ಯಲಗಟ್ಟಾ ಪ್ರೌಢಶಾಲೆ ಮುಖ್ಯಶಿಕ್ಷಕ ಶಾಲೆಗೆ ಗೈರು : ಕ್ರಮಕ್ಕೆ ಒತ್ತಾಯ

ಲಿಂಗಸುಗೂರು: ತಾಲೂಕಿನ ಯಲಗಟ್ಟಾ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗನಗೌಡ ಪಾಟೀಲ್ ಶಾಲೆಗೆ ಬರದೆ ಹಾಜರಿಯಲ್ಲಿ ಮಾತ್ರ ಹಾಜರಿಯಾಗಿ ಶಾಲೆಗೆ ಗೈರು ಆಗುತ್ತಿದ್ದು, ಸದರಿ ಶಿಕ್ಷಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಒತ್ತಾಯಿಸಿ ಆಗಸ್ಟ್-20 ರಂದು ಬಿಇಓ ರವರಿಗೆ ಮನವಿ ಸಲ್ಲಿಸಿದ್ದಾರೆ.

ಯಲಗಟ್ಟಾ ಪ್ರೌಢಶಾಲೆಯಲ್ಲಿ 351 ವಿದ್ಯಾರ್ಥಿಗಳ ಸಂಖ್ಯೆ ಇದ್ದು, ಸದ್ಯ 5 ಜನ ಶಿಕ್ಷಕರು ಇದ್ದಾರೆ. 7ಜನ ಶಿಕ್ಷಕರ ಕೊರತೆಯಿದೆ ಅದರಲ್ಲಿ ಮುಖ್ಯಶಿಕ್ಷಕ ಎನ್ನುವ ನಾಗನಗೌಡ ಪಾಟೀಲ್ ಸದರಿ ಶಾಲೆಗೆ ಕಳೆದ 3ವರ್ಷಗಳ ಹಿಂದೆ ಶಾಲೆಗೆ ಬಂದಿದ್ದಾನೆ. ಅಲ್ಲಿಂದ ಇಲ್ಲಿಯವರೆಗೂ ಶಾಲೆಗೆ ಸರಿಯಾಗಿ ಬರದೇ ಪಾಠ ಬೋಧನೆಯನ್ನು ಮಾಡಿರುವುದಿಲ್ಲ. ಮುಖ್ಯಶಿಕ್ಷಕರೆ ಬಾರದಿದ್ದರೆ ಉಳಿದ ಶಿಕ್ಷಕರು ಕೆಲಸ ಹೇಗೆ ನಿಭಾಯಿಸುವರೊ ತಿಳಿಯದಾಗಿದೆ ಎಂದರು.

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಎಸ್‌ಎಫ್‌ಐ ಪ್ರತಿಭಟನೆ

ಈತ ಶಾಲೆಗೆ ಸೇರಿದಾಗಿನಿಂದ ತನ್ನ ಮನಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕದಲ್ಲಿ ತಾನು ಬಿಟ್ಟ ದಿನಗಳನ್ನು ಸಂಪೂರ್ಣವಾಗಿ ಸಹಿಯನ್ನು ರಾಜಾರೋಷವಾಗಿ ಮಾಡುತ್ತಾನೆ. ಶಾಲೆಗೆ ಬಾರದಿರುವುದರಿಂದ ಶಾಲಾ ಮಕ್ಖಳಿಗೆ ವಿದ್ಯಾಭ್ಯಾಸ ಕುಂಠಿತಗೊಂಡಿರುತ್ತದೆ ಎಂದು ಪೋಷಕರ ಮಾತಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಲ್ಲಾಟವಾಡುತ್ತಿರುವುದರಿಂದ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ನಿಷ್ಕಾಳಜಿ ಮಾಡುತ್ತಿರುವ ಮುಖ್ಯಗುರುಗಳಾದ ನಾಗನಗೌಡನ ಮೇಲೆ ಕೂಡಲೇ ಶಿಸ್ತಿನಕ್ರಮ ಜರುಗಿಸಬೇಕು ಎಂದರು. ಸದರಿ ಶಾಲೆಯ ಸಿಆರ್‌ಸಿಯವರು ಇದ್ದು ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

ಕೂಡಲೇ ಮುಖ್ಯಗುರುಗಳು ಹಾಗೂ ಸಿಆರ್ ಸಿಯವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದರೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಸೇರಿದಂತೆ ಶಾಲೆಗೆ ಬೀಗಹಾಕಲಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ನಿಂಗಪ್ಪ, ನಾಗಪ್ಪ ಕಮಲದಿನ್ನಿ, ಚಂದಾಹುಸೇನ, ಹುಸೇನಪಾಷಾ, ಅಣ್ಣಯ್ಯ, ಬಸವರಾಜ ಶಿವಶಂಕರ ಸೇರಿದಂತೆ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *