ರಾಯಚೂರು: ಬಸನಗೌಡ ಪಾಟೀಲ್ ಯತ್ನಾಳ ಸ್ವತಂತ್ರ ಹಿಂದೂ ಪಕ್ಷ ಕಟ್ತಾರೆ ಅಂದ್ರೆ ಒಳ್ಳೆಯದು ಮಾಡ್ಲಿ. ಅವರು ಹೊಸ ಪಕ್ಷ ಮಾಡಿದ್ರು ಒಳ್ಳೆಯದು, ಮಾಡದಿದ್ರೂ ಒಳ್ಳೆಯದು,ಬೇರೆ ಪಕ್ಷ ಸೇರಿದರು ಒಳ್ಳೆಯದು. ಒಟ್ನಲ್ಲಿ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿ ಅಂತ ಹೇಳ್ತಿವಿ ಅಂತ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಇದನ್ನು ಓದಿ :-ವೃದ್ಧೆಯ ಮೇಲೆ ಅತ್ಯಾಚಾರ: ವಿಚಾರಣೆಯ12ನೇ ದಿನಕ್ಕೆ ಕೋರ್ಟ್ ತೀರ್ಪು
ರಾಯಚೂರಿನಲ್ಲಿ ಮಾತನಾಡಿದ ಎನ್.ಎಸ್.ಬೋಸರಾಜು ಯತ್ನಾಳ ಅವರು ಬಿಜೆಪಿಯ ಹಿರಿಯ ನಾಯಕರು ಕೇಂದ್ರ ಸಚಿವರಾಗಿದ್ರು. ಅವರ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಾಗುತ್ತಿದೆ. ಕಾಂಗ್ರೆಸ್ ಪಕ್ಷದ ಸೈದ್ದಾಂತಿಕತೆ ಒಪ್ಪುವವರಿಗೆ ಪ್ರವೇಶ ಯಾವಾಗಲೂ ಇದೆ. ನಮ್ಮ ಪಕ್ಷದಲ್ಲಿ ಬರುವವರು ಬರ್ತಿರ್ತಾರೆ ಹೋಗುವವರು ಹೋಗ್ತಿರ್ತಾರೆ ಎಂದರು.
ಇದನ್ನು ಓದಿ :-ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಗುಡ್ ನ್ಯೂಸ್ : ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ 2 TMC ನೀರು.!
ಇನ್ನೂ ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತ ಕೂಗು ಎರಡು ವರ್ಷದಿಂದ ಎದ್ದಿದೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದ ಬಳಿಕ ಹೆಚ್ಚಾಯ್ತು. ಬಿಜೆಪಿಯ ಅನೇಕ ನಾಯಕರು ಮಾತನಾಡ್ತಿದಾರೆ ಅದು ಆ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಜಾಸ್ತಿ ಮಾತನಾಡುವುದಿಲ್ಲ. ಅವರು ಪಕ್ಷದವರು ಸರಿ ಮಾಡಿಕೊಳ್ತಾರೋ, ವಿರೋಧ ಆಗ್ತಾರೋ ಎಲ್ಲಾ ಜನ ನೋಡ್ತಾರೆ ಎಂದರು. ಸಚಿವ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಹತ್ಯೆ ಸುಪಾರಿ ವಿಚಾರದಲ್ಲಿ ಈಗಾಗಲೇ ಕೇಸ್ ಆಗಿದ್ದು ತನಿಖೆ ಆರಂಭವಾಗಿದೆ. 5 ಲಕ್ಷ ಅಡ್ವಾನ್ಸ್ , 70 ಲಕ್ಷಕ್ಕೆ ಕೊಟ್ಟಿದ್ರು ಅಂತ ರೆಕಾರ್ಡ್ ಕೊಟ್ಟಿದ್ರಂತೆ. ಕೇಸ್ ಬುಕ್ ಆಗಿದೆ ಸಮಗ್ರ ತನಿಖೆ ಆಗುತ್ತೆ ಅಂತ ಸಚಿವ ಬೋಸರಾಜು ಹೇಳಿದರು.