ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ

ಮೈಸೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.

ಸಂಜೆಯೊಳಗೆ ಹಣ ಕಟ್ಟಿಲ್ಲ ಅಂದ್ರೆ ಮಾನ ಮರ್ಯಾದೆ ಹರಾಜು ಹಾಕ್ತಿವಿ ಅಂತಾ ಟಾರ್ಚರ್ ಮಾಡಿದ್ದಕ್ಕೆ ಮರ್ಯಾದೆಗೆ ಅಂಜಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸುಶಿಲಾ ಎಂದು ಗುರುತಿಸಲಾಗಿದೆ.

ಅಷ್ಟಕ್ಕೂ ಆಕೆ ಕೊಡಬೇಕಾಗಿದ್ದ ಹಣವಾದ್ರು ಎಷ್ಟು?

ಮಹಿಳೆ ಕಟ್ಟಬೇಕಿದ್ದಿದ್ದು ಕೇವಲ 2,440 ರೂಪಾಯಿ ಅಷ್ಟೇ. ಆದ್ರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ ಟಾರ್ಗೆಟ್ ಗೆ ಮಹಿಳೆ ಸಾವನ್ನೊಪ್ಪಿದ್ದಾರೆ. ಈಕೆ ಹೆಸರು ಸುಶೀಲಾ. 48 ವರ್ಷ ವಯಸ್ಸು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿ ಕಿರಿಜಾಜಿ ಗ್ರಾಮದ ನಿವಾಸಿ, ಈಕೆ ಹುಣಸೂರು ಪಟ್ಟಣದಲ್ಲಿರೋ ಫಾರ್ಚೂನ್ ಮೈಕ್ರೋ ಫೈನಾನ್ಸ್ ನಿಂದ ಪುತ್ರ ನವೀನ್ ಕುಮಾರ್ ಗಾಗಿ 40 ಸಾವಿರ ಸಾಲ ಪಡೆದಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಪ್ರತಿ ತಿಂಗಳು 7 ನೇ ತಾರೀಖು ಪುತ್ರ ನವೀನ್ ಕುಮಾರ್ 2,440 ರೂಪಾಯಿ ಇ.ಎಂ.ಐ ಕಡ್ತಾ ಇದ್ದ. ಆದ್ರೆ ಇದೇ ತಿಂಗಳ 7ನೇ ತಾರೀಖಿನಂದು ಕಟ್ಟಬೇಕಿದ್ದ ಹಣವನ್ನ ಕಟ್ಟಿರಲಿಲ್ಲವಂತೆ. ಸ್ವಲ್ಪ ದಿನ ಟೈಂ ಕೊಟ್ರೆ ಕಡ್ತೀನಿ ಅಂತ ಪುತ್ರ ನವೀನ್ ಕುಮಾರ್ ಹೇಳಿದ್ದಂತೆ. ಆದ್ರೆ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟಿಸಿಕೊಳ್ಳೋಕೆ ಹಿಂದೆ ಬಿದ್ದಿದ್ದಾರೆ.

ನಿನ್ನೆ ಬೆಳಿಗ್ಗೆ ಮನೆ ಬಳಿ ಬಂದ ಫಾರ್ಚೂನ್ ಫೈನಾನ್ಸ್ ಸಿಬ್ಬಂದಿ ಉಮೇಶ್ ಹಾಗೂ ಇತರೆ ಸಿಬ್ಬಂದಿ ಮನೆ ಮುಂದೆ ಕುಳಿತು ಹಣ ಕಟ್ಟಿ ಇಲ್ಲ ಮರ್ಯಾದೆ ಹರಾಜು ಹಾಕ್ತಿವಿ ಅಂದಿದ್ದಾರೆ. ಹಣ ಕಟ್ಟಿಲ್ಲ ಅಂದ್ರೆ ಸಾಯಿರಿ ಸಾಲ ಮನ್ನ ಆಗುತ್ತೆ ಅಂತ ಗಲಾಟೆಮಾಡಿ ಸಂಜೆ ವರೆಗೂ ಡೆಡ್ ಲೈನ್ ವೀಡಿಹೋಗಿದ್ರಂತೆ. ಊಟ ಮಾಡೋ ವೇಳೆ ಸೋಸೆ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಸುಶೀಲಾ ಮನನೊಂದು ಜಮೀನಿಗೆ ತೆರಳಿ ಕ್ರಿಮಿನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತ, ಪುತ್ರ ನವೀನ್ ಕುಮಾರ್ ಹುಣಸೂರು ಪಟ್ಟಣಕ್ಕೆ ಕೆಲಸದ ನಿಮಿತ್ತ ಹೋಗಿದ್ರಂತೆ. ಅಷ್ಮರಲ್ಲೇ ಫೈನಾನ್ಸ್ ಸಿಬ್ಬಂದಿ ಕೊಟ್ಟ ಟಾರ್ಚರ್ ಗೆ ಮನನೊಂದಿದ್ದ ಸುಶೀಲಾ ಜಮೀನಿಗೆ ತೆರಳಿ ಕ್ರಿಮಿನಾಶ ಮಾತ್ರೆ ಸೇವನೆ ಮಾಡಿದ್ದಾರೆ. ಜಮೀನಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಸುಶೀಲಾ ರನ್ನ ಹುಣಸೂರು ಪಟ್ಟಣದ ಡಿ. ದೇವರಾಜ ಅರಸು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.

ಆದ್ರೆ ಚಿಕಿತ್ಸೆ ಫಲಿಸದೆ ಕೆ. ಆರ್. ಆಸ್ಪತ್ರೆಯಲ್ಲಿ ಸುಶೀಲಾ ನಿಧನರಾಗಿದ್ದಾರೆ. ಈ ಸಂಬಂಧ ಸಂಬಂಧಿಕರು ಫೈನಾನ್ಸ್ ಸಿಬ್ಬಂದಿ ಹಾಗೂ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇನ್ನಾದ್ರೂ ಮೈಕ್ರೋ ಫೈನಾನ್ನ ಸಿಬ್ಬಂದಿ ಸಾಲ ವಸೂಲಿ ಮಾಡೋ ಮುನ್ನ ಜಾಗರೂಕತೆಯಿಂದ ನಡೆದುಕೊಳ್ಳಬೇಕಿದೆ.

ಇದನ್ನೂ ನೋಡಿ: ಸಂವಿಧಾನ ಬದಲಿಸಿ, ನಮಗೆ ಬೇಕಾದ ಸಂವಿಧಾನ ಕೊಡಿ ಎಂದ ಪೇಜಾವರ ಮಠದ ಸ್ವಾಮಿ ವಿರುದ್ದ ಪ್ರಕರಣ ದಾಖಲಿಸಬೇಕಲ್ಲವೇ?

Donate Janashakthi Media

Leave a Reply

Your email address will not be published. Required fields are marked *