ವಾರಕ್ಕೆ 90 ಗಂಟೆ ಕೆಲಸ ಮಾಡುವಂತೆ ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ: ವಾಟಾಳ್ ನಾಗರಾಜ್ ಪ್ರತಿಭಟನೆ

Please follow and like us:
ರಾಮನಗರ: ವಾರಕ್ಕೆ 90 ಗಂಟೆ ಕೆಲಸ ಮಾಡುವಂತೆ ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ನೀಡಿರುವ  ಹೇಳಿಕೆಯನ್ನು ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ಎಲ್&ಟಿ 

ರಾಮನಗರದ ಐಜೂರು ವೃತ್ತದಲ್ಲಿ ಸೋಮವಾರ (ಜ.13) ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಉದ್ಯೋಗಿಗಳ ಆರೋಗ್ಯ ಹಾಳುಮಾಡಲು ಚಿಂತನೆ ಮಾಡುತ್ತಿದ್ದಾರೆ. ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಿಕೊಂಡು ನೌಕರರ ಬೆನ್ನುಮೂಳೆ ಮುರಿಯುತ್ತಿದ್ದಾರೆ. ಹೆಂಡತಿಯ ಮುಖ ನೋಡಿ ಕೂರಬೇಡಿ ಎಂದು ಪುರುಷರಿಗೆ ಅಗೌರವ ತೋರಿದ್ದಾರೆ.

ಇದನ್ನೂ ಓದಿ : ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ: ಚಿಂತಕ ಕೆ ಎಸ್ ಭಗವಾನ್ ಮತ್ತೊಂದು ವಿವಾದ ಹೇಳಿಕೆ

ಗಂಡ-ಹೆಂಡತಿಯ ದಾಂಪತ್ಯ ಜೀವನ ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ ಕೂಡಾ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳಿದ್ದಾರೆ. ಇದು ನೌಕರರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ಮಾಡಿದ್ದಾರೆ.

ಕೂಡಲೇ ಸುಬ್ರಮಣಿಯನ್ ಹಾಗೂ ನಾರಾಯಣ ಮೂರ್ತಿ ದೇಶದ ಪ್ರಜೆಗಳ ಕ್ಷಮೆ ಕೇಳಬೇಕು. ನೌಕರರಿಗೆ ಹೆಚ್ಚಿಗೆ ಕೆಲಸ ಮಾಡಿಸುವ ಚಿಂತನೆ ಕೈಬಿಡಬೇಕು ಎಂದು ವಾಟಾಳ್ ಆಗ್ರಹಿಸಿದರು.

ಇದನ್ನೂ ನೋಡಿ : ಹಾಸನ | ಅಂಬೇಡ್ಕರ್‌ಗೆ ಅವಮಾನ : ಅಮಿತ್ ಶಾ ವಿರುದ್ಧ ರಸ್ತೆ ತಡೆ – ಬಂಧನ ಬಿಡುಗಡೆJanashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *