ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇತ್ತೀಚೆಗಷ್ಟೆ ಪ್ರಕಟಣೆ ಆಗಿದ್ದೂ, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅತ್ತ ಕಳೆದೊಂದು ದಶಕದಿಂದ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಾರ್ಟಿ ಹೀನಾಯ ಸೋಲನ್ನು ಅನುಭವಿಸಿತು. ಟ್ರಾಶ್
ಕೇಜ್ರಿವಾಲ್ ಸರ್ಕಾರ ಎಸಗಿದ್ದ ಭ್ರಷ್ಟಾಚಾರವೇ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಸೋಲಿಗೆ ನೇರ ಕಾರಣವಾಯಿತು. ಅದರ ಜೊತೆಗೆ ದೆಹಲಿಯಲ್ಲಿನ ಯಮುನಾ ನದಿಯ ಅನೈರ್ಮಲ್ಯತೆಯೂ ಸಹ ಆಪ್‌ನ ಕೆಲ ಮತಗಳನ್ನು ಕಸಿದುಕೊಂಡಿತು.
ಇದನ್ನೂ ಓದಿ: ಹಿಂದುತ್ವ ಶಕ್ತಿಗಳ ವಿರುದ್ದ ಹೋರಾಟದಿಂದ ಭಾರತ ಉಳಿಯಲು ಸಾಧ್ಯ: ಯು. ಬಸವರಾಜ
ಅತ್ತ ಇದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಚುನಾವಣೆಯ ನಂತರವೂ ಸಹ ಆಪ್ ಅನ್ನು ಟ್ರೋಲ್ ಮಾಡಲಾರಂಭಿಸಿತು. ಯಮುನಾ ನದಿಗೆ ಟ್ರಾಶ್ ಸ್ಕಿಮ್ಮರ್ ಮಷಿನ್ ಅನ್ನು ಇಳಿಸುವ ಮೂಲಕ ಕೇಜ್ರಿವಾಲ್ ಸರ್ಕಾರ ಹತ್ತು ವರ್ಷದಲ್ಲಿ ಮಾಡದ್ದನ್ನು ಕೇವಲ ಒಂದೇ ವಾರದಲ್ಲಿ ಬಿಜೆಪಿ ಮಾಡಿದೆ ಎಂದು ಬರೆದುಕೊಂಡಿತ್ತು.
ಆದರೆ ಅಸಲಿಯತ್ತಿಗೆ 2016ರಲ್ಲಿಯೇ ಕೇಜ್ರಿವಾಲ್ ಸರ್ಕಾರ ಯಮುನಾ ನದಿ ಸ್ವಚ್ಚತೆಗೆ ಟ್ರಾಶ್ ಸ್ಕಿಮ್ಮರ್‌ಗಳನ್ನು ಬಳಸಿತ್ತು. ಈ ಕುರಿತ ಹಳೆ ಟ್ವೀಟ್ ಒಂದನ್ನು ಹಂಚಿಕೊಂಡಿರುವ ಆಪ್‌ನ ಕಾರ್ಯಕರ್ತರೊಬ್ಬರು ಪ್ರಚಾರಕ್ಕಾಗಿ ಬಿಜೆಪಿ ಮಾಡಿದ ಶೋಕಿಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ನೋಡಿ: ಪ್ರೇಮಿಗಳ ದಿನದ ವಿಶೇಷ | ನೋಡಿದೇನೆ ಪ್ರೌಢಸುಂದರಿ | ಸಂಗೀತ, ಗಾಯನ : ಪಿಚ್ಚಳ್ಳಿ ಶ್ರೀನಿವಾಸ Janashakthi Media