1953ರಲ್ಲಿ ಕಾಕಾ ಕಾಲೇಕರ್ ಆಯೋಗವು 1961ರ ಜನಗಣತಿಯಲ್ಲಿ ಜಾತಿ ಗಣತಿಯನ್ನು ಒಳಗೊಳ್ಳಲು ಶಿಫಾರಸು ಮಾಡಿತ್ತು. ಆದರೆ ಆ ಆಯೋಗದ ವರದಿಯೇ ನೇಪಥ್ಯಕ್ಕೆ ಸರಿಯಿತು.
-ಶ್ರೀಪಾದ್ ಭಟ್
1960ರಲ್ಲಿ ನಾಗನಗೌಡ ಆಯೋಗವು ಲಿಂಗಾಯತರನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಶೇ.45, ಶಿಕ್ಷಣದಲ್ಲಿ ಶೇ.50ರಷ್ಟು ಮೀಸಲಾತಿ ನಿಗದಿಪಡಿಸಿತು. ಆದರೆ ಲಿಂಗಾಯತರನ್ನು ಎಂದರು ಹಾಕಿಕೊಳ್ಳಲು ಹಿಂಜರಿದ ಆಗಿನ ಕಾಂಗ್ರೆಸ್ ಸರ್ಕಾರವು ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಿಲ್ಲ..
1984ರಲ್ಲಿ ರಚನೆಯಾದ ಟಿ.ವೆಂಕಟಸ್ವಾಮಿ ಆಯೋಗವು ಲಿಂಗಾಯತರು, ಒಕ್ಕಲಿಗರನ್ನು ಪರಿಗಣಿಸಲಿಲ್ಲ. ಇದು ಈ ಜಾತಿಗಳಲ್ಲಿ ಅಸಮಾಧಾನ ಸೃಷ್ಟಿಸಿತು. ಇವರಿಗೆ ಭಯ ಬಿದ್ದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದರು…
ಇದನ್ನೂ ಓದಿ: ಶಿಶು ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗುವ ಆಸ್ಪತ್ರೆಗಳ ಪರವಾನಗಿ ತಕ್ಷಣ ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ
1993ರಲ್ಲಿ ಓ. ಚಿನ್ನಪ್ಪ ರೆಡ್ಡಿ ಆಯೋಗವು ಲಿಂಗಾಯತರು, ಒಕ್ಕಲಿಗರನ್ನು ಮೀಸಲಾತಿಯಿಂದ ಹೊರಗಿಟ್ಟಾಗ ದೇವೆಗೌಡರು ಆದಿ ಚುಂಚನಗಿರಿ ಸ್ವಾಮಿ ನೇತೃತ್ವದಲ್ಲಿ ದೊಡ್ಡ ಮಟ್ಟದ ವಿರೋಧಿ ಪ್ರತಿಭಟನೆ ಹಮ್ಮಿಕೊಂಡಿದ್ದರು.. ಆಗ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇವರ ಪ್ರತಿಭಟನೆಗೆ ಬೆಚ್ಚಿಬಿದ್ದರು.
ಈಗ ಕಾಂತರಾಜ ಆಯೋಗದ ಸರದಿ. ಮತ್ತೆ ಈ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರು ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ.
ಕರ್ನಾಟಕವನ್ನು ತಮ್ಮ ಜಹಗೀರು ಎಂದುಕೊಂಡಿರುವ ಈ ಮೂವರು ಜಾತಿಗಳು ಪಟ್ಟಭದ್ರತನ ಮತ್ತು ಕ್ರೌರ್ಯದ ದಬ್ಬಾಳಿಕೆ ಪ್ರದರ್ಶಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರವು ಯಾವುದೇ ಸಂದರ್ಭಲ್ಲಿಯೂ ಈ ಜಾತಿವಾದಿಗಳ ಬ್ಲಾಕ್ ಮೇಲ್ ಗೆ ಮಣಿಯಬಾರದು. ಮುಖ್ಯವಾಗಿ ‘ಅಹಿಂದ ವರ್ಸಸ್ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರು’ ಎನ್ನುವ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು.
ಇದು ಕತ್ತಿಯ ಮೇಲಿನ ನಡಿಗೆ.
ಇದನ್ನೂ ನೋಡಿ: ಹಿಂದೂ ಕೋಡ್ ಬಿಲ್ ಮತ್ತು ಅಂಬೇಡ್ಕರ್ | ಡಾ. ರವಿಕುಮಾರ್ ಬಾಗಿ Janashakthi Media