ಮಹಿಳಾ ಕುಸ್ತಿಪಟುಗಳ ಮೇಲೆ ಪೋಲೀಸರ ಕಾರ್ಯಾಚರಣೆಗೆ ವ್ಯಾಪಕ ವಿರೋಧ : ಮಹಿಳೆಯರು, ರೈತರು ಮತ್ತು ಚಿಂತಕರ ಖಂಡನೆ

ಹೊಸ ಸಂಸ್‍ ಭವನದ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದಾಗಲೇ  ಮಹಿಳಾ ಗೌರನ ಪಂಚಾಯತ್‍ನಲ್ಲಿ ಭಾಗವಹಿಸಲು ಆ ಭವನದತ್ತ ತೆರಳುತ್ತಿದ್ದ ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರ ವಿರುದ್ಧ  ದಿಲ್ಲಿ ಪೋಲಿಸ್ ನಡೆಸಿರುವ ಕಾರ್ಯಾಚರಣೆಯನ್ನು ಮಹಿಳಾ ಸಂಘಟನೆಗಳು, ರೈತರ ಸಂಘಟನೆಗಳು ಮತ್ತು ದೇಶದ ಸಾವಿರಕ್ಕೂ ಹೆಚ್ಚು ಬುದ್ಧಿಜೀವಿಗಳು, ಸಮಾಜ ಸೇವಕರು, ವಕೀಲರು, ಶಿಕ್ಷಣ ತಜ್ಞರು  ಬಲವಾಗಿ ಖಂಡಿಸಿದ್ದಾರೆ.

ಅಮಾನುಷ ಹಲ್ಲೆ – ಎಐಡಿಡಬ್ಲ್ಯುಎ ಆಕ್ರೋಶ ಮತ್ತು ಆಗ್ರಹ

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಬಂಧಿಸಿರುವುದು  ಆಕ್ರೋಶಕಾರಿ, ಈ ಸರಕಾರದ  ಸರ್ವಾಧಿಕಾರಿ ಮುಖವನ್ನು ಇದು ಬಹಿರಂಗಪಡಿಸುತ್ತದೆ ಎಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಹೇಳಿದೆ.  ಈ ಪಂಚಾಯತುಗೆ ಬೆಂಬಲ ಮತ್ತು ಸೌಹಾರ್ದ ವ್ಯಕ್ರಪಡಿಸಿ ಭಾಗವಹಿಸಲು ಹೊರಟಿದ್ದ  ಮಹಿಳಾ ಕಾರ್ಯಕರ್ತರು ಮತ್ತು ಮುಖಂಡರನ್ನು ಅವರ ನಿವಾಸಗಳಿಂದ ಪೊಲೀಸರು ಬಂಧಿಸಿದ್ದಾರೆಮಹಿಳಾ ಕುಸ್ತಿಪಟುಗಳ ಪ್ರತಿಭಟನಾ ಸ್ಥಳವನ್ನು ದಿಲ್ಲಿ  ಪೊಲೀಸರು ಒಡೆದು ನಾಶಪಡಿಸಿದ್ದಾರೆ. ಎಐಡಿಡಬ್ಲ್ಯುಎ ಉಪಾಧ್ಯಕ್ಷರುಗಳಾ  ಸುಭಾಷಿಣಿ ಅಲಿ, ಜಗಮತಿ ಸಂಗ್ವಾನ್, ದೆಹಲಿ  ಅಧ್ಯಕ್ಷೆ  ಮೈಮೂನಾ ಮೊಲ್ಲಾ, ಅನ್ನಿ ರಾಜಾ (ಎನ್‍ ಎಫ್‍ಐಡಬ್ಲ್ಯು), ಪೂನಂ ಕೌಶಿಕ್ (ಪಿಎಂಎಸ್) ಮತ್ತು ಬಂಧಿಸಲಾಗಿದೆ. ನೂರಾರು ಮಹಿಳೆಯರೊಂದಿಗೆ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ  ಕಾರ್ಯಕರ್ತೆಯರನ್ನೂ ಬಂಧಿಸಲಾಗಿದೆ. ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ರೈತರ ಬಸ್ಸುಗಳನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ ೆಂದು ಎಐಡಿಡಬ್ಲ್ಯುಎ ಹೇಳಿದೆ.

ಪ್ರಜಾಪ್ರಭುತ್ವದ ಮೇಲೆ ನಾಚಿಕೆಗೇಡಿ ದಾಳಿ-ಎಸ್‍ಕೆಎಂ

ದೇಶವ್ಯಾಪಿ ರೈತ ಸಂಘಟನೆಗಳ ಐಕ್ಯ ವೇದಿಕೆ ‘ಸಂಯುಕ್ತ ಕಿಸಾನ್‍ ಮೋರ್ಚಾ’(ಎಸ್‍ಕೆಎಂ) ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನ, ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ನಾಚಿಕೆಗೇಡಿ ದಾಳಿ ನಡೆಸಿರುವ ದಿನ ಎಂದು ಖಂಡಿಸಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ದಮನವನ್ನು ನಿಲ್ಲಿಸಬೇಕು,  ಬಂಧಿತ ಎಲ್ಲ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು ಎಂದು ಅದು ಆಗ್ರಹಿಸಿದೆ. ನರೇಂದ್ರ ಮೋದಿ ನೇತೃತ್ವದ ಹೇಡಿ ಬಿಜೆಪಿ ಸರ್ಕಾರವು 2023 ರ ಮೇ 28 ರಂದು ಮಹಿಳಾ ಕುಸ್ತಿಪಟುಗಳು ಕರೆ ನೀಡಿದ್ದ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಮುರಿಯಲು  ಮೇ 27ರಿಂದಲೇ ದಿಲ್ಲಿ ಗಡಿಗಳನ್ನು ಮುಚ್ಚಿತು, ಅನೇಕ ಕಾರ್ಯಕರ್ತರನ್ನು   ಬಂಧಿಸಿತು ಮತ್ತು ಹಲವರನ್ನು ಗೃಹಬಂಧನದಲ್ಲಿ ಇರಿಸಿತು. ರೈತರು ಮತ್ತು ಮಹಿಳೆಯರು ದೆಹಲಿಗೆ ತಲುಪುವುದನ್ನು ತಡೆಯಲು ಗಡಿಗಳನ್ನು ಮುಚ್ಚಲಾಯಿತು. ವಿಪರ್ಯಾಸವೆಂದರೆ ಹೊಸ ಸಂಸತ್ತನ್ನು ಪ್ರಧಾನಿ ಉದ್ಘಾಟಿಸಿದ ದಿನದಂದು, ಇಂತಹ ಅಭೂತಪೂರ್ವ ಬಲಪ್ರಯೋಗವನ್ನು ಸರಕಾರ ನಡೆಸಿದೆ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ ಮಹಿಳಾ ಕುಸ್ತಿಪಟುಗಳು ಮತ್ತು ವಿವಿಧ ಕ್ರೀಡಾಪಟುಗಳು, ಮಹಿಳೆಯರು, ರೈತರನ್ನು ಅವರ ಕೈಯಲ್ಲಿದ್ದ ರಾಷ್ಟ್ರಧ್ವಜಕ್ಕೂ ಅಗೌರವ ತೋರಿ ಎಳೆದಾಡಿ ಪೊಲೀಸರು ವಿವಿಧ ಠಾಣೆಗಳಿಗೆ ಕರೆದೊಯ್ದಿದ್ದಾರೆ.  ಭಾರತಕ್ಕೆ ಪದಕ ಗೆದ್ದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ಇತರರ ಮೇಲೆ  ಯಾವುದೇ ಪ್ರಚೋದನೆ ಇಲ್ಲದೆ ಹಲ್ಲೆ ನಡೆಸಿ ಬಂಧಿಸಲಾಯಿತು. ಇದುವರೆಗೂ ಅವರು ಎಲ್ಲಿದ್ದಾರೆ ಎಂಬ ಸುದ್ದಿ ಇಲ್ಲ. ಅವರು ಶಾಂತಿಯುತ ಹೋರಾಟ ನಡೆಸುತ್ತಿದ್ದ ಪ್ರತಿಭಟನಾ ಡೇರೆಯನ್ನೂ ಪೊಲೀಸರು ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ವಿವಿಧ ಮಹಿಳಾ ಸಂಘಟನೆಗಳ ಮುಖಂಡರಾದ ಸುಭಾಷಿಣಿ ಅಲಿ, ಜಗಮತಿ ಸಂಗ್ವಾನ್, ಅನ್ನಿ ರಾಜಾ, ಪೂನಂ ಕೌಶಿಕ್, ಮೈಮೂನಾ ಮೊಲ್ಲಾ, ಮತ್ತು ರೈತ ಮುಖಂಡರಾದ ಚರಂಜಿತ್ ಕೌರ್ ಧುರಿಯನ್ ಮತ್ತು ದವೀಂದರ್ ಕೌರ್ ಹರದಾಸ್ಪುರ ಮತ್ತು ಇತರರನ್ನು ಬಂಧಿಸಲಾಯಿತು. ಇದು ಬಿಜೆಪಿಯ ಮಹಿಳಾ ವಿರೋಧಿ, ಪ್ರಜಾಸತ್ತಾತ್ಮಕವಲ್ಲದ ಗುಣವನ್ನು ಬಹಿರಂಗಪಡಿಸುತ್ತದೆ ಮತ್ತು ಲೈಂಗಿಕ ಕಿರುಕುಳದ ಆಪಾದಿತರನ್ನು ರಕ್ಷಿಸಲು ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂದು ಎಸ್‌ಕೆಎಂ ಅಭಿಪ್ರಾಯಪಟ್ಟಿದೆ. ಇದು ಪ್ರಧಾನಿಯವರ ಬೇಟಿ ಬಚಾವೋ ಘೋಷಣೆಯ ಪೊಳ್ಳುತನವನ್ನು ತೋರಿಸುತ್ತದೆ ಎಂದು ಅದು ಹೇಳಿದೆ.

ಹೋರಾಟ ತೀವ್ರಗೊಳ್ಳುತ್ತದೆ-ಸರಕಾರಕ್ಕೆ ಎಚ್ಚರಿಕೆ

‘ಮಹಿಳಾ ಸಮ್ಮಾನ್ ಮಹಾಪಂಚಾಯತ್‌’ನಲ್ಲಿ ಪಾಲ್ಗೊಳ್ಳಲು ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಸೌಹಾರ್ಯ ವ್ಯಕ್ತಪಡಿಸುತ್ತಿರುವ ಸಾವಿರಾರು ಜನರು ದಿಲ್ಲಿಯತ್ತ ಬರುತ್ತಿದ್ದರು. ರೋಹ್ಟಕ್, ಹಿಸಾರ್, ಭಿವಾನಿ, ಜಿಂದ್, ಫತೇಹಾಬಾದ್, ಸಂಪ್ಲಾ, ಪಲ್ವಾಲ್, ಗುರ್ಗಾಂವ್ ಮತ್ತು ಇತರ ಸ್ಥಳಗಳಲ್ಲಿ ಅವರ ಮೇಲೆ ದಬ್ಬಾಳಿಕೆ ಹರಿಯ ಬಿಡಲಾಯಿತು, ಸಾವಿರಾರು ಜನರನ್ನು ಬಂಧಿಸಲಾಯಿತು. ಪಂಜಾಬ್‌ನ ಮಹಿಳೆಯರು ಮತ್ತು ರೈತರನ್ನು ನರ್ವಾನಾ ಬಳಿಯ ಪಂಜಾಬ್-ಹರಿಯಾಣ ಗಡಿಯಲ್ಲಿ ಬಂಧಿಸಲಾಯಿತು.. ಅಂಬಾಲಾ ನಗರದ ಗುರುದ್ವಾರ ಮಂಜಿ ಸಾಹಿಬ್‌ನಲ್ಲಿ ನೂರಾರು ಜನರನ್ನು ಬಂಧಿಸಲಾಯಿತು. ಅನೇಕ ರೈತರನ್ನು ಸಿಂಘು ಗಡಿಯ ಬಳಿ ಬಂಧಿಸಿ ಸೋನೆಪತ್‌ನ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು. ಟಿಕ್ರಿ ಗಡಿಗೆ ತೆರಳುತ್ತಿದ್ದ ಸುಮಾರು ಸಾವಿರ ರೈತರನ್ನು ವಶಕ್ಕೆ ಪಡೆಯಲಾಗಿದೆ. ಎಸ್‍ಕೆಎಂ ನಾಯಕ ರಾಕೇಶ್ ಟಿಕಾಯ್ತ್ ಮತ್ತು 2000 ಕ್ಕೂ ಹೆಚ್ಚು ರೈತರು ಗಾಜಿಪುರ ಗಡಿಯನ್ನು ತಲುಪಿದರು ಅಲ್ಲಿ ಅವರನ್ನು ತಡೆದರು.  ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ರೈತರನ್ನು ಬಂಧಿಸಲಾಗಿದೆ ಎಂದಿರುವ  ಎಸ್‌ಕೆಎಂ ಎಲ್ಲಾ ಪ್ರಜಾಸತ್ತಾತ್ಮಕ ವರ್ಗಗಳಿಗೆ ಪ್ರತಿಭಟನೆಯಲ್ಲಿ ಎದ್ದು ನಿಲ್ಲುವಂತೆ ಕರೆ ನೀಡಿದೆ. ಲೈಂಗಿಕ ಕಿರುಕುಳ ನೀಡಿದವರನ್ನು ಬಂಧಿಸಿ ಶಿಕ್ಷೆಯಾಗುವವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು ಬಿಜೆಪಿ ಸರ್ಕಾರವನ್ನು ಎಸ್‌ಕೆಎಂ ಎಚ್ಚರಿಸಿದೆ.

ಮೇ 28 ‘ಪ್ರಜಾಪ್ರಭುತ್ವಕ್ಕೊಂದು  ಕರಾಳ ದಿನ’

ಹೀಗೆಂದು ದೇಶದ ಸಾವಿರಕ್ಕೂ ಹೆಚ್ಚು ಚಿಂತಕರು, ಸಮಾಜ ಸೇವಕರು, ವಕೀಲರು, ಶಿಕ್ಷಣ ತಜ್ಞರು ಕೂಡ ಖಂಡಿಸಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು, ಬಂಧಿತ ಮಹಿಳಾ ಕುಸ್ತಿಪಟುಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕಿನ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು  ಇವರು ನೀಡಿರುವ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಪ್ರಮುಖ ವಕೀಲರಾದ ಸುಧಾ ಭಾರದ್ವಾಜ್,  ಜೋಯಾ ಹಾಸನ್, ಉತ್ಸಾ ಪಟ್ನಾಯಕ್, ಪ್ರಭಾತ್ ಪಟ್ನಾಯಕ್, ಜವಾಹರ್ ಸರ್ಕಾರ್, ಜಯತಿ ಘೋಷ್, ಮಲ್ಲಿಕಾ ಸಾರಾಭಾಯ್, ಆನಂದ್ ಪಟವರ್ಧನ್  ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *