ಏಕೆಂದರೆ ಅರ್ನಬ್ ಗೋಸ್ವಾಮಿ ಬ್ರಾಂಡಿನ ಮುಖಾಮುಖಿಯ ಪತ್ರಿಕೋದ್ಯಮ ಈಗಲೂ ಮಾರಾಟವಾಗುತ್ತದೆ, ಆಳುವವರ ವಿರುದ್ಧ ಗುರಿಯಿಟ್ಟಾಗಲೂ ಸಹ ಬುದು ಇಂಡಿಗೋ ಬಿಕ್ಕಟ್ಟಿನ ಸಮಯದಲ್ಲಿ ಸಾಬೀತಾಯಿತು. ಅರಾವಳಿಯ ವಿಷಯದಲ್ಲಂತೂ ಒಂದು ವಿಶಿಷ್ಟ ಕಾರ್ಪೊರೇಟ್ ಪದರವೂ ಇದೆ ಎಂದು ಒಳಗಿನವರು ಹೇಳುತ್ತಾರೆ. .ಆದರೆ ನಿಜವಾದ ತರುಳು ಇರುವುದು ಕೋಮುವಾದದಂತಹ ವಿಷಯಗಳ ಬಗ್ಗೆ ಅರ್ನಬ್ ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ ಎಂಬುದರಲ್ಲಿ. ಪ್ರೈಮ್-ಟೈಮ್ ಟೆಲಿವಿಷನ್‌ನಲ್ಲಿ, ಭಿನ್ನಮತವನ್ನು ಆಗಾಗ ಸಹಿಸಿಕೊಳ್ಳಬಹುದು, ಆದರೆ, ನಿಷ್ಠೆ ಎಂಬುದಕ್ಕೆ ಮಾತ್ರ ತನ್ನ ಮಿತಿಗಳ ಅರಿವಿರುತ್ತದೆ ಎನ್ನುತ್ತಾರೆ ಈ ಪ್ರಖ್ಯಾತ ಪತ್ರಕರ್ತರು.
-ಅನು: ಜಿ.ಎಸ್.ಮಣಿ
ಅರ್ನಬ್ ಗೋಸ್ವಾಮಿ ಮೋದಿ ಸರ್ಕಾರವನ್ನು ಪ್ರಶ್ನಿಸುವ ಕಲೆಯನ್ನು ಹಠಾತ್ತನೆ ಮರುಶೋಧನೆ ಮಾಡಿರುವುದು ಸುದ್ದಿ ಮಾಧ್ಯಮಗಳ ನ್ಯೂಸ್‍ರೂಂಗಳಲ್ಲಿಯೂ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯೂ ನಾಲಗೆಗಳು ಹೊರಳುವಂತೆ ಮಾಡಿದೆ. ಇದನ್ನು ಬೆಂಬಲಿಗರು ಇದನ್ನು ಬಹುನಿರೀಕ್ಷಿತ ಮೂಲ ನಮೂನೆಗೆ ಮರಳಿದ್ದಾರೆ ಎಂದು ಶ್ಲಾಘಿಸುತ್ತಿದ್ದರೆ ವಿಮರ್ಶಕರು ಗುಪ್ತ ಉದ್ದೇಶವಿರಬಹುದು ಎಂದು ಹುಡುಕುತ್ತಿದ್ದಾರೆ. ಹಾಗಾದರೆ ನಿಜವಾಗಿಯೂ ಏನು ಬದಲಾಗಿದೆ?
ಅರ್ನಬ್ ಗೋಸ್ವಾಮಿ ಹೇಗೆ ಕೆಲಸ ಮಾಡುತ್ತಾರೆಂದು ತಿಳಿದಿರುವ ಸುಮಾರು ಒಂದು ಡಜನ್ ಜನರೊಂದಿಗೆ ನಾವು ಸಂಭಾಷಣೆ ನಡೆಸಿದೆವು. ಇವರಲ್ಲಿ ಹೆಚ್ಚಿನವರು ಇದೇತರಹದ ಗೊಂದಲಕ್ಕೊಳಗಾಗಿದ್ದರು. ಆದರೆ ಅವರೆಲ್ಲರೂ ಇದು ರಾಜಕೀಯ ಜಾಗೃತಿಗಿಂತ ಹೆಚ್ಚಾಗಿ ವ್ಯವಹಾರದ ಲೆಕ್ಕಾಚಾರದತಿರುವು ಇರಬಹುದು ಎಂದೇ ಸೂಚಿಸಿದರು.
ಇದನ್ನೂ ಓದಿ: ವ್ಯಾಪಕ ಭ್ರಷ್ಟಾಚಾರ: ಕೋಲಾರದ ಎಲ್ಲಾ 25 ಗ್ರಾಮ ಪಂಚಾಯಿತಿಗಳ ವಿರುದ್ಧ ದೂರು ದಾಖಲು
ಒಳಗಿನವರು ಹೇಳುವಂತೆ, ಇದಕ್ಕೆಕಿಡಿಯಾದದ್ದುಇಂಡಿಗೋ ಬಿಕ್ಕಟ್ಟು. ನಾವು ಈ ಹಿಂದೆ ವರದಿ ಮಾಡಿದಂತೆ, ಈ ವಿಷಯವನ್ನು ಸಂಪೂರ್ಣವಾಗಿ ಎತ್ತಿಕೊಳ್ಳುವ ನಿರ್ಧಾರವನ್ನು ಒಂದು ಸರಳ ಲೆಕ್ಕಾಚಾರದ ಮೇಲೆ ಕೈಗೊಳ್ಳಲಾಗಿತ್ತು. ಸಾರ್ವಜನಿಕ ಆಕ್ರೋಶ ಬಹಳಷ್ಟಿದ್ದರೂ, ಯಾವುದೆ ಟಿವಿ ಛಾನೆಲ್ ಈ ಸುದ್ದಿ ತನ್ನದು ಎನ್ನುವ ಧೈರ್ಯ ಮಾಡಲಿಲ್ಲ. ರಿ ಪಬ್ಲಿಕ್ ಅದನ್ನು ಮಾಡಿತು. ಮೊದಲು ಟಿಡಿಪಿಯನ್ನು ಅದು ಟೀಕಿಸಿತು ಮತ್ತು ಈಜೂಜು ಫಲ ನೀಡಿತು. ಆ ವಾರ ಟಿಆರ್‌ಪಿ ಸಂಖ್ಯೆ ತೀವ್ರವಾಗಿ ಏರಿತು; ಮುಖಾಮುಖಿಯ ಪತ್ರಿಕೋದ್ಯಮ ಇನ್ನೂ ಮಾರಾಟವಾಗುತ್ತಿದೆ, ಆಳುವ ವ್ಯವಸ್ತೆಯ ವಿರುದ್ಧ ಗುರಿಯಿಟ್ಟಾಗಲೂ ಕೂಡ, ಎಂಬುದಕ್ಕೆ ಪುರಾವೆಯನ್ನು ನೀಡಿತು.
ನಂತರ ಕಾಣಬಂದದ್ದು ಚಿರಪರಿಚಿತ ಆಟ. ಅರ್ನಬ್ ಮೋದಿ ಸರ್ಕಾರದ ವಿರುದ್ಧ ದೆಹಲಿಯ ವಿಷಕಾರಿ ಗಾಳಿಯ ಬಗ್ಗೆ, ಹರಿಹಾಯ್ದರು, ಅರಾವಳಿ ಪರ್ವತ ಶ್ರೇಣಿಯಲ್ಲಿನ ವಿನಾಶದ ಬಗ್ಗೆ ಬೆಳಕು ಚೆಲ್ಲಿದರು ಮತ್ತು ತಮ್ಮ ಮಗನ ಮದುವೆಯಲ್ಲಿ ಪಟಾಕಿ ಸಿಡಿಸಲು 70 ಲಕ್ಷ ರೂಪಾಯಿ ಖರ್ಚು ಮಾಡಿದ ಆರೋಪ ಹೊತ್ತಿರುವ ಮಧ್ಯಪ್ರದೇಶದ ಬಿಜೆಪಿ ನಾಯಕನ ಮೇಲೂ ಗುರಿಯಿಟ್ಟರು. ಇದು ವೀಕ್ಷಕರಲ್ಲಿ ಸಂಚಲನ ಮೂಡಿಸಿತು. ಗೋಸ್ವಾಮಿಯನ್ನು ಮೆಚ್ಚಲಿ ಅಥವಾ ಪ್ರಶ್ನಿಸಲಿ, ಮುಖ್ಯ ವಿಷಯವೆಂದರೆ ಅವರೊಂದು ಚರ್ಚೆಯ ವಿಷಯವಾಗಿಬಿಟ್ಟರು.
ಅರಾವಳಿಯ ಬಗ್ಗೆ ಹೇಳಿದ್ದು ಕೇವಲ ರೇಟಿಂಗ್‌ಗಳ ದೃಷ್ಟಿಯಿಂದಲ್ಲ, ಬದಲಾಗಿ ಇದೊಂದು ವಿಶಿಷ್ಟವಾದ ಕಾರ್ಪೊರೇಟ್ ಪದರವನ್ನು ಸಹ ಹೊಂದಿವೆ ಎಂದು ಒಳಗಿನವರು ಹೇಳುತ್ತಾರೆ
ಇತ್ತೀಚಿನವರೆಗೂ, ಅರ್ನಬ್ ಅದಾನಿ ಗುಂಪಿನ ಅತ್ಯಂತ ಕಟ್ಟಾ ಸಾರ್ವಜನಿಕ ರಕ್ಷಕರಲ್ಲಿ ಒಬ್ಬರಾಗಿದ್ದರು. ವಿಶೇಷವಾಗಿ ಹಿಂಡೆನ್‌ಬರ್ಗ್ ವರದಿಯ ಪರಿಣಾಮದ ಸಮಯದಲ್ಲಿ. ಇಂದು, ಆ ಸಮೀಕರಣ ಬದಲಾಗಿದೆ. ಅದಾನಿ ಎನ್‌ಡಿಟಿವಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ಅದು ನೇರ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಈಗ ಸಂಪನ್ಮೂಲಗಳಿಂದ ತುಂಬಿರುವ ಎನ್‌ಡಿಟಿವಿ, ರಿಪಬ್ಲಿಕ್ ಸೇರಿದಂತೆ ಪ್ರತಿಸ್ಪರ್ಧಿ ನ್ಯೂಸ್‍ರೂಂಗಳಿಂದ ಪ್ರತಿಭೆಗಳ ಬೇಟೆ ನಡೆಸುತ್ತಿದೆ ಮತ್ತು ಮಾರುಕಟ್ಟೆಯನ್ನು ಕಸಿದುಕೊಳ್ಳುವ ಜಾಹೀರಾತು ಪ್ಯಾಕೇಜ್‌ಗಳನ್ನು ನೀಡುತ್ತಿದೆ.
“ಅದಾನಿ-ಎನ್‌ಡಿಟಿವಿ ಯಂತ್ರವು ನಮಗೆ ವಾಣಿಜ್ಯಿಕವಾಗಿ ಹಾನಿ ಮಾಡುತ್ತಿದೆ” ಎಂದು ರಿಪಬ್ಲಿಕ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿದರು. “ಆದ್ದರಿಂದ ಅರ್ನಬ್ ಅರಾವಳಿವಿಷಯದಲ್ಲಿ ಸರ್ಕಾರದ ಮೇಲೆ ದಾಳಿ ಮಾಡುತ್ತಿರುವಂತೆ ತೋರುತ್ತಿರುವಾಗ, ಅವರು ವಾಸ್ತವವಾಗಿ ಅದಾನಿಯನ್ನು ಬೆನ್ನಟ್ಟುತ್ತಿದ್ದಾರೆ.”
ಹೀಗಿದ್ದರೂ, ರಿಪಬ್ಲಿಕ್ ಸುದ್ದಿ ಕೋಣೆಯ ಒಳಗೆ, ಈ ಕಾರ್ಯತಂತ್ರದ ಲೆಕ್ಕಾಚಾರಗಳ ಬಗ್ಗೆಹೆಚ್ಚಾಗಿ ಮಾತೇ ಇಲ್ಲ. ಸಂಪಾದಕೀಯ ಹಾದಿಯನ್ನು ಸರಿಪಡಿಸಿಕೊಳ್ಳಬೇಕೆಂಬ ಔಪಚಾರಿಕ ಘೋಷಣೆಯನ್ನೇನೂಮಾಡಿಲ್ಲ ಎಂದು ಹಿರಿಯ ಪತ್ರಕರ್ತರು ಸಹ ಹೇಳುತ್ತಾರೆ. “ಸಂಪಾದಕೀಯ ಸಭೆಗಳಲ್ಲಿ ಬಹಿರಂಗವಾಗಿ ಏನನ್ನೂ ಚರ್ಚಿಸಲಾಗಿಲ್ಲ” ಎಂದು ಒಬ್ಬ ವರದಿಗಾರ ಹೇಳಿದರು.
ಬಹಿರಂಗವಾಗಿ ಚರ್ಚಿಸಲ್ಪಟ್ಟಿರುವುದು ದತ್ತಾಂಶ.ಗೋಸ್ವಾಮಿ ಸರ್ಕಾರವನ್ನು ಕೆಣಕುತ್ತಿರುವ ಕ್ಲಿಪ್‌ಗಳು ವೈರಲ್ ಆಗುತ್ತಿವೆ.ಟಿಆರ್‌ಪಿಗಳು ಏರುತ್ತಿವೆ. ಜಾಹೀರಾತು ದರಗಳು ಮೇಲಕ್ಕೆರಿವೆ. ಬೊಬ್ಬಾಟದ ಮೇಲೆಯೇಕಟ್ಟಲ್ಪಟ್ಟಒಂದು ಚಾನೆಲ್‌ಗೆ ಟಿಆರ್‌ಪಿಗಳಿಂದ ಸಿಗುವ ಮಾಹಿತಿಯನ್ನು ನಿರ್ಲಕ್ಷಿಸುವುದು ಕಷ್ಟ ಮತ್ತು ಕೈಬಿಡುವುದಂತೂ ಇನ್ನೂ ಕಷ್ಟ.
ಇದನ್ನೂ ನೋಡಿ: ಬೀದಿಯಲ್ಲಿ ಕ್ರಿಸ್ಮಸ್ ವಿರುದ್ಧ ಭಜರಂಗಿಗಳ ಅಟ್ಟಹಾಸಚರ್ಚ್ ನಲ್ಲಿ ಪ್ರಧಾನಿಗಳ ಮಂದಹಾಸ?? Janashakthi Media
ಮೋದಿ ಸರ್ಕಾರದ ವಿಷಯದಲ್ಲಿ, ಇಂತಹ ಏರ್ಪಾಡುಗಳ ಪರಿಚಯ ಹೊಂದಿರುವವರು ಇದು ಒಂದು ಅಘೋಷಿತ ಕದನ ವಿರಾಮ ಎಂದು ವಿವರಿಸುತ್ತಾರೆ. ಆಗಾಗ ಟೀಕೆಗಳನ್ನು ಮಾಡುತ್ತಿದ್ದರೆ ಅದಕ್ಕೆ ಅನುಮತಿ ಇದೆ ಮತ್ತು ಅದು ಉಪಯುಕ್ತವೂ ಹೌದು.ಆದರೆ ಮೂಲ ಸೈದ್ಧಾಂತಿಕ ವಿಷಯದಲ್ಲಿ, ಎಚ್ಚರಿಕೆಯಗಡಿಗಳು ಇದ್ದೇ ಇವೆ. ಮತ್ತು ವಿಷಯದ ನಿಜವಾದ ತಿರುಳು ಇರುವುದು ಇಲ್ಲೇ. ಕೋಮುವಾದದಂತಹ ವಿಷಯಗಳ ಬಗ್ಗೆ ಅರ್ನಬ್ ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ?
ಇಂಡಿಗೋ ಮತ್ತು ಅರಾವಳಿಗಳ ವೀಡಿಯೊಗಳು ವೈರಲ್ ಆಗುತ್ತಿದ್ದ ಸಮಯದಲ್ಲೇ, ತಿರುಪರಣಕುಂದ್ರಂ ದೀಪಂ ವಿವಾದದ ಕುರಿತು ಅರ್ನಬ್ ಆರ್‌ಎಸ್‌ಎಸ್ ಸಿದ್ಧಾಂತಿ ಗುರುಮೂರ್ತಿಯವರ ಸಂದರ್ಶನ ನಡೆಸಿದರು ಮತ್ತು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ವಾಗ್ದಂಡನೆಗೆ ಒತ್ತಾಯಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಟೀಕಿಸಿದರು ಎಂಬುದನ್ನು ನಾವು ಮರೆಯಬಾರದು.
ಪ್ರೈಮ್-ಟೈಮ್ ಟೆಲಿವಿಷನ್‌ನಲ್ಲಿ, ಭಿನ್ನಮತವನ್ನುಆಗಾಗಸಹಿಸಿಕೊಳ್ಳಬಹುದು, ಆದರೆ, ನಿಷ್ಠೆಎಂಬುದಕ್ಕೆ ಮಾತ್ರ ವ್ಯವಹಾರಗಳಲ್ಲಿ ಇರುವಂತೆ, ತನ್ನ ಮಿತಿಗಳ ಅರಿವಿರುತ್ತದೆ.
(ಕೃಪೆ: ನ್ಯೂಸ್‍ಮಿನಿಟ್/ನ್ಯೂಸ್ ಲಾಂಡ್ರಿ, ಡಿಸೆಂಬರ್ 26)
