೀಟ್‍ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ಟಿಕೆಟನ್ನು ಹಿಂದಕ್ಕೆ ಪಡೆಯಲಿಲ್ಲ, ಅವರು ಎಂಪಿಯಾಗಿ ತನ್ನ ಇಂತಹ ಟಿಪ್ಪಣಿಗಳನ್ನು ಮುಂದುವರೆಸಿದ್ದಾರೆ  ಎಂಬುದನ್ನು ಇದು ನೆನಪಿಸುತ್ತದೆ.

ಆದರೂ ಟೀಕಾಕಾರರ ಕೀಟಲೆ ನಿಂತಿಲ್ಲ. ಹಲವು ರಾಜ್ಯಗಳಲ್ಲಿ ಅವರ ವಿರುದ್ಧ ಎಫ್‍ಐಆರ್ ಗಳು ದಾಖಲಾಗಿವೆಯಂತೆ.

ಮೇಡಂ ಕೇಳಬಯಸುತ್ತಾರೆ…. ತನ್ನನ್ನು ದಸ್ತಗಿರಿ ಮಾಡಿದರೆ
ಸ್ವಾತಂತ್ರ್ಯ’ ಕ್ಕಾಗಿ ಹೋರಾಟ ನಡೆಸಬೇಕಾದೀತೇ,
ಅಥವ ಅದು ‘ಭಿಕ್ಷೆ’ಯಾಗಿ ಸಿಗಬಹುದೇ …??

(ಮಂಸೂರ್ ನಖ್ವಿ, ದೈನಿಕ ಭಾಸ್ಕರ್)

ಅದೇನೇ ಇರಲಿ, ಆಳುವ ಪಕ್ಷದವರಿಗಂತೂ ಹೊಸ ನಿರೀಕ್ಷೆ ಮೂಡಿದೆ.

ಖಂಡಿತ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ತಕ್ಕವರು”,

ಪಿ.ಎಂ. ಗೂ”.

(ಸಜಿತ್‍ ಕುಮಾರ್, ಡೆಕ್ಕನ್‍ ಕ್ರಾನಿಕಲ್)

ಆದರೆ, ಇವರ ಸ್ವಾತಂತ್ರ್ಯಕ್ಕೆ ಏಳು ವರ್ಷಗಳಾಗಿರುವಾಗ,  ನಮ್ಮ ಭವಿಷ್ಯದ ನಾಗರಿಕರನ್ನು ಬಾಧಿಸುವ ಪ್ರಶ್ನೆ ಬೇರೆಯೇ.

ನಮಗೆ ಮೋಸ ಮಾಡುತ್ತಿದ್ದಾರೆ. ಈ ಎರಡನೇ ಸ್ವಾತಂತ್ರ್ಯ ದಿನದ ರಜೆ ಕೊಡುತ್ತಲೇ ಇಲ್ಲ”

(ಕೀರ್ತೀಶ್, ಬಿಬಿಸಿ ನ್ಯೂಸ್‍ ಹಿಂದಿ)

***

ಈ ನಡುವೆ ದಿಲ್ಲಿ ಗಡಿಗಳಲ್ಲಿ ತಮ್ಮ ಹೋರಾಟಕ್ಕೆ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ರೈತರಂತೂ ಭಿಕ್ಷೆ ಕೇಳಲು ಸಿದ್ಧರಿಲ್ಲ.

ಭಿಕ್ಷೆ ಬೇಡ, ನಮಗೆ ನಮ್ಮ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಬೇಕು”

( ಸುಭಾನಿ, ಡೆಕ್ಕನ್‍ ಕ್ರಾನಿಕಲ್)

ಕೊನೆಯದಾಗಿ, ಯಾರಿಗೆ ಬಂತು ಎಲ್ಲಿಗೆ ಬಂತು…. ಯಾರ ಎಸ್‍.ಯು.ವಿ.ಯ ಚಕ್ರಕ್ಕೆ ಬಂತು….  ‘2014ರ ಸ್ವಾತಂತ್ರ್ಯ’…?

ತ್ರಿಪುರಾ ಹಿಂಸಾಚಾರ: ಕೋಮು ಹಿಂಸಾಚಾರದ ಬಗ್ಗೆ ಮಾತಾಡುವ ಸುಪ್ರಿಂ ಕೋರ್ಟ್‍ ವಕೀಲರು, ಪತ್ರಕರ್ತರು ಮತ್ತು ನೂರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಯು.ಎ.ಪಿ.ಎ.  ಮತ್ತು

ಲಖಿಂಪುರ್ ಮೇಲೆ ನೀವಿನ್ನೂ ಕಾಲೆಳೆಯುತ್ತಿರುವುದು ಏಕೆ?” ಉತ್ತರ ಪ್ರದೇಶ ಕಾನೂನುವ್ಯವಸ್ಥೆಗೆ ಸುಪ್ರಿಂ ಕೋರ್ಟ್ ಪ್ರಶ್ನೆ

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

Donate Janashakthi Media

Leave a Reply

Your email address will not be published. Required fields are marked *