ನವದೆಹಲಿ: ನಿರೀಕ್ಷೆಯಂತೆಯೇ 2ನೇ ಹಂತದ ಮತದಾನವು ಪಶ್ಚಿಮ ಬಂಗಾಳದಲ್ಲಿ ಮುಕ್ತಾಯವಾಗುತ್ತಲೇ ಎಕ್ಸಿಟ್ ಪೋಲ್ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಯಾರು ಅಧಿಕಾರ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯ
ಏಪ್ರಿಲ್ 9ರಂದು ಅಸ್ಸಾಂನ 126 ಕ್ಷೇತ್ರಗಳು, ಕೇರಳದ 140 ಕ್ಷೇತ್ರಗಳು ಮತ್ತು ಪುದುಚೇರಿಯ 30 ಕ್ಷೇತ್ರಗಳಿಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಏ. 23ರಂದು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಮತದಾನ ನಡೆಯಿತು. ರಾಜ್ಯ
ಪಶ್ಚಿಮ ಬಂಗಾಳದಲ್ಲಿ 152 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಿತು. ಎರಡನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯಿತು. ಈ 5 ರಾಜ್ಯಗಳ ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದೆ. ರಾಜ್ಯ
ಇದನ್ನೂ ಓದಿ: ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ: ಗ್ರಾಮಸ್ಥರು ಪ್ರತಿಭಟನೆ
ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಿತು. ಇಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ನಿಖರವಾದ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ರಾಜ್ಯ
ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಸರ್ಕಾರ
ಎಕ್ಸಿಟ್ ಪೋಲ್ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಪುದುಚೇರಿಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಡಿಎಂಕೆ ಪ್ಲಸ್ 120 ರಿಂದ 140 ಸ್ಥಾನಗಳನ್ನು ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಂದಾಜಿಸಿವೆ.
ಪೀಪಲ್ಸ್ ಇನ್ ಸೈಟ್
- ಡಿಎಂಕೆ+: 120-140
- ಎಐಎಡಿಎಂಕೆ+: 60-70
- ಟಿವಿಕೆ: 30-40
- ಇತರರು: 0-4
ಎಕ್ಸಿಸ್ ಮೈ ಇಂಡಿಯಾ
- ಡಿಎಂಕೆ+: 92-110
- ಎಐಎಡಿಎಂಕೆ+: 22-32
- ಟಿವಿಕೆ: 98-120
- ಇತರರು: —
ಪಿಮಾರ್ಕ್
- ಡಿಎಂಕೆ+: 125-145
- ಎಐಎಡಿಎಂಕೆ+: 65-85
- ಟಿವಿಕೆ: 16-26
- ಇತರರು: 1-6
ಮ್ಯಾಟ್ರಿಜ್
- ಡಿಎಂಕೆ+: 122-132
- ಎಐಎಡಿಎಂಕೆ+: 87-110
- ಟಿವಿಕೆ: 10-12
- ಇತರರು: 0-6
ವೋಟ್ ವೈಬ್
- ಡಿಎಂಕೆ+: 103-113
- ಎಐಎಡಿಎಂಕೆ+: 114-124
- ಟಿವಿಕೆ: 4-10
- ಇತರರು: —
ಜೆವಿಸಿ
- ಡಿಎಂಕೆ+: 75-95
- ಎಐಎಡಿಎಂಕೆ+: 128-147
- ಟಿವಿಕೆ: 8-15
- ಇತರರು: 0
ಪೀಪಲ್ ಪಲ್ಸ್
- ಡಿಎಂಕೆ+: 125-145
- ಎಐಎಡಿಎಂಕೆ+: 65-80
- ಟಿವಿಕೆ: 18-24
- ಇತರರು: 2-6
ಕೇರಳದಲ್ಲಿ 10 ವರ್ಷಗಳ ಬಳಿಕ ಯುಡಿಎಫ್ ಗೆ ಅಧಿಕಾರ
ಇನ್ನು ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾ ರೂಢ ಎಲ್ ಡಿಎಫ್ ಗೆ ಭಾರಿ ಆಘಾತ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಬರೊಬ್ಬರಿ 10 ವರ್ಷಗಳ ಬಳಿಕ ಯುಡಿಎಫ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ಎಡರಂಗ ಮೂರನೇ ಬಾರಿ ಅಧಿಕಾರಕ್ಕೆ ಬರಲಿದೆ. 85 ಸ್ಥಾನಗಳನ್ನು ಎಲ್‌ಡಿಎಫ್ ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಇಲ್ಲಿಯವರೆಗೆ ಎಕ್ಸಿಟ್ ಪೋಲ್ ಹೇಳಿದ್ದಕ್ಕಿಂತ ಎಲ್‌ಡಿಎಫ್ 10 ಸ್ಥಾನ ಹೆಚ್ಚಿಗೆ ಪಡೆದಿದ್ದರೆ, ಯುಡಿಎಫ್ 14 ಸ್ಥಾನಗಳನ್ನು ಕಳೆದುಕೊಳ್ಳುತ್ತಾ ಬಂದಿರುವುದು ವಿಶೇಷ.
ಪೀಪಲ್ಸ್ ಇನ್ ಸೈಟ್
- ಎಲ್‌ಡಿಎಫ್: 58-68
- ಎನ್‌ಡಿಎ: 10-14
- ಯುಡಿಎಫ್: 66-76
- ಇತರೆ: 0-1
ಆಕ್ಸಿಸ್ ಮೈ ಇಂಡಿಯಾ
- ಎಲ್‌ಡಿಎಫ್: 49-62
- ಎನ್‌ಡಿಎ: 0-3
- ಯುಡಿಎಫ್: 78-90
- ಇತರೆ: —
ಮ್ಯಾಟ್ರಿಜ್ ಸಮೀಕ್ಷೆ
- ಎಲ್‌ಡಿಎಫ್: 60-65
- ಎನ್‌ಡಿಎ: 3-5
- ಯುಡಿಎಫ್: 75-85
- ಇತರೆ: —
ಜೆವಿಸಿ
- ಎಲ್‌ಡಿಎಫ್: 52-61
- ಎನ್‌ಡಿಎ: 3-7
- ಯುಡಿಎಫ್: 72-84
- ಇತರೆ: —
ವೋಟ್‌ವೈಬ್ ಸಮೀಕ್ಷೆ
- ಎಲ್‌ಡಿಎಫ್: 58-68
- ಎನ್‌ಡಿಎ: 0-4
- ಯುಡಿಎಫ್: 70-80
- ಇತರೆ: —
ಪೀಪಲ್ಸ್ ಪಲ್ಸ್ ಸಮೀಕ್ಷೆ
- ಎಲ್‌ಡಿಎಫ್: 60-65
- ಎನ್‌ಡಿಎ: 3-5
- ಯುಡಿಎಫ್: 70-75
- ಇತರೆ: —
ಪಿಮಾರ್ಕ್
- ಎಲ್‌ಡಿಎಫ್: 62-69
- ಎನ್‌ಡಿಎ: 1-4
- ಯುಡಿಎಫ್: 71-79
- ಇತರೆ: —
ಪುದುಚೇರಿಯ ಎಕ್ಸಿಟ್ ಪೋಲ್ ಹೇಳೋದೇನು?
ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವ ಸಾಧ್ಯತೆ ಇದ್ದು ಮತ್ತೆ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅಂದಾಜಿಸಲವಾಗಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
- ಎನ್ ಆರ್ ಸಿ+: 16-20
- ಕಾಂಗ್ರೆಸ್+: 6-8
- ಟಿವಿಕೆ: —
- ಇತರೆ: 3-7
ಜೆವಿಸಿ
- ಎನ್ ಆರ್ ಸಿ+: 15-17
- ಕಾಂಗ್ರೆಸ್+: 11-13
- ಟಿವಿಕೆ: 1-2
- ಇತರೆ: —
ಪೀಪಲ್ ಪಲ್ಸ್
- ಎನ್ ಆರ್ ಸಿ+: 15-18
- ಕಾಂಗ್ರೆಸ್+: 6-8
- ಟಿವಿಕೆ: —
- ಇತರೆ: 1-12
ಪಶ್ಚಿಮ ಬಂಗಾಳ
ಪೀಪಲ್ಸ್ ಪಲ್ಸ್’ (Peoples Pulse) ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 294 ಸೀಟುಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 177ರಿಂದ 187 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಬಿಜೆಪಿ 95 ರಿಂದ 110 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಬಲ ಪೈಪೋಟಿ ನೀಡಲಿದೆ. ಕಾಂಗ್ರೆಸ್ 1 ರಿಂದ 3 ಮತ್ತು ಎಡರಂಗ ಕೇವಲ 0 ರಿಂದ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.
ಅಸ್ಸಾಂ
ಎಕ್ಸಿಸ್ ಮೈ ಇಂಡಿಯಾ (Axis My India) ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, 126 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ 64 ಸೀಟನ್ನು ಯಾವ ಪಕ್ಷವು ಸ್ವತಂತ್ರವಾಗಿ ಪಡೆಯುವುದಿಲ್ಲ ಎಂದಿದೆ. ಇಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ (ಎನ್‌ಡಿಎ) 47 ಸೀಟುಗಳು ಬರಲಿವೆ. ಕಾಂಗ್ರೆಸ್ 39 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಹೇಳಲಾಗಿದೆ. ಇನ್ನುಳಿದಂತೆ ಇತರ ಪಕ್ಷಗಳು 14 ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿವೆ ಎಂದು ಮುನ್ಸೂಚನೆ ನೀಡಿದೆ.
ಎಲ್ಲೋ ಕುಳಿತು, ಕ್ಷೇತ್ರದ ನಾಲ್ಕಾರು ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಮೀಕ್ಷೆಯ ಬಗ್ಗೆ ನಿಖರತೆ ಇಡುವುದು ಕಷ್ಟ. ಎಕ್ಸಿಟ್ ಪೋಲ್‌ಗಳು ಸರಿಯಾದ ದಿಕ್ಕನ್ನು ಕೆಲವೊಮ್ಮೆ ಸೂಚಿಸಿದರೂ, ನಿಖರ ಫಲಿತಾಂಶವನ್ನು ತಲುಪಲು ವಿಫಲವಾಗಿರುವುದನ್ನು ನಾವು ಹಿಂದಿನಿಂದಲೂ ನೋಡುತ್ತಾ ಬಂದಿದ್ದೇವೆ.
