ಮಂಡ್ಯ | ಗಾಂಧಿ ಹಾಗೂ ಅಂಬೇಡ್ಕರ್‌ ಜಯಂತಿಗೆ ಮಾಂಸಾಹಾರ ನಿಷೇಧ ಏಕೆ? ಅಂಕಣಕಾರ ಶಿವಸುಂದರ್‌

ಮಂಡ್ಯ: ಜಯಂತಿಗಳಿಗೂ ನಮ್ಮ ಆಹಾರದ ಹಕ್ಕಿಗೂ ಏನು ಸಂಬಂಧ?  ಗಾಂಧಿ ಹಾಗೂ ಅಂಬೇಡ್ಕರ್‌ ಜಯಂತಿಯಂದು ಮಾಂಸಾಹಾರ ನಿಷೇಧಿಸುವುದು ಏಕೆ?  ಎಂದು ಅಂಕಣಕಾರ ಶಿವಸುಂದರ್‌ ಪ್ರಶ್ನಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ‘ಬಾಡೂಟ ಬಳಗ’ ವತಿಯಿಂದ ‘ಬಾಡೂಟ ಹೋರಾಟಕ್ಕೆ ಒಂದು ವರ್ಷ’ದ ಅಂಗವಾಗಿ ಮಂಗಳವಾರ ನಡೆದ ‘ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ : ರಾಜ್ಯದಲ್ಲಿ ಘೋರ ದುರಂತ : ಭೀಕರ ಅಪಘಾತದಲ್ಲಿ 17 ಕ್ಕೂ ಹೆಚ್ಚು ಜನ ಸಾವು

ದೇಶದ ‌‌ಇತಿಹಾಸದಲ್ಲಿ ಶ್ರಮಣ ಸಂಸ್ಕೃತಿಗೂ ಬ್ರಾಹ್ಮಣ್ಯ ಸಂಸ್ಕೃತಿಗೂ ನಡೆದಿರುವ ದೊಡ್ಡ ಯುದ್ಧವೇ ಇತಿಹಾಸ ಎಂದು ಅಂಬೇಡ್ಕರ್‌ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು. ‘ಮಹನೀಯರ ಜಯಂತಿಗಳಲ್ಲಿ ಮಾಂಸಾಹಾರ ತಿನ್ನುಬಾರದು ಎಂದು ಸರ್ಕಾರ ಆದೇಶಿಸುತ್ತದೆ. ಯಾವುದೇ ಕಾರ್ಯಕ್ರಮವಿರಲಿ, ಸಸ್ಯಾಹಾರ, ಮಾಂಸಾಹಾರವೆರಡೂ ಇರಬೇಕು’ ಎಂದರು.

‘ಪ್ರಜಾವಾಣಿ– ಅಭಿಮತ’ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಮೊಟ್ಟೆ ಎನ್ನುವ ಹೋರಾಟ ಸಮ್ಮೇಳನಕ್ಕಷ್ಟೇ ಮೀಸಲಾಗುವುದು ಬೇಡ. ಮಾಂಸಹಾರ ತಿನ್ನುವುವವರು ಅಪವಿತ್ರರು ಎಂದೂ ಬಿಂಬಿಸಬಾರದು’ ಎಂದರು.

‘ಕೇರಳದಲ್ಲಿ ‘ಬೀಫ್‌’ ಎಂಬ ಹೆಸರಿದ್ದ ಕಾರಣಕ್ಕೇ ಸಿನಿಮಾವನ್ನು ನಿಷೇಧಿಸಲಾಯಿತು. ಆದರೆ ಸಿನಿಮಾದಲ್ಲಿ ಬೀಫ್‌ ಬಗ್ಗೆ ಏನೂ ಹೇಳಿರಲಿಲ್ಲ’ ಎಂದು ವಿಷಾದಿಸಿದರು.

ಲೇಖಕರಾದ ಸಂತೋಷ್‌ ಗುಡ್ಡಿಯಂಗಡಿ, ಗುರುಪ್ರಸಾದ್‌ ಕಂಟಲಗೆರೆ, ಉ್ರಗನರಸಿಂಹೇಗೌಡ, ಲೋಕೇಶ್‌ ಮೊಸಳೆ ಭಾಗವಹಿಸಿದ್ದರು.

ಇದನ್ನೂ ನೋಡಿ : ಪರ್ಯಾಯ ರಾಜಕಾರಣದ ಕಹಳೆ ಮೊಳಗಿಸಿದ ಸಾವಿರಾರು ಜನ Janashakthi Media

 

Donate Janashakthi Media

Leave a Reply

Your email address will not be published. Required fields are marked *