ಮಧ್ಯಪ್ರದೇಶ: ಕೊಲೆ ಪ್ರಕರಣವೊಂದರಲ್ಲಿ ಪೊಲೀಸರ ದುರುದ್ದೇಶಪೂರಿತ ಕಾನೂನು ಕ್ರಮಕ್ಕೆ ತುತ್ತಾದ ಪರಿಶಿಷ್ಟ ಪಂಗಡ(ಎಸ್.ಟಿ.)ಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿಯನ್ನು ದೋಷಮುಕ್ತಗೊಳಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಅವರಿಗೆ ₹42 ಲಕ್ಷ ಪರಿಹಾರ ಒದಗಿಸವಂತೆ ಸರ್ಕಾರಕ್ಕೆ ಸೂಚಿಸಿದೆ.
ಭೋಪಾಲ್‌ನ ಗಾಂಧಿ ವೈದ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ, ಗೊಂಡ ಬುಡಕಟ್ಟು ಸಮುದಾಯದ ಚಂದ್ರೇಶ್ ಮಾರ್ಸ್ಕೋಲ್ ಮಧ್ಯಪ್ರದೇಶದ ಬಾಲ್ಘಾಟ್ ಜಿಲ್ಲೆಯಲ್ಲಿ ವಾಸವಾಗಿದ್ದರು. 2009ರಲ್ಲಿ ಭೂಪಾಲ್ ನ್ಯಾಯಲಯದ ತೀರ್ಪಿಗೆ ತಪಿಸ್ಥತ ಎಂದು ಜೈಲಿನಲ್ಲಿದ್ದ. ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 13 ವರ್ಷಗಳಾದ ನಂತರ ನಿರಪರಾಧಿಯೆಂದು ಭೂಪಾಲ್ ಕಾರಗೃಹದಿಂದ ಬಿಡುಗಡೆ ಹೊಂದಿದ್ದಾನೆ.
ಮೇಲ್ಮನವಿದಾರರಾಗಿರುವ ಆರೋಪಿಯನ್ನು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ತನಿಖೆ ನಡೆಸಿದ್ದು ಅವರ ವಿರುದ್ಧದ ಪ್ರಕರಣ ದುರುದ್ದೇಶಪೂರಿತವಾಗಿದೆ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸುನಿತಾ ಯಾದವ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದಾರೆ.
ಚಂದ್ರೇಶ್ ಮಾರ್ಸ್ಕೋಲ್ 2008ರಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಪೂರ್ವಗ್ರಹಪೀಡಿತವಾದ, ದಿಕ್ಕುತಪ್ಪಿಸುವ ಕೀಳುತನವೇ ತುಂಬಿದ ತನಿಖೆಯನ್ನು ಹಾಗೂ ಕೇಡಿನ ವಿಚಾರಣೆಯನ್ನು ಈ ಪ್ರಕರಣವು ತೋರಿಸುತ್ತದೆ. ಪೊಲೀಸರು ಅರ್ಜಿದಾರರನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲೆಂದೇ ಪ್ರಕರಣದ ತನಿಖೆ ನಡೆಸಿದ್ದಾರೆ. ಆ ಮೂಲಕ ಬಹುಶಃ ನೈಜ ಅಪರಾಧಿಯಾದ ಪ್ರಾಸಿಕ್ಯೂಷನ್ ಸಾಕ್ಷಿ (ಡಾ.ಹೇಮಂತ್ ವರ್ಮಾ) ಯನ್ನು ಉದ್ದೇಶಪೂರ್ವಕವಾಗಿ ರಕ್ಷಿಸಿದಂತೆ ಕಂಡು ಬರುತ್ತದೆ. ಇದರಲ್ಲಿ ನಿಜವಾದ ಅಪರಾಧಿಗಳು ಪ್ರಾಸಿಕ್ಯೂಷನ್ ಸಾಕ್ಷಿ ಮತ್ತು ಪೊಲೀಸರು” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ನ್ಯಾಯಾಲಯದ ಆದೇಶದ 90 ದಿನಗಳಲ್ಲಿ ಚಂದ್ರೇಶ್ ಮಾರ್ಸ್ಕೋಲ್‌ಗೆ ರೂ 42 ಲಕ್ಷ ಪರಿಹಾರವನ್ನು ಪಾವತಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿತು. ವಿಫಲವಾದರೆ ಪಾವತಿಸುವವರೆಗೆ ವರ್ಷಕ್ಕೆ ಶೇಕಡ 9 ಬಡ್ಡಿದರ ವಿಧಿಸಲಾಗುತ್ತದೆ.
“ಆಗಸ್ಟ್ 25, 2008 ರಂದು ಅವರ ಬಂಧನದ ನಂತರ, ಮೇಲ್ಮನವಿದಾರನು ನಿರಂತರವಾಗಿ ಜೈಲಿನಲ್ಲಿಯೇ ಇದ್ದನು, ಮೊದಲು ವಿಚಾರಣಾಧೀನ ಕೈದಿಯಾಗಿ ಮತ್ತು ನಂತರ ಅಪರಾಧಿಯಾಗಿ 13 ವರ್ಷ ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಂಡಿದ್ದಾರೆ. ಬಂಧಿಯಾಗುವಾಗ ಅವರಿಗೆ 23 ವರ್ಷ ವಯಸ್ಸು, ಈಗ ಅವನಿಗೆ 36 ವರ್ಷ. ಯಾವ ವಿತ್ತೀಯ ಪರಿಹಾರವು ಆತನು ಕಳೆದುಕೊಂಡ ಅಥವಾ ಆತ ಸಾಧಿಸಬೇಕಾದ ಸಮಯನ್ನು ಮತ್ತೊದಗಿಸುವುದಿಲ್ಲ. ದುರದ್ದೇಶಪೂರಿತ ತನಿಖೆಯಲ್ಲಿ ಒಬ್ಬ ನಿರಪರಾಧಿಯನ್ನು ಹಾಗೂ ಸತ್ಯವನ್ನು ಬಲಿ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಹಿಂದುಳಿದ ಸಮುದಾಯ, ಬುಡಕಟ್ಟು ಜನಾಂಗದವರು ಎದುರಿಸುತ್ತಿರುವ ಅವಮಾನ, ತಾರತಮ್ಯ, ಹಿಂಸೆ ಅಪಾರ ಎಂದು ನ್ಯಾಯಲಯ ಗಮನಿಸಿದೆ.
ಹೈಕೋರ್ಟ್ ಕೂಡ ಪ್ರಾಸಿಕ್ಯೂಷನ್ ಹಾಗು ಪೋಲಿಸರನ್ನು ಛೀಮಾರಿ ಹಾಕಿದೆ. ಇದು ಮೇಲ್ಮನವಿದಾರ ದೃಷ್ಟಿಕೋನದಿಂದ ಅಪರಾಧವನ್ನು ತನಿಖೆ ಮಾಡಲಿಲ್ಲ. ಪೋಲಿಸ್ ನಡವಳಿಕೆಯು ದುರುದ್ದೇಶಪೂರಿತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಮೇಲ್ಮನವಿದಾರನು ಮಾಡದ ಅಪರಾಧಕ್ಕಾಗಿ ಅಥವಾ ಡಾ ವರ್ಮಾ ಅವರನ್ನು ರಕ್ಷಿಸುವ ಉದ್ದೇಶದಿಂದ ಅಪರಾಧಿಯ ಶಿಕ್ಷೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ತನಿಖೆ ಮಾಡಲಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.