ಹೊಸ ಐಟಿ ನಿಯಮಗಳ ಉಲ್ಲಂಘನೆ: ಮಧ್ಯವರ್ತಿ ಮಾಧ್ಯಮ ಸ್ಥಾನ ಕಳೆದುಕೊಳ್ಳುವ ಟ್ವೀಟರ್

Please follow and like us:

ನವದೆಹಲಿ: ಕೇಂದ್ರ ಸರಕಾರವು ಹೊಸದಾಗಿ ಜಾರಿಗೊಳಿಸಿದ ಕಾನೂನು ಪಾಲಿಸದ ಕಾರಣ ಟ್ವಿಟ್ಟರ್‌ ಸಾಮಾಜಿಕ ಜಾಲತಾಣ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ನಿಯಮಗಳಿಗೆ ಬದ್ಧತೆ ತೋರದ ಸಾಮಾಜಿಕ ಮಾಧ್ಯಮಗಳಲ್ಲಿ ಏಕೈಕ ಮಾಧ್ಯಮ ಟ್ವಿಟರ್ ಎಂದೂ ಮೂಲಗಳು ತಿಳಿಸಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಜೂನ್ 9ರಂದು ಸಾಮಾಜಿಕ ಮಾಧ್ಯಮ ಟ್ವೀಟರ್ ಐಟಿ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಒಪ್ಪಂದದ ಆಧಾರದ ಮೇಲೆ ನೋಡಲ್ ವ್ಯಕ್ತಿ(ಎನ್‌ಸಿಪಿ) ಮತ್ತು ಕುಂದುಕೊರತೆ ಅಧಿಕಾರಿ(ಆರ್‌ಜಿಒ) ಅವರನ್ನು ನೇಮಕ ಮಾಡಲಾಗಿದೆ. ಇನ್ನು ಮುಖ್ಯ ಅನುಸರಣೆ ಅಧಿಕಾರಿಯ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಟ್ವೀಟರ್ ತಿಳಿಸಿತ್ತು.

ಹೊಸ ಐಟಿ ನಿಯಮಗಳನ್ನು ‘ತಕ್ಷಣ’ ಅನುಸರಿಸುವಂತೆ ಕೇಂದ್ರ ಸರ್ಕಾರವು ಕೊನೆಯ ಅವಕಾಶ ನೀಡಿ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವೀಟರ್ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿತ್ತು.

ಹೊಸ ಮಧ್ಯವರ್ತಿ ಮಾರ್ಗಸೂಚಿ ನಿಯಮಗಳು ಮೇ 26ರಿಂದ ಜಾರಿಗೆ ಬಂದಿವೆ ಎಂದು ಸಚಿವಾಲಯ ಪತ್ರದಲ್ಲಿ ತಿಳಿಸಿತ್ತು. ನಿಯಮಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ನಿಬಂಧನೆಗಳು ಈಗಾಗಲೇ ಅಂದರೆ 2021ರ ಮೇ 26ರಿಂದಲೇ ಜಾರಿಗೆ ಬಂದಿವೆ. ಅಲ್ಲದೆ ಟ್ವೀಟರ್ ಗೆ ನೋಟಿಸ್ ನೀಡಿ ವಾರ ಕಳೆದರೂ ಈ ನಿಯಮಗಳ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ತಿಳಿದುಬಂದಿದೆ.

 

Please follow and like us:
Donate Janashakthi Media

Leave a Reply

Your email address will not be published. Required fields are marked *