2023 ಕನ್ನಡ ಸಿನಿಮಾರಂಗದ ಪಾಲಿಗೆ ಬಹುನಿರೀಕ್ಷೆಯ ವರ್ಷ. ಈ ಹಿಂದಿನ ವರ್ಷ ಬಿಡುಗಡೆಯಾದ ಸಿನಿಮಾಗಳು ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾ ರಂಗದತ್ತ ತಿರುಗಿ ನೋಡುವಂತೆ ಮಾಡಿದ್ದವು. ಹೀಗಾಗಿ ಕನ್ನಡ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ನಿರೀಕ್ಷೆಗೆ ತಕ್ಕಂತೆ ಕನ್ನಡದಲ್ಲಿ ಅದ್ಬುತವಾದ ಸಿನಿಮಾಗಳು ಸಹ ತೆರೆ ಕಂಡಿವೆ. ಈ ವಾರ ಸಹ ಹಲವು ಸಿನಿಮಾಗಳು ಬೆಳ್ಳಿತೆರೆಗೆ ಬರಲಿದ್ದು ಸಿನಿಮಾಗಳ ಪಟ್ಟಿ ಇಲಿದ್ದೆ.
ʼಬ್ಯಾಡ್ ಮ್ಯಾನರ್ಸ್ʼ, ʼಸ್ವಾತಿ ಮುತ್ತಿನ ಮಳೆ ಹನಿಯೇʼ, ʼಸ್ನೇಹರ್ಷಿʼ, ʼಶುಗರ್ ಫ್ಯಾಕ್ಟರಿʼ, ʼಎಲೆಕ್ಟ್ರಾನಿಕ್ ಸಿಟಿʼ ಸಿನಿಮಾಗಳು ನಾಳೆ(24 ನವೆಂಬರ್) ಬಿಡುಗಡೆಯಾಗುತ್ತಿವೆ.
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದು, ತಾರಾ, ಶರತ್ ಲೋಹಿತಾಶ್ವ, ತ್ರಿವಿಕ್ರಮ್ ಸೇರಿದಂತೆ ಹಲವರ ತಾರಾಗಣವಿದೆ. ಸಿನಿಮಾ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಶೇಖರ್ ಎಸ್ ಛಾಯಾಗ್ರಹಣವಿದೆ. ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ.
ಸ್ನೇಹರ್ಷಿ ಚಿತ್ರವನ್ನು ಕಿರಣ್ ನಾರಾಯಣ್ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಂಜನಾ ಬರ್ಲಿ ಈ ಸಿನಿಮಾದ ನಾಯಕಿ. ಉಳಿದಂತೆ ಸುಧಾ ಬೆಳವಾಡಿ, ರಂಗನಾಥ್ ಸಂಪತ್ ಮುಂತಾಧವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ನಾಗತಿಹಳ್ಳಿ ಪ್ರತಿಭಾ ಚಿತ್ರಕ್ಕೆ ಬಂಡವಾಳ ಹೂಡಿದದು, ಆಕಾಶ್ ಅಯ್ಯಪ್ಪ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ಮನಸಾಲಜಿ ಸಿನಿಮಾ ಖ್ಯಾತಿಯ ದೀಪಕ್ ಅರಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಶುಗರ್ ಫ್ಯಾಕ್ಟರಿ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಹಾಗೂ ಸೋನಾಲ್ ಮಾಂಟೇರಿಯೋ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಗೋವಿಂದೇ ಗೌಡ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಆರ್ ಗಿರೀಶ್ ಬಾಲಮಣಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಧನಂಜಯ್ ಬಿ ಛಾಯಾಗ್ರಹಣ ಮತ್ತು ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.
ಎಲೆಕ್ಟ್ರಾನಿಕ್ ಸಿಟಿ ಸಿನಿಮಾವನ್ನು ಚಿಕ್ಕಣ್ಣ ರಾಮಕೃಷ್ಣಯ್ಯ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಆರ್ಯನ್ ಹರ್ಷ ನಾಯಕನಾಗಿ ನಟಿಸಿದ್ದು, ದಿಯಾ ಆಶ್ಲೇಶ ಹಾಗೂ ರಕ್ಷಿತಾ ಕೆರೆಮನೆ ನಾಯಕಿಯಾಗಿ ನಟಿಸಿದ್ದಾರೆ. ವಿನು ಮನಸು ಸಂಗೀತ ಮತ್ತು ರಾಜಾ ಶಿವಶಂಕರ್ ಛಾಯಾಗ್ರಹಣ ಸಿನಿಮಾಗಿದೆ.