ಬಾಲ್ವೇಶ್ವರ: ಬೆಂಗಳೂರಿನಲ್ಲಿ ಮೃತಪಟ್ಟ ಒಡಿಶಾದ ವ್ಯಕ್ತಿಯ ಶವಪೆಟ್ಟಿಗೆ ಮೇಲೆ ತಪ್ಪಾದ ಚೀಟಿ ಅಂಟಿಸಿದ್ದೂ, ಬೇರೊಬ್ಬ ವ್ಯಕ್ತಿಯ ಮೃತದೇಹ ಸ್ವೀಕರಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಆರೋಪಿಸಿರುವ ಘಟನೆ ನಡೆದಿದೆ. ತಪ್ಪು
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಕೇಶ್ ಶಾ (21) ಆಗಸ್ಟ್ 15 ರಂದು ವಿದ್ಯುತ್ ಅವಘಢದಿಂದ ಮೃತಪಟ್ಟಿದ್ದರು.
ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದ ಮತ್ತೊಬ್ಬ ವ್ಯಕ್ತಿಯ ಮೃತದೇಹದೊಂದಿಗೆ ರಾಕೇಶ್ ಅವರ ಮೃತದೇಹವನ್ನೂ ಒಂದೇ ಆಯಂಬ್ಯುಲೆನ್ಸ್‌ನಲ್ಲಿ ಸಾಗಿಸಲಾಗಿತ್ತು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ| ಕಥುವಾದಲ್ಲಿ ಮೇಘಸ್ಫೋಟ; 4 ಜನ ಸಾವು
ರಾಕೇಶ್ ಅವರ ಮೃತದೇಹವೆಂದು ಗುರುತು ಮಾಡಲಾಗಿದ್ದ ಶವಪೆಟ್ಟಿಗೆಯನ್ನು ಮುಲಿಸಿಂಗ್ ಗ್ರಾಮದಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಆಯಂಬುಲೆನ್ಸ್ ಭಾನುವಾರ ಸಿಲಿಗುರಿಗೆ ತೆರಳಿದೆ. ಆದರೆ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿರುವ ಮೃತದೇಹವು ರಾಕೇಶ್ ಅವರದ್ದಲ್ಲ ಎಂದು ಗೊತ್ತಾಗಿದೆ.
ಕೂಡಲೇ, ಶವಪೆಟ್ಟಿಗೆಯನ್ನು ರವಾನಿಸಲು ವ್ಯವಸ್ಥೆ ಮಾಡಿದ ಕಂಪನಿಯನ್ನು ಸಂಪರ್ಕಿಸಿ, ಸಿಲಿಗುರಿಗೆ ತೆರಳುತ್ತಿದ್ದ ಆಯಂಬುಲೆನ್ಸ್ ಅನ್ನು ಹಿಂದೆ ಕರೆಸಲಾಯಿತು.
ಡಿಸ್‌ಚಾರ್ಜ್ ಪಾಯಿಂಟ್‌ನಲ್ಲಿ ತಪ್ಪು ಚೀಟಿಗಳನ್ನು ಅಂಟಿಸಿದ್ದರಿಂದ ಈ ಅವ್ಯವಸ್ಥೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಚುನಾವಣಾ ಆಯೋಗ ಮತ್ತು ವಿಶ್ವಾಸಾರ್ಹತೆ ದೂರ ಬಲು ದೂರ… Janashakthi Media
