ಈ ಒಳ್ಳೆಯ ಹೆಂಗಸರೆಂದರೆ ಯಾರು?

-ಹಿಂದಿ- ಅಂಶುಕುಮಾರ್
-ಕನ್ನಡಕ್ಕೆ: ಸುನೀತಹೆಬ್ಬಾರ್

ಮೌನವಾಗಿದ್ದವರು ಆಲಸಿಯಾದರು
ನಗುತ್ತಿದ್ದವರು ಹರಟೆಮಲ್ಲಿಯಾದರು.

ಏಕೆಂದರೆ, ಹೆಂಗಸರ ಇತಿಹಾಸವೇ
ಹೀಗೆ ದಾಖಲಾಗಿದೆ….

ಇದನ್ನೂ ಓದಿ: ಮೂಡ ಹಗರಣ: ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 – 40 ನಿವೇಶನ ಹಂಚಿಕೆ ಪತ್ತೆ

ಅಗ್ನಿ ಪರೀಕ್ಷೆಯ ನಂತರವೂ
ಸೀತೆ ಒಳ್ಳೆಯವಳಾಗಲಿಲ್ಲ,

ವಸ್ತಾಪಹರಣವನ್ನು ಸಹಿಸಿಯೂ
ದ್ರೌಪದಿಯ ಗುಣಗಾನವೇನೂ ಆಗಲಿಲ್ಲ,

ಲಕ್ಷ್ಮಣನ ಪತ್ನಿ ಉರ್ಮಿಳೆಯ ತ್ಯಾಗ
ಜನರ ನೆನಪಲ್ಲೂ ಇಲ್ಲ.!

ಹಾಗಾದರೆ ,
ಈ ಒಳ್ಳೆಯ ಹೆಂಗಸರೆಂದರೆ ಯಾರು?

ಇದನ್ನೂ ನೋಡಿ: ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media

Donate Janashakthi Media

Leave a Reply

Your email address will not be published. Required fields are marked *