ಸೌಜನ್ಯಳನ್ನು ಅಪಹರಿಸಿ ಕೊಂಡು ಹೋಗುತ್ತಿರುವುದನ್ನು ನೋಡಿರುವುದಾಗಿ ಮಹಿಳೆ ದೂರು

ಬೆಳ್ತಂಗಡಿ: 2012ರಲ್ಲಿ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ ಈ ಘಟನೆಯ ಸಂದರ್ಭದಲ್ಲಿ ತಾನು ಅಲ್ಲಿದ್ದು, ಸೌಜನ್ಯಳನ್ನು ಅಪಹರಿಸಿ ಕೊಂಡು ಹೋಗುತ್ತಿರುವುದನ್ನು ತಾನು ನೋಡಿರುವುದಾಗಿ ಮಹಿಳೆಯೋರ್ವಳು ಆಗಸ್ಟ್‌ 29ರಂದು ಎಸ್‌ಐಟಿ ಕಚೇರಿಗೆ ದೂರು ನೀಡಿದ್ದಾರೆ.

ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆ 62 ವರ್ಷದ ಮಹಿಳೆ ಎಸ್‌ಐಟಿ ಕಚೇರಿಗೆ ದೂರು ನೀಡಿದವರಾಗಿದ್ದಾರೆ.

2012 ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದಿನ ಚಿಕ್ಕಕೆಂಪಮ್ಮ ತನ್ನ ಊರಿನ ನಿಂಗಮ್ಮ ಜೊತೆ ಆ ದಿನ ಧರ್ಮಸ್ಥಳಕ್ಕೆ ಆಗಮಿಸಿದ್ದು, ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಲು ಘಟನೆ ನಡೆದ ಸ್ಥಳದ ಬಳಿ ನಿಂತಿದ್ದರು.

ಇದನ್ನೂ ಓದಿ: ಸಚಿವ ಶ್ರವಣ್‌ ಕುಮಾರ್‌ – ಶಾಸಕ ಕೃಷ್ಣ ಮುರಾರಿ ಶರಣ್‌ ಮೇಲೆ ಸಾರ್ವಜನಿಕರು ಹಲ್ಲೆ

ಈ ಸಂದರ್ಭದಲ್ಲಿ ತೊದಲು ಮಾತನಾಡುವ ವ್ಯಕ್ತಿ ಬಂದು ತಮ್ಮಲ್ಲಿ ಮಾತನಾಡಿದ್ದು, ಬಳಿಕ ಬೂದು ಬಣ್ಣದ ಕಾರಿನಲ್ಲಿ ಬಂದ ಗುಂಪು ಕೆಲವೇ ಮೊದಲು ಹೋದ ಯುವತಿಯನ್ನು ಅಪಹರಿಸಿಕೊಂಡು ಹೋಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎಸ್‌ಐಟಿ ಧರ್ಮಸ್ಥಳ ದ ಅಸಹಜ ಸಾವಿನ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಗೆ ಬೇಕಾದ ಮಾಹಿತಿಯನ್ನು ನೀಡಿ ತನಿಖಾ ತಂಡದ ಜೊತೆ ಸಹಕರಿಸುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ | ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟಿನ ಬಗ್ಗೆ ತನಿಖೆಯಾಗಲಿ – ಎಡಪಕ್ಷಗಳ ಆಗ್ರಹ

Donate Janashakthi Media

Leave a Reply

Your email address will not be published. Required fields are marked *