ಮೋದಿ ಆಡಳಿತದ 9 ವರ್ಷಗಳ ಸಾಧನೆಗಳೇನು?

ಸಿ. ಸಿದ್ದಯ್ಯ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 30 ಕ್ಕೆ 9 ವರ್ಷಗಳು ಕಳೆದಿವೆ. ಮೋದಿ ಆಡಳಿತದ ಸಾಧನೆಗಳ ಬಗ್ಗೆ ಬಿಜೆಪಿ, ಸಂಘಪರಿವಾರ ಹಾಗೂ ಕಾರ್ಪೊರೇಟ್ ಒಡೆತನದ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಸಾಧನೆಗಳೆಂದು ಹೇಳುತ್ತಿರುವುದೆಲ್ಲಾ ನಿಜವಾಗಿಯೂ ಸಾಧನೆಗಳೇ? ಅವುಗಳು ಜನಪರವಾಗಿವೆಯೇ?  ರಾ಼ಷ್ಟ್ರದ ಹಿತ ರಕ್ಷಿಸುವಂಥವೇ? ಸರ್ಕಾರದ ಈ ಎಲ್ಲಾ ಯೋಜನೆಗಳ ನಿಜವಾದ ಉದ್ದೇಶಗಳೇನು? ನವ ಉದಾರೀಕರಣ ನೀತಿಗಳ ಜಾರಿಗೆ ಈ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆಯೇ? ಭಾರತದ ಪ್ರತಿಯೊಂದು ವಲಯಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಒಪ್ಪಿಸಲು ಏನೆಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ (FDI)ಗೆ ಮುಕ್ತ ಅವಕಾಶದ ಕಾರಣದಿಂದ ದೇಶದ ಹಲವು ವಲಯಗಳ ಮೇಲೆ ವಿದೇಶಿ ಹಣಕಾಸು ಸಂಸ್ಥೆಗಳು ಹೇಗೆಲ್ಲಾ ಹಿಡಿತ ಸಾಧಿಸಿವೆ. ಖಾಸಗೀಕರಣ ನೀತಿಗೆ ಅನುಗುಣವಾಗಿ ರೂಪಿಸಲಾಗಿರುವ ಯೋಜನೆಗಳನ್ನು ‘ಜನಪರ ಯೋಜನೆಗಳು’ ಎಂದು ಹೇಗೆಲ್ಲಾ ನಂಬಿಸತೊಡಗಿದ್ದಾರೆ.

ಈ ಕುರಿತು, ಬಿಜೆಪಿ ಹೇಳುತ್ತಿರುವ ಒಂದೊಂದೇ ‘ಸಾಧನೆಗಳ” ವಿಮರ್ಶಾತ್ಮಕ ಪುಟ್ಟ ಲೇಖನಗಳ ಸರಣಿಯ 2ನೆಯ ಲೇಖನ.  ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಲೇಖನಗಳು ಓದುಗರಿಗೆ ಒಂದಷ್ಟು ಮಾಹಿತಿ ನೀಡಬಹುದು ಎಂಬುದು ನನ್ನ ಆಶಯ.

ಮೋದಿ ಸರ್ಕಾರದ 9 ವರ್ಷಗಳ ಸಾಧನೆಗಳಲ್ಲಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಲು ದೊಡ್ಡ ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದೂ ಒಂದು ಸಾಧನೆ. ಆದರೆ, ಅವರ ಸಾಧನೆಗಳ ಪ್ರಚಾರದ ಪಟ್ಟಿಯಲ್ಲಿ ಈ ಅಂಶ ಸೇರಿಸಿಲ್ಲ. 2014-15 ರಿಂದ 2021-22ರ 8 ವರ್ಷಗಳ ಅವಧಿಯಲ್ಲಿ 12,49,698 ಕೋಟಿ ರೂಗಳ ಸಾಲ ರೈಟ್ ಆಫ್ (write off) ಮಾಡಲಾಗಿತ್ತು. 2022-23ರ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 91,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ರಾಜ್ಯಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಇದೂ ಸೇರಿದಂತೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ಒಟ್ಟು 13,40,698 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ. ಈ ಮೊತ್ತ ಅಂದಾಜು 110.79 ಲಕ್ಷ ಕೋಟಿ ಮೊತ್ತದ ಬ್ಯಾಂಕ್ ಮುಂಗಡದ (non-food bank advances) ಶೇಕಡಾ 10.54ರಷ್ಟಿದೆ.

2018ರ ಮಾರ್ಚ್ ವೇಳೆ ಅತೀ ಹೆಚ್ಚು ವಸೂಲಾಗದ ಸಾಲದ ಪ್ರಮಾಣ (NPA) 10.36 ಲಕ್ಷ ಕೋಟಿ ಇತ್ತು. ಲೋಕಸಭೆಯಲ್ಲಿ ಸರ್ಕಾರ ನೀಡಿದ ಮಾಹಿತಿಯಂತೆ 2021ರ ಮಾರ್ಚ್ ವೇಳೆಯಲ್ಲಿ ಎನ್ ಪಿ ಎ 8.35 ಲಕ್ಷ ಕೋಟಿಗೆ ಇಳಿಯಿತು. ಅಂದರೆ 2018 ಮತ್ತು 2021ರ ಮೂರು ವರ್ಷಗಳ ಅವಧಿಯಲ್ಲಿ 2 ಲಕ್ಷ ಕೋಟಿ ಎನ್ ಪಿ ಎ ಕಡಿಮೆಯಾಯಿತು. ಆದರೆ, ಈ ಅವಧಿಯಲ್ಲಿ ರೈಟ್ ಆಫ್ ಮಾಡಿದ ಸಾಲದ ಮೊತ್ತ 6,59,639 ಕೋಟಿಯಾಗಿದೆ!. ಅಂದರೆ ಈ ಮೂರು ವರ್ಷಗಳಲ್ಲಿ 4,59,639 ಕೋಟಿ ಸಾಲ ಹೊಸದಾಗಿ ಎನ್ ಪಿ ಎ ಲೆಕ್ಕಕ್ಕೆ ಸೇರಿಸಲಾಗಿದೆ. ಇದುವರೆಗೆ ರೈಟ್ ಆಫ್ ಮತ್ತು ಸಾಲ ಮನ್ನಾ ಮಾಡಿರುವುದೂ ಸೇರಿದಂತೆ ಒಟ್ಟಾರೆಯಾಗಿ ಎನ್ ಪಿ ಎ 20 ಲಕ್ಷ ಕೋಟಿ ದಾಟಿದೆ. ಅನಧಿಕೃತ ವರದಿಗಳ ಪ್ರಕಾರ ಈ ಮೊತ್ತ ಇನ್ನೂ ಹೆಚ್ಚು.ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ದೊಡ್ಡ ಉದ್ಯಮಿಗಳು ದೋಚಿದ್ದಾರೆ.

ಸುಸ್ತಿದಾರ ಕಂಪನಿಗಳ ಮಾಹಿತಿ ನೀಡಲು ನಕಾರ ;

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ರೂ 500 ಕೋಟಿಗಿಂತ ಹೆಚ್ಚು ವಂಚನೆ ಮಾಡಿರುವ ಸುಸ್ತಿದಾರ ಕಂಪನಿಗಳ ಪಟ್ಟಿ ಕೊಡುವಂತೆ ಪೆಬ್ರವರಿ 15, 2016ರಂದು ಸುಪ್ರೀಕೋರ್ಟ್ ಆರ್ಬಿಐಗೆ ಸೂಚಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇಲೆ (Center for public interest litigation) ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ ಭೂಷಣ್ ಅವರು 2015ರಲ್ಲಿ 40,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಆರೋಪಿಸಿದ್ದರು.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಆರ್. ಭಾನುಮತಿ ಅವರನ್ನೊಳಗೊಂಡ ನ್ಯಾಯಪೀಠ, ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸರಿಯಾದ ಮಾರ್ಗಸೂಚಿಗಳಿಲ್ಲದೆ ಹೇಗೆ ದೊಡ್ಡ ಪ್ರಮಾಣದ ಸಾಲಗಳನ್ನು ನೀಡುತ್ತಿವೆ ಮತ್ತು ಅವುಗಳನ್ನು ವಸೂಲಿ ಮಾಡಲು ಸಾಕಷ್ಟು ಕಾರ್ಯವಿಧಾನವಿದೆಯೇ’ ಎಂದು ತಿಳಿಯಲು ಬಯಸಿತು. ಈ ಸಂಬಂಧ ನ್ಯಾಯಾಲಯಕ್ಕೆ ‘ಉದ್ದೇಶ ಪೂರ್ವಕವಾಗಿ’ ವಂಚನೆ ಮಾಡಿದ ಕಂಪನಿಗಳ ಹೆಸರುಗಳುಳ್ಳ ಪ್ರಮಾಣ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ಕೊಟ್ಟಿತ್ತು.

ಜುಲೈ 17,2017ರಂದು ಮುಖ್ಯ ನ್ಯಾಯಾಧೀಶರಾಗಿದ್ದ ಜೆ.ಎಸ್. ಖೇಹರ್, ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಜುಲೈ 24ರ ಒಳಗೆ ಡಿಫಾಲ್ಟರ್ ಕಂಪನಿಗಳ ಪಟ್ಟಿ ಕೊಡುವಂತೆ ಮತ್ತೆ ಒಂದು ವಾರದ ಗಡುವು ನೀಡಿತು. ಆ ಸಮಯದಲ್ಲಿ ಎನ್ ಪಿ ಎ ಪ್ರಮಾಣ ಎಂಟು ಲಕ್ಷ ಕೋಟಿ ದಾಟಿತ್ತು.

“ಸಾರ್ವಜನಿಕರು, ಠೇವಣಿದಾರರು, ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯದ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಆರ್‌ಬಿಐ ಶಾಸನಬದ್ಧ ಕರ್ತವ್ಯವನ್ನು ಹೊಂದಿದೆ,” ಎಂದು ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಆರ್‌ಬಿಐಗೆ ನಿರ್ದೇಶಿಸುವಾಗ ಅಂದು ನ್ಯಾಯಾಲಯ ಹೇಳಿತ್ತು.

“ಆರ್ಟಿಐ ಕಾಯ್ದೆಯ ನಿಬಂಧನೆಗಳನ್ನು ಅನುಸರಿಸಲು ಆರ್ಬಿಐ ಕರ್ತವ್ಯ ಬದ್ಧವಾಗಿದೆ. ಉದ್ದೇಶ ಪೂರ್ವಕ ಸುಸ್ತಿದಾರ ಕಂಪನಿಗಳ ಹೆಸರುಗಳನ್ನು ಬಹಿರಂಗ ಪಡಿಸುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂಬ ಆರ್ಬಿಐನ ಆಧಾರರಹಿತ ವಾದವು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. ಇಷ್ಟಾದರೂ ಆರ್ ಬಿ ಐ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದ ಉದ್ಯಮಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಕೊಡಲಿಲ್ಲ.

ರೈಟ್ ಆಫ್ ಮಾತ್ರಸಾಲ ಮನ್ನಾ ಅಲ್ಲ!!

‘ಇದು ರೈಟ್ ಆಫ್ ಮಾತ್ರ, ಸಾಲ ಮನ್ನಾ ಅಲ್ಲ. ವಸೂಲಾಗದ ಸಾಲದ ಲೆಕ್ಕದ ಪುಸ್ತಕದಲ್ಲಿ ಕೆಲವನ್ನು ಅಳಿಸಿ ಹಾಕಲಾಗುತ್ತದಷ್ಟೆ. ಇದನ್ನು ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ರೈಟ್ ಆಫ್ ಮಾಡಿದ ಮಾತ್ರಕ್ಕೆ ಅದು ಮನ್ನಾ ಎಂದು ಹೇಳುವುದು ಸರಿಯಲ್ಲ’ ಎಂದು ಕೇಂದ್ರದ ಸಚಿವರು ಮತ್ತು ಬಿಜೆಪಿ ನಾಯಕರು ಮತ್ತು ಆರ್ ಬಿ ಐ ಅಧಿಕಾರಿಗಳು ವಾದಿಸುತ್ತಾರೆ. ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಂಪತ್ತನ್ನು ಉಳಿಸುವ ಪ್ರಾಮಾಣಿಕತೆ ಆರ್ ಬಿ ಐ ಮತ್ತು ಕೇಂದ್ರ ಸರ್ಕಾರಕ್ಕೆ ಇದ್ದರೆ ‘ರೈಟ್ ಆಫ್’ ಮಾಡುವುದೇಕೆ ಎಂಬ ಪ್ರಶ್ನೆ ಮೂಡುತ್ತದೆ.

ಇವೆಲ್ಲವೂ ಹಿಂದಿನ ಸರ್ಕಾರದ ಅವಧಿಯಲ್ಲೇ ಪಡೆದ ಸಾಲಗಳಾಗಿದ್ದವು. ಈಗ ಅವು ಎನ್.ಪಿ.ಎ. ಆಗಿ ಪರಿವರ್ತನೆಯಾಗುತ್ತಿವೆ. ಅದರಲ್ಲಿ ಮೋದಿ ಸರ್ಕಾರದ ತಪ್ಪೇನಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಹಗರಣಗಳನ್ನು ಪತ್ತೆಮಾಡಿ ಬೆಳಕಿಗೆ ತರುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಮೋದಿಯವರನ್ನು ಬಣ್ಣಿಸತೊಡಗಿದ್ದಾರೆ. ರಿಷಿ ಅಗರ್ ವಾಲ್ ವಂಚನೆ ಪ್ರಕರಣದಲ್ಲಿಯೂ ಇದೇ ವಾದವನ್ನು ಮಂಡಿಸುತ್ತಾರೆ. ಆದರೆ, ಈ ಪ್ರಮಾಣದ ಸಾಲ ಪಡೆದು ಮರುಪಾವತಿ ಮಾಡದಿರುವ ವಂಚಕರಿಗೆ ಸಾಲ ಕೊಡುವುದನ್ನು ಸ್ಥಗಿತಗೊಳಿಸಿದ ಮತ್ತು ಅಂತಹ ಎಲ್ಲರಿಂದ ಸಾಲ ವಸೂಲಿಗೆ ಕೈಗೊಂಡ ಕ್ರಮಗಳ ಬಗ್ಗೆ ಇವರು ಏನನ್ನೂ ಹೇಳುವುದಿಲ್ಲ.

NPA ನಿರಂತರವಾಗಿ ಏರುತ್ತಲೇ ಇದೆ ;

2014 ರಲ್ಲಿ ಐದು ಲಕ್ಷ ಕೋಟಿ ಇದ್ದ ವಸೂಲಾಗದ ಸಾಲದ ಪ್ರಮಾಣ (NPA), ಕಳೆದ ಎಂಟು ವರ್ಷಗಳಲ್ಲಿ13 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ 9 ಲಕ್ಷ ಕೋಟಿ ಇದೆ. ‘ಉದ್ಯಮಿಗಳ ಸಾಲ ಮನ್ನಾ ಮಾಡಿಲ್ಲ. ಎನ್ ಪಿ ಎ ಪುಸ್ತಕದಿಂದ ಸಾಲದ ಲೆಕ್ಕ ಅಳಿಸಿಹಾಕಲಾಗಿದೆ (ರೈಟ್ ಆಫ್) ಅಷ್ಟೆ. ಅದನ್ನು ಮತ್ತೊಂದು ಪುಸ್ತಕದಲ್ಲಿ ಬರೆಯಲಾಗುತ್ತದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಒಮ್ಮೆ ಹೇಳಿದ್ದರು. ಯಾವುದೇ ರೂಪದಲ್ಲಿ ಮರೆಮಾಚಿದರೂ ಇದು ಸಾಲ ಮನ್ನಾ ಮಾಡಿದಂತೆಯೇ ಆಗುತ್ತದೆ. ಒಮ್ಮೆ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿಸದೇ ಹೋದ ವ್ಯಕ್ತಿ ಅಥವಾ ಸಂಸ್ಥೆ ಸಾಲ ಪಡೆಯಲು ಅನರ್ಹ ಎಂದೇ ಅರ್ಥ. ಅಂತಹವರಿಗೆ ಯಾವುದೇ ಬ್ಯಾಂಕಿನಲ್ಲಿ ಸಾಲ ಕೊಡುವಂತಿಲ್ಲ. ಆದರೂ, ಅಂತಹ ಸುಸ್ತಿದಾರ ಉದ್ಯಮಿಗಳಿಗೆ ಬ್ಯಾಂಕುಗಳು ಮತ್ತೆ ಮತ್ತೆ ಸಾಲ ಕೊಡುತ್ತಲೇ ಬಂದಿವೆ. ಮತ್ತೆ ಆ ಸಾಲವನ್ನು ಎನ್ ಪಿ ಎ (ವಸೂಲಾಗದ ಸಾಲದ ಪ್ರಮಾಣ

Donate Janashakthi Media

Leave a Reply

Your email address will not be published. Required fields are marked *