ಶಿಕಾರಿಪುರ : ನಗರದ ಪುರಸಭೆ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿಯು, ಪೌರಾಡಳಿತ ನಿರ್ದೇಶನಾಲಯ, ಸ್ವಚ್ ಭಾರತ್ ಮಿಷನ್, ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ರಂಗಸ್ವಾಮಿ ಕೆ. ಅವರು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪಿ) ಯು ಸ್ವಾಯತ್ತ ಸಂಸ್ಥೆಯಾಗಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಸಂಸ್ಥೆಯು ಪರಿಸರಕ್ಕೆ ಪೂರಕವಾದ ವಿಷಯಗಳ ಕುರಿತು ಸಂಶೋಧನೆ ಹಾಗೂ ಅಧ್ಯಯನ ಹಮ್ಮಿಕೊಳ್ಳುವುದರ ಜೊತೆಗೆ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ವಿವಿಧ ತರಬೇತಿಗಳನ್ನು ಆಯೋಜಿಸುವುದರ ಮೂಲಕ ಪರಿಸರ ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ತರಬೇತಿಯ ಮಹತ್ವ ಹಾಗೂ ಕಸವನ್ನು ನಿರ್ವಹಣೆ ಮಾಡಲು ಸರ್ಕಾರ ಕೋಟ್ಯಾಂತರ ವೆಚ್ಚವನ್ನು ಮಾಡುತ್ತಿದೆ, ಆದರೆ ಕಸದಿಂದಲೇ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕತೆಯಲ್ಲಿ ಸಧೃಡತೆಯನ್ನು ಸಾಧಿಸಬೇಕಾದರೆ ಅದು ಸರ್ಕಲ್ಯ ಎಕಾನಮಿ ಇಂದ ಮಾತ್ರ ಸಾಧ್ಯವೆಂದು ತರಬೇತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ತಿಳಿಸಿದರು. ನಂತರ ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀ ಭರತ್ ರವರು ಮಾತನಾಡಿ ಶಿಕಾರಿಪುರವು ತ್ಯಾಜ್ಯ ನಿರ್ವಹಣೆಯನ್ನು ಉತ್ತಮವಾದ ರೀತಿಯಲ್ಲಿ ನಿರ್ವಹಣೆಯನ್ನುಮಾಡುವುದರ ಮೂಲಕ ಮಾದರಿಯಾಗಬೇಕು ಇದಕ್ಕೆ ಸೂಕ್ತ ರೀತಿಯ ಸಹಕಾರ ನಮ್ಮ ಮೇಲಾಧಿಕಾರಿಗಳಿದ ಯಾವಾಗಲು ಸಿಗುತ್ತದೆ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿದ ಅಧಿಕಾರಿಗನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ : ಶಿವಮೊಗ್ಗ | ತಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗೊಂಳಿಗೆ ಕೈ ಜೋಡಿಸಿ – ಸಂಪತ್ ಸಿ ಎಂ
ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ದಿಂದ ಆಗಮಿಸಿದ್ದ ವಿಜಯಲಕ್ಷ್ಮಿ, ತರಬೇತಿ ಸಂಯೋಜಕರು ಸ್ವಚ್ಛ ಸರ್ವೇಕ್ಷಣಾ 2.0 ಕುರಿತು ಹಾಗೂ ತರಬೇತಿಯನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು.
ಸಿ ಫ್ ಇಂಡಿಯ ಸಂಸ್ಥೆಯ ಸಂಪತ್ ಸಿ.ಎಂ. ಮಾತನಾಡಿ : ತ್ಯಾಜ್ಯದ ಗುಣಲಕ್ಷಣಗಳು ಅದರಲ್ಲೂ ರೇಖೀಯ ಆರ್ಥಿಕತೆ, ಮರುಬಳಕೆಯ ಆರ್ಥಿಕತೆ, ವೃತ್ತಕಾರದ ಆರ್ಥಿಕತೆಯನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವ ರೀತಿಯನ್ನು ಸವಿವಾರವಾಗಿ ವಿವರಿಸುತ್ತ, ಜವಳಿ ತ್ಯಾಜ್ಯ ಎಂದರೆ ಇದು ಮುಂದಿನದಿನಗಳಲ್ಲಿ ನಮಗೆ ಮಾರಕ ಹೇಗೆ ಇದನ್ನಾರಿತ ನಾವು ಹೆಗೆ ಮೂಲದಿಂದಲೇ ಬಟ್ಟೆಗಳು, ಭೂ ಭರ್ತಿಗೆ ಸೇರುವದನ್ನು ತಡೆಯುತ್ತ, ಅದನ್ನೂ ವ್ಯವಸ್ಥಿತ ರೀತಿಯಲ್ಲಿ, ಪುನರ್ ಉಪಯೋಗ, ಮರುಬಳಕೆ, ಮರುಮೌಲ್ಯ ಕೊಡಲು, ನಮ್ಮ ನಡುವೆ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಮುಂದಿನ ದಿನಗಳಲ್ಲಿ ನಮ್ಮ ಶಿಕಾರಿಪುರದಲ್ಲಿಯೇ ನಿರ್ಮಿಸಲಾಗುವ, ವಸ್ತುಗಳ ಪುನಃಪ್ರಾಪ್ತಿ ಸೌಲಭ್ಯ ಕೇಂದ್ರದ ಸಮರ್ಪಕ ನಿರ್ವಹಣೆಯನ್ನು ಹೇಗೆ ಮಾಡಬಹುದು, ಅದರ ಕ್ರಮಗಳೇನು ಎಂದು ಸಂಪೂರ್ಣವಾಗಿ ಸಾಕ್ಷ್ಯಚಿತ್ರಗಳ ಜೊತೆಯಲ್ಲಿ ಚಟುವಟಿಕೆ ತುಂಬಿದ ಕಾರ್ಯಗರಕ್ಕೆ ಶಿಕಾರಿಪುರದ ಪುರಸಭೆಯ environmental engeniors, health inspectors, community ಮೊಬೈಲೀಜ್ರ್ಸ್ ಅವರು ಸಹ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಮುಂದಿನ ಹೇಗೆ ಕಾರ್ಯನಿರ್ವಹಿಸಬೇಕು ಎಂದು ಸಿಬ್ಬಂದಿಗೆ ತಿಳಿಸಿದರು.

ತರಬೇತಿಯಲ್ಲಿ ಸಂಸ್ಕೂಲ ವ್ಯಕ್ತಿಗಳಾದ ತರಬೇತಿ ವಿಭಾಗದ ಮುಖ್ಯಸ್ಥರಾದ ಲತ ಎಂ. ಎಚ್, ತರಬೇತಿ ಸಹಾಯಕರಾದ ಜಗದಾಂಬ ಬಿ.ಆರ್ ರವರು ಉಪಸ್ಥಿತರಿದ್ದರು. ರಾಜ್ ಕುಮಾರ್ ಎಂ. ಎಚ್ ಪರಿಸರ ಅಭಿಯಂತರರು ಪುರಸಭೆ ರವರು ತರಬೇತಿಗೆ ಸಹಕಾರ ನೀಡಿದರು. ಕಾರ್ಯಾಕ್ರಮದಲ್ಲಿ ರಾಜ್ ಕುಮಾರ್ ಎಂ.ಎಚ್. ಪರಿಸರ ಅಭಿಯಂತರರು ಮತ್ತು ವ್ಯವಸ್ಥಾಪಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಶಿವಮೊಗ್ಗ, ಭರತ್ ಎ. ಮುಖ್ಯ ಅಧಿಕಾರಿಗಳು, ಶಿಕಾರಿಪುರ ಟಿಎಂಸಿ ಹಾಗೂ ವಿಜಯಲಕ್ಷ್ಮಿ, ತರಬೇತಿ ಸಂಯೋಜಕರು, ಡಿಎಂಎ ರವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ
