ಮೈ ಲಾರ್ಡ್ ಗೆ ಇದೆಲ್ಲಾ ಯಾಕೆ ಬೇಕು?

ಇತ್ತೀಚೆಗೆ ನಿವೃತ್ತ ಸಿಜೆಐ ಚಂದ್ರಚೂಡ್ ಅವರು ಬಾಬರಿ ಮಸೀದಿ ತೀರ್ಪನ್ನು ಸಮರ್ಥಿಸಿಕೊಂಡು (ಆ ಪೀಠದ ಭಾಗವಾಗಿದ್ದರು) ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿ ಮಸೀದಿ ಕಟ್ಟಿದ್ದೇ ಅಕ್ರಮ ಎಂದು ಟಿಪಿಕಲ್ ಆರೆಸ್ಸೆಸ್ ಭಾಷೆಯಲ್ಲಿ ಮಾತನಾಡಿದರು. ಆ ಮೂಲಕ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮಿತಿಗಳು ಮತ್ತು ಅದು ತಲುಪಿದ ದುರಂತದ ಹಂತಕ್ಕೆ ಉದಾಹರಣೆಯಾದರು.
  • ಬಿ. ಶ್ರೀಪಾದ್‌ ಭಟ್

ಇವರನ್ನೆಲ್ಲ ನೋಡಿದಾಗ ನ್ಯಾಯಮೂರ್ತಿಗಳು ಹೇಗಿರಬೇಕು, ಅವರ ಬದ್ಧತೆ ಯಾರಿಗೆ? ಎನ್ನುವ ಪ್ರಶ್ನೆಗೆ ಉತ್ತರ ಬೇಕೆಂದರೆ 1960ರಲ್ಲಿ ಬಿಡುಗಡೆಯಾದ INHERIT THE WIND ಸಿನಿಮಾ ನೋಡಬೇಕು.

ಈ ಸಿನಿಮಾ ‘ನನಗೆ ಹಳೆ ಕಾಲದ ಧರ್ಮವನ್ನು ಕೊಡು, ಅದು ನನಗೆ ಬೇಕಾದಷ್ಟಾಯಿತು’ ಎನ್ನುವ ಸಾಲುಗಳೊಂದಿಗೆ ಪ್ರಾರಂಭವಾಗುತ್ತದೆ.

1920ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿದ ಈ ಸಿನಿಮಾ ಬೈಬಲ್ ಪರ ಮತ್ತು ಡಾರ್ವಿನ್ ವಿಕಾಸವಾದದ ವೈಜ್ಞಾನಿಕ ತಿಳುವಳಿಕೆಯ ನಡುವಿನ ವ್ಯಾಜ್ಯದ ಕುರಿತಾಗಿ ನ್ಯಾಯಲಯದೊಳಗೆ ನಡೆಯುವ ವಿಚಾರಣೆ ಕತೆ.

ಇ‌ದನ್ನೂ ಓದಿ: ಧಾರವಾಡ | ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಪ್ರಮಾಣಾತ್ಮಕ ಪ್ರಾತಿನಿಧ್ಯ ಚುನಾವಣಾ ಪದ್ಧತಿ ಜಾರಿಗೆ ಬರಲಿ – ಡಾ. ಕೆ. ಪ್ರಕಾಶ್

ಶಿಕ್ಷಕ ಕೇಟ್ಸ್ ಶಾಲೆಯಲ್ಲಿ ಡಾರ್ವಿನ್ ವಿಕಾಸವಾದದ ಕುರಿತು ಪಾಠ ಮಾಡುತ್ತ ಮಂಗನಿಂದ ಮಾನವ ತತ್ವವನ್ನು ವಿವರಿಸುತ್ತಾನೆ. ಆದರೆ ಆಗ ಈ ಸಿದ್ದಾಂತವು ಕಾನೂನು ವಿರೋಧಿ ಎಂದು ಪರಿಗಣಿಸಲಾಗಿರುತ್ತದೆ. ದೈವವೇ ಪ್ರದಾನ, ಬೈಬಲ್ ಪವಿತ್ರ ಎಂದು ಪ್ರಭುತ್ವ ಫರ್ಮಾನು ಹೊರಡಿಸಿರುತ್ತದೆ. ಹೀಗಾಗಿ ಶಿಕ್ಷಕ ಕೇಟ್ಸ್ ಬೈಬಲ್ ನ್ನು ಹೀಗೆಳೆದ ಎನ್ನುವ ಆರೋಪದ ಮೇಲೆ ಬಂಧಿಸಿಸುತ್ತಾರೆ.

ಕೋರ್ಟ್ ನಲ್ಲಿ ಆ ಕಾಲದ ಇಬ್ಬರು ಖ್ಯಾತ ನ್ಯಾಯವಾದಿಗಳ ನಡುವೆ ಪರ, ವಿರೋಧದ ಕುರಿತು ಬಿರುಸಿನ, ಏರುದನಿಯ ವಾಗ್ವಾದ ನಡೆಯುತ್ತದೆ. ಇದೆ ಇಡೀ ಸಿನಿಮಾದ ಜೀವಾಳ.

ಅಲ್ಲಿನ ಸಂಭಾಷಣೆಗಳ ತೀಕ್ಷಣತೆ ಮತ್ತು ವೈಚಾರಿಕ ಪ್ರಖರತೆ ಇಂದಿಗೂ ನಮ್ಮಲ್ಲಿ ಬೆರಗು ಮೂಡಿಸುತ್ತದೆ.

ಶಿಕ್ಷಕ ಕೇಟ್ಸ್ ಪರ ವಾದಿಸುವ ಸ್ಪೆನ್ಸರ್ ಟ್ರೇಸಿ ಡಾರ್ವಿನ್ ವಿಕಾಸವಾದವನ್ನು ಬೆಂಬಲಿಸುತ್ತಾ ‘ಇಗರ್ಜಿಗಿಂತಲೂ ತಿಳುವಳಿಗೆ ದೊಡ್ಡ ಸ್ಮಾರಕ’ ಎಂದು ಹೇಳುತ್ತಾನೆ. ಚರ್ಚ್ ಮತ್ತು ಪ್ರಭುತ್ವ ಬೇರೆ ಬೇರೆಯಾಗಿರಬೇಕು ಎನ್ನುವ ಟ್ರೇಸಿ ಮೂಲಭೂತವಾದವನ್ನು ಮೊನಚಾಗಿ ಟೀಕಿಸುತ್ತಾನೆ. ಟ್ರೇಸಿ ‘ಮತಾಂಧತೆ ಮತ್ತು ಅಜ್ಞಾನ ಎರಡಕ್ಕೂ ಬಿಡುವಿರುವುದಿಲ್ಲ, ಅವಕ್ಕೆ ಪೂರೈಸುತ್ತಲೆ ಇರಬೇಕು’ ಎಂದು ಹೇಳುತ್ತಾನೆ

ಬಾಬರಿ ಮಸೀದಿ ಪ್ರಕರಣದಲ್ಲಿ ರಾಮ ಜನ್ಮಭೂಮಿ ವಿವಾದ ಹುಟ್ಟು ಹಾಕಿದ ಸಂಘ ಪರಿವಾರದ ಪರ ತೀರ್ಪು ಕೊಡುವ ಸುಪ್ರೀಂ ಕೋರ್ಟ ಸಂವಿಧಾನ ಪೀಠವು ಕಡೆಗೂ ‘ಪ್ರಭುತ್ವ ಮತ್ತು ಧರ್ಮ ಬೇರೆ ಬೇರೆ’ ಎಂದು ಹೇಳುವ ದಿಟ್ಟತೆ ತೋರಲಿಲ್ಲ.

ಕೋರ್ಟ್ ನ ಈ ಪ್ರತಿಕೂಲ ತೀರ್ಪು ಬಂದಾಗ ‘INHERIT THE WIND’ ಸಿನಿಮಾ ಮತ್ತೆ ಮತ್ತೆ ಕಾಡುತ್ತದೆ. ಇದು ಈಗಿನ ಕೋರ್ಟ್ ತೀರ್ಪುಗಳಿಗೆ ಪಕ್ಕಾ antithesis ಸಿನಿಮಾ.

ಮೈ ಲಾರ್ಡ್ ಗೆ ಇದೆಲ್ಲಾ ಯಾಕೆ ಬೇಕು? ಅಲ್ಲವೇ?

ಇದನ್ನೂ ನೋಡಿ: ಧರ್ಮಸ್ಥಳ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು: ಸೆಪ್ಟೆಂಬರ್ 25ರಂದು ಬೃಹತ್ ‘ನ್ಯಾಯ ಸಮಾವೇಶ

Donate Janashakthi Media

Leave a Reply

Your email address will not be published. Required fields are marked *