ಬೆಂಗಳೂರು: ಪೌಡರ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಸೆಪ್ಟೆಂಬರ್ 28 ನಗರದ ಬಾಗಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಕಾರ್ಮಿಕ ಬಿಹಾರ ಮೂಲದ ರಾಜು ಪಾಸ್ವಾನ್ (23) ಎಂದು ಗುರುತಿಸಲಾಗಿದೆ.
ಸಂತೋಷ್ ಎಂಬವರಿಗೆ ಸೇರಿದ ಪೌಡರ್ ಕಂಪನಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ 12:30 ಕಂಪನಿಯಲ್ಲಿ ರಾಜು ಕೆಲಸ ಮಾಡುತ್ತಿದ್ದ ವೇಳೆ ಪೌಡರ್ ಮಿಕ್ಸಿಂಗ್ ಮಾಡುವ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಎಜಿ ಆರ್ ವೆಂಕಟರಮಣಿ ಅಧಿಕಾರಾವಧಿ 2 ವರ್ಷಗಳ ಕಾಲ ವಿಸ್ತರಣೆ
ಸ್ಥಳಕ್ಕೆ ಬಾಗಲಕುಂಟೆ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ನೋಡಿ: ಕೋಲಾರ | ಅಂಗೈ ಮೂಳೆ ಮುರಿದು ಆರು ದಿನ ಆದ್ರು ಚಿಕಿತ್ಸೆ ನೀಡದ ಸರ್ಕಾರಿ ಆಸ್ಪತ್ರೆ Janashakthi Media
