ವರದಿ : ಗೋಪನಹಳ್ಳಿ ಶಿವಣ್ಣ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಯಲಗಟ್ಟೆ ಗ್ರಾಮಸ್ಥರು ನಗರದ ಅಬಕಾರಿ ಇಲಾಖೆ ಹಾಗೂ ಶಾಸಕರ ಭವನದ ಮುಂದೆ ಪ್ರತಿಭಟನೆ ಮಾಡಿ ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು.
ಮದ್ಯ ಮಾರಾಟದಿಂದ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ರಾತ್ರಿಯಾದರೆ ದುಡಿದ ಹಣದಲ್ಲಿ ಕುಡಿದು ಹೆಂಡ್ರು, ಮಕ್ಕಳ ಮೇಲೆ ಕುಡಿ ಹಲ್ಲೆ ಮಾಡುತ್ತಾರೆ. ಕುಡುಕರಿಂದ ಗ್ರಾಮದಲ್ಲಿ ನೆಮ್ಮದಿಯಿಂದ ಕುಟುಂಬಗಳು ಜೀವನ ನಡೆಸಿದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಬೇಡಿಯೆಂದು ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು, ಮದ್ಯ ಮಾರಟ ನಿಲ್ಲಿಸಿಲ್ಲ ಎಂದು ಗ್ರಾಮದ ಮಹಿಳೆಯರಾದ ಭಾಗ್ಯಮ್ಮ, ಕಮಲಮ್ಮ, ಲಕ್ಷ್ಮೀದೇವಿ ಆರೋಪಿಸಿದರು.
ಇದನ್ನೂ ಓದಿ : ಜನಮನ ಸೆಳೆದ ಮಕ್ಕಳ ಸಂತೆ
ಗ್ರಾಮದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ಅಕ್ರಮವಾಗಿ ನಡೆಯುತ್ತಿರುವುದರಿಂದ ಯುವಕರು ಮದ್ಯ ಸೇವನೆ ಚಟಕ್ಕೆ ಬಿದ್ದು ತಮ್ಮ ಜೀವಮಾನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಕೂಲಿನಾಲಿ ಮಾಡಿ ಜೀವನ ನಡೆಸುವ ಕುಟುಂಬಗಳಿಗೆ ತಮ್ಮ ಯಜಮಾನರು, ಮಕ್ಕಳು ದುಡಿದ ಹಣ ಮದ್ಯ ಸೇವನೆಗೆ ಬಳಕೆ ಮಾಡಿಕೊಂಡು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ ಮಹಿಳೆಯರು ಕೂಡಲೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕೆಂದು ಒತ್ತಾಯ ಮಾಡಿದರು.
ಈ ವೇಳೆ ಯಲಗಟ್ಟ ಗ್ರಾಮದ ಪುಟ್ಟಮ್ಮ, ಶಿವಮ್ಮ, ರತ್ನಮ್ಮ, ದಿವ್ಯ, ಪಾಲಾಕ್ಷಮ್ಮ, ಕೆಂಚಮ್ಮ, ಪುಟ್ಟರಂಗಮ್ಮ, ಶಾಂತವೀರಮ್ಮ, ದ್ರಾಕ್ಷಾಯಿಣಿ, ಸಿದ್ದಣ್ಣ, ಮಹೇಶ್, ರಮೇಶ್, ಕೆ.ತಿಪ್ಪೇಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.