ಕೋವಿಡ್‌ನಿಂದ ಭಾರತದಲ್ಲಿ ಸಾವಿಗೀಡಾದವರು 47 ಲಕ್ಷ ಮಂದಿ; ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ವಿಶ್ವದಲ್ಲಿ ಕೋವಿಡ್‌ನಿಂದ ಮೃತಪಟ್ಟವರು 60 ಲಕ್ಷ ಮಂದಿ ಎಂದು ಕೋವಿಡ್‌ ಡೇಟಾ ತಿಳಿಸುತ್ತದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ಪ್ರಕಾರ ವಿಶ್ವದಲ್ಲಿ 1.5 ಕೋಟಿ ಮಂದಿ ಕೋವಿಡ್ ನಿಂದ ಮೃತ ಪಟ್ಟಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿಯೂ ಕೋವಿಡ್‌ ಕುರಿತ ಡೇಟಾ ವರದಿ ಪ್ರಕಾರ ಜನವರಿ 2020ರಿಂದ ಡಿಸೆಂಬರ್‌ 2021ರವರೆಗೂ ಭಾರತದಾದ್ಯಂತ ಕೋವಿಡ್‌ ಕಾರಣಗಳಿಂದ ಸಾವಿಗೀಡಾದವರ ಸಂಖ್ಯೆ 47,40,894 ಮುಟ್ಟಿತ್ತು. ಆರೋಗ್ಯ ಇಲಾಖೆಯ ದಾಖಲೆಯ ಪ್ರಕಾರ 2021ರ ಅಂತ್ಯಕ್ಕೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 4,81,000. ಪ್ರಸ್ತುತ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,000 ದಾಟಿದೆ.

ಆದರೆ, ಭಾರತದ ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ಅಧಿಕೃತ ಡೇಟಾಗಿಂತ 10 ಪಟ್ಟು ಹೆಚ್ಚು ಮಂದಿ ನಿಧನ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದು ಬರುತ್ತದೆ.

ಆಗ್ನೇಯಾ ಏಷ್ಯ, ಯುರೋಪ್, ಅಮೇರಿಕಾ ದೇಶಗಳು ಈ ಸಾಂಕ್ರಾಮಿಕ ರೋಗದಿಂದ ಹೆಚ್ಚು ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್  ವರದಿ ಬಿಡುಗಡೆಗೊಳಿಸಿದ್ದು, ಮುಂದೆ ಆರೋಗ್ಯ ತುರ್ತು ಪರಿಸ್ಥಿತಿಯ ಬಗ್ಗೆ ಹೆಚ್ಚು ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ.

ಕೆಲವು ಮಾಧ್ಯಮ ವರದಿಗಳು ಹಾಗೂ ತನ್ನದೇ ಆದ ಗಣಿತ ಮಾದರಿಯನ್ನು ಅನುಸರಿಸಿ ಅದು ಅಧ್ಯಯನ ನಡೆಸಿದೆ ಎಂದು ಹೇಳಲಾಗಿದೆ.

ವಿಜ್ಞಾನಿಯ ಸಂಶೋಧನೆಯ ಪ್ರಕಾರ ಕೋವಿಡ್ ನಿಂದ ಸಾವಿಗೀಡಾದವರ ಸಂಖ್ಯೆ ಜನವರಿ 2020ರಿಂದವರ್ಷದ ಕೊನೆ ತಿಂಗಳ ಒಳಗೆ ಒಟ್ಟು 1.33 ಕೋಟಿಯಿಂದ 1.66 ಕೋಟಿ ಜನರು ಸಾವನ್ನಪ್ಪಿದ್ದಾರೆಂದು ಅಭಿಪ್ರಾಯ ಪಟ್ಟಿದ್ದಾರೆ.

ಅಂಕಿಅಂಶಗಳು ದೇಶಗಳು ವರದಿ ಮಾಡಿದ ಅಂಕಿಅಂಶಗಳ ಮಾದರಿಯನ್ನು ಆಧರಿಸಿದೆ.

ಆರೋಗ್ಯ ಸಂಸ್ಥೆಯ ಸಾವಿನ ವರದಿಯು ಕೋವಿಡ್‌ನಿಂದ ನೇರವಾಗಿ ಸಂಭವಿಸಿದ ಸಾವುಗಳಷ್ಟೇ ಅಲ್ಲದೆ, ಕೋವಿಡ್‌ನಿಂದ ಮತ್ತಿತರ ಅನಾರೋಗ್ಯ ಹಾಗೂ ಸಮಾಜದಲ್ಲಿ ಆದ ಏರುಪೇರಿನಿಂದ ಆದ ಸಾವಿನ ಸಂಖ್ಯೆಯನ್ನೂ ಒಳಗೊಂಡಿದೆ. ಇದೇ ಆಧಾರದಲ್ಲಿ ಅಧ್ಯಯನ ನಡಸಲಾಗಿದೆ.

ಲ್ಯಾನ್ಸೆಟ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಜನವರಿ2020ರಿಂದಡಿಸೆಂಬರ್ 2021ರವರೆಗೆ 18 ದಶಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸಿಟಿಟ್ಯೂಟ್  ಆಫ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯ ಮಾಪನದ ವಿಜ್ಞಾನಿಗಳು ಊಹಿಸಿದ್ದಾರೆ.

ಭಾರತದಲ್ಲಿ ಮೂರು ಮಿಲಿಯನ್ ಗಿಂತ ಕೋವಿಡ್ನಿಂದ ಹೆಚ್ಚು ಸಾವು ಸಂಭವಿಸಿದೆ ಎಂದು ಕೆನಾಡದ ಸಂಶೋಧಕರ ಅಭಿಪ್ರಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *