ಫೆಬ್ರುವರಿ 16ಕ್ಕೆ ಲೇಖಕ, ಚಿಂತಕ ರಾಜಕೀಯ ನಾಯಕ ಗೋವಿಂದ ಪನ್ಸಾರೆ ಅವರ ಮಾರಣಾಂತಿಕ ಹಲ್ಲೆಯಲ್ಲಿ ಮಡಿದು 9 ವರ್ಷಗಳಾಗುತ್ತವೆ. ಆದರೂ, ಇನ್ನೂ ಗೋವಿಂದ ಪನ್ಸಾರೆ ಕೊಂದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಕುರಿತು ಸುಮಾರು 40 ಅಂತರರಾಷ್ಟ್ರೀಯ ಎಡ ಪ್ರಕಾಶಕರ ಸಂಘಟನೆಗಳು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅದರ ಕನ್ನಡ ಸಾರಾಂಶ ಈ ಕೆಳಗಿನಂತಿದೆ.
ಗೋವಿಂದ ಪನ್ಸಾರೆಯವರನ್ನು ಕೊಂದವರಾರು?
2013, ಫೆಬ್ರವರಿ 16 ರಂದು ಗೋವಿಂದ ಪನ್ಸಾರೆ ಮತ್ತು ಉಮಾ ಪನ್ಸಾರೆ ಬೆಳಗಿನ ವಾಯು ವಿಹಾರಕ್ಕೆ ಹೋಗಿದ್ದರು. ಮೋಟಾರು ಸೈಕಲ್ಲಿನಲ್ಲಿ ಬಂದ ಜನರು ಅವರ ಬಳಿ ನಿಂತು ಗುಂಡು ಹಾರಿಸಿ ಜಾಗ ಖಾಲಿ ಮಾಡಿದರು. ನಾಲ್ಕು ದಿನಗಳ ನಂತರ ಫೆಬ್ರವರಿ 20ರಂದು ಗೋವಿಂದ ಪನ್ಸಾರೆ ಕೊನೆಯುಸಿರೆಳೆದರು. ಉಮಾ ಪನ್ಸಾರೆ ಬದುಕುಳಿದರು, ಆದರೆ ಆ ದಾಳಿಯಿಂದ ಸಂಕಟಪಟ್ಟರು. ಗೋವಿಂದ ಪನ್ಸಾರೆ ಕಮ್ಯೂನಿಸ್ಟರಾಗಿದ್ದರು. ಅವರು ಬರೆದ ʻʻಶಿವಾಜಿ ಯಾರುʼʼ (ಲೆಫ್ಟ್‌ವರ್ಡ್ ಬುಕ್ಸ್, ನವದೆಹಲಿ) ಎಂಬ ಪುಸ್ತಕವು ಬಲಪಂಥೀಯರಿಗೆ ಕಿರಿಕಿರಿ ಉಂಟುಮಾಡಿತು. 17ನೇ ಶತಮಾನದ ಮಹಾನ್ ಹೋರಾಟಗಾರನ ಬದುಕನ್ನು ಕುರಿತ ವಾಸ್ತವ ಚಿತ್ರಣ ಅವರಿಗೆ ಹಿಡಿಸಲಿಲ್ಲ.
ಬರಹಗಾರ ಹಾಗೂ ಕಮ್ಯುನಿಸ್ಟರಾಗಿದ್ದ ಗೋವಿಂದ ಪನ್ಸಾರೆಯವರನ್ನು ಕೊಂದವರಾರು? ಮಹಾರಾಷ್ಟ್ರದ ಪೊಲೀಸರು ಈ ಪ್ರಕರಣದಲ್ಲಿ ಪರಿಹಾರ ಕಾಣಲು ಅಸಮರ್ಥರಾಗಿದ್ದಾರೆ. ಸರಿ ಸುಮಾರು ಒಂದು ದಶಕ ಕಳೆದರೂ ಪೊಲೀಸರು ನಿರ್ವಿವಾದ ಅಂಶಗಳನ್ನು ಕಲೆ ಹಾಕಲಿಲ್ಲ. ಹಾಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಲಿಲ್ಲ. ಪನ್ಸಾರೆಯವರ ಹತ್ಯೆಯ ಹಿಂದೆಯೇ ಡಾ.ನರೇಂದ್ರ ದಭೋಲ್ಕರ್(ಆಗಸ್ಟ್ 20, 2013), ಡಾ.ಎಂ.ಎಂ.ಕಲಬುರ್ಗಿ (ಆಗಸ್ಟ್ 30, 2015) ಮತ್ತು ಶ್ರೀಮತಿ ಗೌರಿ ಲಂಕೇಶ್ (ಸೆಪ್ಟೆಂಬರ್ 5, 2017) ಮುಂತಾದ ಹಲವಾರು ಬರಹಗಾರರು, ವಿಚಾರವಾದಿಗಳು, ಜಾತ್ಯತೀತವಾದಿಗಳು ಹತ್ಯೆಗೊಳಗಾದರು. ಈ ಎಲ್ಲಾ ಪ್ರಕರಣಗಳಲ್ಲಿ ದೊರೆತ ಮಾಹಿತಿಗಳ ಪ್ರಕಾರ ಸನಾತನ ಸಂಸ್ಥಾ ಎಂಬ ಹಿಂದೂ ಭಯೋತ್ಪಾದಕ ಗುಂಪುಗಳು ಹಾಗೂ ಅಂತಹ ಸಂಘಟನೆಗಳು ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ.
ಭಾರತದಲ್ಲಿ ದ್ವೇಷಪೂರಿತ ಕೃತ್ಯಗಳು ಮತ್ತು ಭಾರತದ ಸಂಸ್ಕೃತಿಯ ವಿರುದ್ಧವೇ ದಾಳಿಗಳು (ನಮ್ಮ ಬರಹಗಾರರ ಹತ್ಯೆಗಳನ್ನೂ ಒಳಗೊಂಡಂತೆ) ಹೆಚ್ಚಾಗುತ್ತಿರುವುದನ್ನುಇಡೀ ವಿಶ್ವ ನೋಡುತ್ತಿದೆ.
ನಾವು, ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಲೆಫ್ಟ್ ಪಬ್ಲಿಷರ್ಸ್ (ಎಡಪಂಥೀಯ ಪ್ರಕಾಶಕರ ಅಂತರರಾಷ್ಟ್ರೀಯ ಸಂಘ) ಸಂತ್ರಸ್ತರ ಕುಟುಂಬದವರೊಂದಿಗೆ ನಾವಿದ್ದೇವೆ ಮತ್ತು ಜಾತ್ಯತೀತತೆ, ಸಾಮಾಜಿಕ ಪ್ರಗತಿ ಹಾಗೂ ಸಾಮಾಜಿಕ ನ್ಯಾಯದಂತಹ ಮಾನವೀಯ ಹಾಗೂ ಪ್ರಗತಿಪರ ಮೌಲ್ಯಗಳ ರಕ್ಷಣೆಗಾಗಿ ನಮ್ಮ ದನಿ ಎತ್ತುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪನ್ಸಾರೆಯವರ ಹತ್ಯೆಯಲ್ಲಿ ಭಾಗಿಯಾದ ಎಲ್ಲರನ್ನೂ ಪತ್ತೆಹಚ್ಚಿ, ಬಂಧಿಸಿ ಮತ್ತು ಕಾನೂನು ಕ್ರಮಜರುಗಿಸಬೇಕೆಂದು ನಾವು ಮಹಾರಾಷ್ಟ್ರದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
40 ಪ್ರಕಾಶನ ಸಂಸ್ಥೆಗಳು ಯಾವುವು : ಹೇಳಿಕೆಯನ್ನು ಬಿಡುಗಡೆ ಮಾಡಿರುವ 40 ಎಡ ಪ್ರಕಾಶನಗಳು ಈ ಕೆಳಗಿನಂತಿವೆ. ಈ 40 ರಲ್ಲಿ ಕರ್ನಾಟಕದ ಕ್ರಿಯಾ ಮಾಧ್ಯಮವೂ ಒಂದಾಗಿದೆ.
- ಅಮೆಲಿಯಾ ಕ್ರೈಗರ್, ಝಲೋಜ್ಬಾ / ಸ್ಲೊವೇನಿಯಾ
- ಅನಾ ಮಾಲ್ಡೊನಾಡೊ, ಎಸ್ಟ್ರೆಲ್ಲಾ ರೋಜಾ-ಫ್ರೆಂಟೆ ಫ್ರಾನ್ಸಿಸ್ಕೊ ಡಿ ಮಿರಾಂಡಾ, ವೆನೆಜುವೆಲಾ
- ಅನಿರುದ್ಧ , ನ್ಯಾಷನಲ್ ಬುಕ್ ಏಜೆನ್ಸಿ, ಕೋಲ್ಕತ್ತಾ, ಭಾರತ
- ಬೂಕರ್ ನ್ಗೆಸಾ ಓಮೋಲ್, ಕೀನ್ಯಾದ ಕಮ್ಯುನಿಸ್ಟ್ ಪಾರ್ಟಿ, ಸಹಿ
- ಕಾರ್ಲೋಸ್ ಮ್ಯಾನುಯೆಲ್ ಡ್ಯೂಕ್, ಫಂಡಾರ್ಟೆ, ವೆನೆಜುವೆಲಾ
- ಕಾರ್ಲೋಸ್ ರಾನ್, ಸೈಮನ್ ಬೊಲಿವರ್ ಸಂಸ್ಥೆ (ವೆನೆಜುವೆಲಾ)
- ಸೆಲಿನಾ ಡೆಲ್ಲಾ ಕ್ರೋಸ್, ಟ್ರೈಕಾಂಟಿನೆಂಟಲ್, ಸಾಮ್ರಾಜ್ಯಶಾಹಿ ವಿರೋಧಿ ಕ್ರಿಯಾ ಸಮಿತಿ.
- ಕ್ರಿಸ್ಟಿಯಾನೋ ಅರ್ಮಾಟಿ, ರೆಡ್ ಸ್ಟಾರ್ ಪ್ರೆಸ್, ಇಟಲಿ
- ಎಫೆಮಿಯಾ ಚೇಲಾ, ಇಂಕಾನಿಬುಕ್ಸ್, ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ
- ಎನಾಮುಲ್ ಹಕ್, ಸದಸ್ಯ, ಪೋಲಿ ಬ್ಯೂರೋ, ಬಾಂಗ್ಲಾದೇಶದ ವರ್ಕರ್ಸ್ ಪಾರ್ಟಿ
- ಫರ್ನಾಂಡೋ ವಿಸೆಂಟೆ ಪಿಯೆಟ್ರೋ, ಬಟಾಲ್ಲಾ ಡಿ ಐಡಿಯಾಸ್, ಅರ್ಜೆಂಟೀನಾ
- ಫ್ರಾನ್ಸಿಸ್ಕೊ ವರ್ಟಿಜ್, ಬಟಾಲ್ಲಾ ಡಿ ಐಡಿಯಾಸ್, ಅರ್ಜೆಂಟೀನಾ.
- ಹೈರಿ ಎರ್ಡೊಗನ್, ಯೊರ್ಡಮ್‌ಕಿಟಾಪ್, ಇಸ್ತಾನ್‌ಬುಲ್, ಟರ್ಕಿ
- ಜಾಂಗ್ ವಾನ್, ಸೆಕೆಂಡ್‌ಥೆಸಿಸ್, ಸಿಯೋಂಗ್ನಮ್, ದಕ್ಷಿಣ ಕೊರಿಯಾ
- ಕೆ ಲಕ್ಷ್ಮಯ್ಯ, ಪ್ರಜಾಶಕ್ತಿ ಪಬ್ಲಿಷಿಂಗ್ ಹೌಸ್, ಆಂಧ್ರಪ್ರದೇಶ, ಭಾರತ
- ಕೆ ಶಿವಕುಮಾರ್, ಚಿಂತಾ ಪಬ್ಲಿಷರ್ಸ್, ಕೇರಳ
- ಕೆ.ಎಸ್.ರಂಜಿತ್, ಚಿಂತಾ ಪಬ್ಲಿಷರ್ಸ್, ತಿರುವನಂತಪುರಂ ಕೇರಳ
- ಕೋಯಾ ಚಂದ್ರ ಮೋಹನ್, ನವ ತೆಲಂಗಾಣ
- ಲಯನ್ ಫುಲೇಹನ್, 1804 ಬುಕ್ಸ್, ಯುನೈಟೆಡ್ ಸ್ಟೇಟ್ಸ್
- ಮನು ಕರುಕಾ, 1804 ಬುಕ್ಸ್, ಯುನೈಟೆಡ್ ಸ್ಟೇಟ್ಸ್
- ಮಿಗ್ಯೂಲ್ ಯೋಶಿದಾ ಎಕ್ಸ್ಪ್ರಸ್ಸೊ ಪಾಪ್ಯುಲರ್, ಬ್ರೆಸಿಲ್
- . ಓವಿಡಿಯು ಟಿಚಿಂದೆಲೆನು ಐಡಿಯಾ ಕ್ಲೂಜ್, ರೊಮೇನಿಯಾ
- ಪಾಬ್ಲೋ ಅಬುಫೊಮ್, ಸಂಪಾದಕೀಯ ಪ್ರೊಯೆಸಿಯಾನ್, ಚಿಲಿ.
- ಪಿಕೆ ರಾಜನ್, ಭಾರತಿ ಪುತಕಾಲಯಂ, ತಮಿಳುನಾಡು, ಭಾರತ
- ಪುರ್ಬಾಶಾ ಸರ್ಕಾರ್, ಲೆಫ್ಟ್ ವರ್ಡ್ ಬುಕ್ಸ್, ನವದೆಹಲಿ, ಭಾರತ
- ಖಲಂದರ್ ಬಕ್ಸ್ ಮೆಮನ್, ನೇಕೆಡ್ ಪಂಚ್ ಪ್ರೆಸ್, ಪಾಕಿಸ್ತಾನ
- ರೋನಿ ಅಗಸ್ಟಿನಸ್, ಮಾರ್ಜಿನ್‌ಕಿರಿ, ಇಂಡೋನೇಷ್ಯಾ
- ಸಂಜಯ್ ಕುಂದನ್, ವಾಮಪ್ರಕಾಶನ, ನವದೆಹಲಿ, ಭಾರತ
- ಶಿರಾಜ್ ದುರಾನಿ, ವೀಟಾ ಬುಕ್ಸ್, ನೈರೋಬಿ, ಕೀನ್ಯಾ
- ಸೈಮನ್ ವಾಝ್ಕ್ವೆಜ್, ಬೆಲ್ಲಟೆರಾಡಿಕನ್ಸ್ / KULT
- ಸುಧನ್ವ ದೇಶಪಾಂಡೆ, ಲೆಫ್ಟ್ ವರ್ಡ್ ಬುಕ್ಸ್, ನವದೆಹಲಿ
- ಥಾಮಸ್ ಬ್ಲೋಮಾರ್ಟ್, ಯುಟ್ಗೆವೆರಿಜ್ ಇಪಿಒ, ಬೆಲ್ಜಿಯಂ
- ಟೋನಿ ಪೆಸಿನೋವ್ಸ್ಕಿ, ಇಂಟರ್ನ್ಯಾಷನಲ್ ಪಬ್ಲಿಷರ್ಸ್, ಯುಎಸ್‌ಎ
- ಉದಯ್ ನಾರ್ಕರ್, ಜನಶಕ್ತಿ ಪಬ್ಲಿಕೇಷನ್ಸ್, ಮಹಾರಾಷ್ಟ್ರ, ಭಾರತ
- ವಸಂತ ಕ್ರಿಯಾ ಮಾಧ್ಯಮ, ಬೆಂಗಳೂರು, ಭಾರತ
- ವೆಂಕಟ್ ರಾವ್, ಪ್ರಜಾಶಕ್ತಿ ಪಬ್ಲಿಷಿಂಗ್ ಹೌಸ್
- ವಿಜಯ್ ಪ್ರಸಾದ್, ಲೆಫ್ಟ್ ವರ್ಡ್ ಬುಕ್ಸ್, ನವದೆಹಲಿ, ಭಾರತ
- ವಿಜಯ ರಾವ್ ಗುಡಿಪುಡಿ, ನವ ತೆಲಂಗಾಣ ಪಬ್ಲಿಷಿಂಗ್‌ಹೌಸ್, ತೆಲಂಗಾಣ, ಭಾರತ
- ವಾಲ್ಟರ್ ಬ್ಗೊಯಾ, ಎಂಕುಕಿ ಮತ್ತು ನ್ಯೋಟಾ ಪಬ್ಲಿಷರ್ಸ್, ಡಾರ್ ಎಸ್ ಸಲಾಮ್, ಟಾಂಜಾನಿಯಾ
- ವಿನ್ನಿ ಚೌಹಾನ್, ಲೆಫ್ಟ್ ವರ್ಡ್ ಬುಕ್ಸ್, ನವದೆಹಲಿ, ಭಾರತ.