ಹುಬ್ಬಳ್ಳಿ: ಒಟ್ಟಿಗೆ ಬಾಳಿ, ಬದುಕಿದ ದಂಪತಿಯು ಸಾವಿನಲ್ಲೂ ಒಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಪತಿ ಸಾವನ್ನಪ್ಪಿದರೆ, ವಯೋಸಹಜ ಕಾಯಿಲೆಯಿಂದ ಪತ್ನಿ ಮೃತಪಟ್ಟಿದ್ದಾರೆ.
ಅವರಿಬ್ಬರು ಸಂಸಾರದಲ್ಲಿ ಕಷ್ಟ ಸುಖ ಕಂಡಿದ್ದ ದಂಪತಿ. ವೈವಾಹಿಕ ಜೀವನದಲ್ಲಿ ಜೊತೆಗೆ 44 ವರ್ಷಗಳಿದ್ದ ದಂಪತಿ ಇಂದು ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಗಂಡ ಹೆಂಡತಿ ಒಂದಾಗಿದ್ದಾರೆ.
ಕುಸುಗಲ್ ಗ್ರಾಮದ ನಿವಾಸಿಗಳಾದ ಶಂಕರಪ್ಪ ಶಿವಪ್ಪ ಹೊಂಬಳ ಹಾಗೂ ಅವರ ಪತ್ನಿ ಅನ್ನಪೂರ್ಣ ಶಂಕರಪ್ಪ ಹೊಂಬಳ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಶಂಕರಪ್ಪ ಹೊಂಬಳ ಮೊದಲು ಸಾವನ್ನಪ್ಪಿದ್ದಾರೆ. ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅನ್ನಪೂರ್ಣ ಶಂಕ್ರಪ್ಪ ಹೊಂಬಳ ಕೂಡ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತಕ್ಕೆ ಆಸ್ತಿ ವಿವರಗಳ ಮಾಹಿತಿ ನೀಡದ 140 ಶಾಸಕರು, ವಿಧಾಪರಿಷತ್ ಸದಸ್ಯರು
ಅಂದ ಹಾಗೇ 72 ವರ್ಷದ ಶಂಕರಪ್ಪ ಮತ್ತು ಅವರ ಪತ್ನಿ 62 ವರ್ಷದ ಅನ್ನಪೂರ್ಣ ಎಂಬವರು ಇಂದು ಸಾವಿನಲ್ಲೂ ಒಂದಾಗಿದ್ದಾರೆ. 72 ವರ್ಷದ ಶಂಕರಪ್ಪ ಅವರು ಇಂದು ಬೆಳಿಗ್ಗೆ 6 ಗಂಟೆಗೆ ಹೃದಯಾಘತದಿಂದ ಮೃತಪಟ್ಟಿದ್ದಾರೆ.
ಇತ್ತ ಗಂಡನ ಮೃತ ಸುದ್ದಿ ಕೇಳಿ ಕೆಲವೇ ಕ್ಷಣದಲ್ಲಿ ಪತ್ನಿ ಅನ್ನಪೂರ್ಣ ಕುಸಿದು ಬಿದ್ದು ಮೃತಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳನ್ನ ಅಗಲಿದ್ದಾರೆ. ಇನ್ನೂ ಇವರ ಅಗಲಿಕೆಗೆ ಕುಸುಗಲ್ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
ಇಬ್ಬರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದು ಇಂದು ಸಂಜೆ 6 ಗಂಟೆಗೆ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ. ಒಟ್ನನಲ್ಲಿ ಉತ್ತಮವಾಗಿ ಜೀವನ ನಡೆಸಿ ಮಾದರಿಯಾಗಿದ್ದ ಇಬ್ಬರು ದಂಪತಿಗಳು ಒಂದೆ ದಿನ ಇಹಲೋಕ ತ್ಯಜಿಸಿದ್ದು ಬೇಸರದ ಸಂಗತಿಯಾಗಿದೆ.
ಇದನ್ನೂ ನೋಡಿ: ಗುಡಿಸಲಿನಲ್ಲಿ ಅರಳುವ ಗುಲಾಭಿ ನಕ್ಷತ್ರ ನನ್ನ ಕವನ | ಸಿದ್ದಲಿಂಗಯ್ಯ | ಸೀತಾರಾಂ ಯೆಚೂರಿJanashakthi Media