ಹಾಸನ: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆ ವಿಚಾರಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಗರಂ ಆಗಿದ್ದಾರೆ. ಈ ವಿಚಾರದ ಬಗ್ಗೆ ರಾಮನಗರ ಜಿಲ್ಲೆ ತೆಗೆಯಲು ಬಂದಾಗ ಮಾತಾಡ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ಹಂಗರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಗೊತ್ತಿಲ್ಲಪ್ಪ, ಯಾವುದನ್ನು ಸೇರಿಸ್ತಾರೆ ಎಂದು ಯಾರಿಗೆ ಗೊತ್ತಿದೆ? ರಾಮನಗರಕ್ಕೆ ಕುಮಾರಸ್ವಾಮಿ ಅವರು ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ.
ಎಂಜಿನಿಯರಿಂಗ್ ಕಾಲೇಜಿಗೆ 120 ಕೋಟಿ ರೂ ಕೊಟ್ಟಿದ್ದಾರೆ, ಯಾರ ಮಕ್ಕಳು ಓದ್ತಾರೆ? ಕುಮಾರಸ್ವಾಮಿ ಮಕ್ಕಳು ಓದ್ತಾರಾ? ಮೆಡಿಕಲ್ ಕಾಲೇಜು ಬೇಕು ಅಂತ ಕೆಲವರು ತಡೆ ಹಿಡಿದಿದ್ದಾರೆ. ರಾಮನಗರವನ್ನು ಒಂದು ಜಿಲ್ಲಾ ಕೇಂದ್ರ ಮಾಡಬೇಕು, ಕೆಂಪೇಗೌಡರ ಹೆಸರು ಇಡಬೇಕು ಅಂತ ಕುಮಾರಸ್ವಾಮಿ ತೀರ್ಮಾನ ಮಾಡಿದ್ರು. ಇಲ್ಲಾ ರಾಮನಗರ ಜಿಲ್ಲೆ ಎಂದು ಹೆಸರು ಇಡಬೇಕು ಅಂತ ಕೆಲವರು ಹೇಳಿದ ಮೇಲೆ ರಾಮನಗರ ಅಂತ ಹೆಸರು ಇಟ್ಟರು.ರಾಮನಗರ ಜಿಲ್ಲೆಗೆ ಎಷ್ಟು ಕಾಲೇಜುಗಳು, ಕೆಪಿಎಸ್ಸಿ ಸ್ಕೂಲ್, ರಸ್ತೆಗಳು, ಡಿಪ್ಲೋಮಾ ಕಾಲೇಜು, ದಾಖಲೆಗಳನ್ನು ತೆಗೆದು ನೋಡಿದರೆ ಗೊತ್ತಾಗುತ್ತೆ ಎಂದರು.
ಇದನ್ನೂ ಓದಿ:ರಾಮನಗರ : ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿದ ದುಷ್ಕರ್ಮಿಗಳು
ಕುಮಾರಣ್ಣನ ಕೆಲಸ ದಾಖಲೆ ತೆಗೆದು ನೋಡಲಿ:
ಮೈಸೂರು-ಬೆಂಗಳೂರು ಬೈಪಾಸ್ ರೋಡ್ ಕುಮಾರಣ್ಣ ಅವರ ಕಾಲದಲ್ಲಿ ಆಗಿದ್ದು, ನಮ್ಮ ಕಾಲದಲ್ಲಿ ರೈತರು 90% ಲ್ಯಾಂಡ್ ಕೊಟ್ಟಿದ್ದಕ್ಕೆ ಇವತ್ತು ಮೈಸೂರು-ಬೆಂಗಳೂರು ರಸ್ತೆ ಆಗಿದ್ದು ರಾಮನಗರ, ಚನ್ನಪಟ್ಟಣ, ಬಿಡದಿ ಬೈಪಾಸ್ ಮಾಡಿದವರು ಯಾರು? ಕುಮಾರಣ್ಣ ಅವರು ಏನ್ ಮಾಡಿದ್ದಾರೆ ಅನ್ನೋದನ್ನು ತೆಗೆದು ನೋಡಲಿ. ರಾಮನಗರ, ಚಿಕ್ಕಬಳ್ಳಾಪುರವನ್ನು ಯಾರು ಜಿಲ್ಲಾ ಕೇಂದ್ರ ಮಾಡಿದ್ದು? ನಾನು ಯಾರ ಬಗ್ಗೆ ಟೀಕೆ, ಟಿಪ್ಪಣಿ ಮಾಡಲ್ಲ. ಮೆಡಿಕಲ್ ಕಾಲೇಜು, ರಾಜೀವ್ ಗಾಂಧಿ ವಿಶ್ವವಿದ್ಯಾಲಯವನ್ನು ಹತ್ತು ವರ್ಷದಿಂದ ಯಾರು ತಡೆದಿದ್ದಾರೆ? ಕಾಲ ಬಂದಾಗ ಹೇಳುತ್ತೇನೆ. ರಾಮನಗರ ಜಿಲ್ಲಾ ಕೇಂದ್ರ ತೆಗೆಯಲು ಬಂದಾಗ ಮಾತನಾಡುತ್ತೇನೆ ಎಂದರು.
ಶಾಲಾ ಪಠ್ಯ ಪುಸ್ತಕಕ್ಕೆ ಗೆಲುವು ಸಾಧಿಸಿದ ಕೆಲವು ರಾಜರುಗಳ ಹೆಸರು ಸೇರ್ಪಡೆ ವಿಚಾರವಾಗಿ ಮಾತನಾಡಿ, ಈ ರಾಜ್ಯದಲ್ಲಿ ದಕ್ಷಿಣ ಭಾಗದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ, ಮೈಸೂರು ಮಹಾರಾಜರು ಇದ್ದರು. ಮಹಾರಾಜರ ಇತಿಹಾಸ, ಕರ್ನಾಟಕ ರಾಜ್ಯದಲ್ಲಿ ಯಾರು ಯಾರು ಆಳ್ವಿಕೆ ಮಾಡಿದ್ರು ಅವರೆನ್ನೆಲ್ಲಾ ಸೇರಿಸಲಿ. ಯಾರು ಯಾರು ಜಲಶೀಲರಾಗಿದ್ದಾರೆ? ಕೃಷ್ಣರಾಜ ಒಡೆಯರ್ ಇಂದ ಹಿಡಿದು ಇಲ್ಲಿಯವರೆಗೆ ಏನೇನ್ ನಡೆದಿದೆ ಆ ವಿದ್ಯಮಾನಗಳನ್ನೆಲ್ಲಾ ಸೇರಿಸಲಿ ಎಂದು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಮೊದಲು ಮೂಲ ಸೌಕರ್ಯ ಕೊಡಿ:
ಹೊಸದಾಗಿ ಸೇರಿಸಲಿ ನಾವೇನು ಬೇಡ ಅಂತೀವಾ? ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಕ್ಕಳಿಗೆ ಮೂಲ ಸೌಕರ್ಯ ಕೊಡಲು ಆಗಿಲ್ಲ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಲು ಆಗ್ತಿಲ್ಲ. ಇನ್ನೇನು ಮಾಡ್ತಾರೆ ಇವ್ರು? ಕಾಲೇಜುಗಳಲ್ಲಿ ಡೆಸ್ಕ್, ಮೂಲ ಸೌಕರ್ಯಗಳಿಲ್ಲ, ಉಪನ್ಯಾಸಕರಿಲ್ಲ. ಮೊದಲು ಮೂಲ ಸೌಕರ್ಯ ಕೊಡಿ. ರೈತರ ಪಂಪ್ಸೆಟ್ಗಳಿಗೆ ಮೊದಲು ಹಗಲು ವೇಳೆ ಕರೆಂಟ್ ಕೊಡಿ ಎಂದು ಒತ್ತಾಯಿಸಿದರು.
ಭಾರತದಲ್ಲಿ ಇಂತಹ ಸೋಂಬೇರಿ ಎಂಪಿ ನೋಡಿಲ್ಲ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಕೆಎಂ ಶಿವಲಿಂಗೇಗೌಡ ಟೀಕೆ ವಿಚಾರಯಾರು ಸೋಂಬೇರಿ ಎಂದು ಕಾಲ ಬಂದಾಗ ಹೇಳ್ತೀನಿ. ಈಗ ಹೇಳೋದು ಬೇಡ, ಕಾಲ ಬರಲಿ. ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕ ಕೊಠಡಿ ವಿಚಾರ, ಅದೇನ್ ನನಗೆ ಗೊತ್ತಿಲ್ಲಪ್ಪ ಎಂದು ಮಾತು ಮುಗಿಸಿದರು.
ಈ ವಿಡಿಯೋ ನೋಡಿ : ಸದನದಲ್ಲಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಏಕವಚನದಲ್ಲೇ ವಾಗ್ಯುದ್ಧ