“ಅವಳ ಹೆಜ್ಜೆ ಕಿರುಚಿತ್ರೋತ್ಸವ-2026”: ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರ ಸ್ಪರ್ಧೆ

ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ನಲ್ಲಿ ಉಚಿತ ನೋಂದಣಿ
ಬೆಂಗಳೂರು: ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ, ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಎರಡನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವ ಕ್ಕೆ ಮಹಿಳಾ ನಿರ್ದೇಶಕರಿಂದ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ನೋಂದಣಿಯನ್ನು ಆಹ್ವಾನಿಸಲಾಗಿದೆ. ಇದು ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆ.

ಬಹುಮಾನಗಳು:

– ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ – ₹1,00,000 ನಗದು
– ಹಲವಾರು ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ ₹10,000 ನಗದು

ಇದನ್ನೂ ಓದಿ: ಆರ್ ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೆ ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣಾ ಅರ್ಜಿ – ನವೆಂಬರ್ 4ಕ್ಕೆ ವಿಚಾರಣೆ

ನೋಂದಣಿ ವಿವರಗಳು:

– ಸಲ್ಲಿಕೆ ಅರ್ಹತೆ: ನಿರ್ದೇಶಕರು ಮಹಿಳೆಯೇ ಆಗಿರಬೇಕು; 5–30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು
– ಪ್ರವೇಶ ಶುಲ್ಕ: ನವೆಂಬರ್‌ನಲ್ಲಿ ಉಚಿತ (ರಾಜ್ಯೋತ್ಸವ ವಿಶೇಷ); ಡಿಸೆಂಬರ್ 1 ರಿಂದ ಜನವರಿ 31, 2026 ರವರೆಗೆ ₹1,000
– ಹೆಚ್ಚಿನ ಮಾಹಿತಿ: ಸ್ಪರ್ಧೆಯ ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ | http://www.gubbivanitrust.ngo | WhatsApp: 8867747236

ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಹೇಳುವಂತೆ, “ಅವಳ ಹೆಜ್ಜೆ ಕಿರುಚಿತ್ರೋತ್ಸವ ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಮಹಿಳಾ ಸಬಲೀಕರಣದ ಧ್ಯೇಯವುಳ್ಳ ಒಂದು ಸಾಂಸ್ಕೃತಿಕ ಚಳವಳಿ ಮತ್ತು ಲಿಂಗ ಸಮಾನತೆಯತ್ತ ಒಂದು ಅರ್ಥಪೂರ್ಣ ಹೆಜ್ಜೆ”.

ಇದನ್ನೂ ನೋಡಿ: ನಿರಂಜನ |ಕ್ರಿಯಾ ಮಾಧ್ಯಮದ ಕೆಲಸ ವಿಶೇಷವಾದುದು – ಎಲ್.ಎನ್.ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *