ಚೆಗುವೆರಾನ ಜನ್ಮದಿನವಿಂದು;ಅಪಾರ ಓದು-ತಿರುಗಾಟದ ಹಸಿವಿದ್ದ ಚೆಗುವೆರ.

– ಅರುಣ ಜೋಳದ ಕೂಡ್ಲಿಗಿ

‘ಚೇ’ ಎಂಬ ಕ್ರಾಂತಿಕಾರಿಯ ಜನ್ಮದಿನವಿಂದು ಯುವಜನತೆ ಸೋಷಿಯಲ್ ಮೀಡಿಯಾಗಳಲ್ಲಿ ‘ಚೆ’ ಯ ಫೋಟೋಗಳನ್ನು ಶೇರ್ ಮಾಡಿ ಆತನ ಅಭಿಮಾನವನ್ನು ಅಭಿವ್ಯಕ್ತಿಸುತ್ತೇವೆ. ನಿಜಕ್ಕೂ ಚೇ ಅಪಾರ ಓದಿನ ಹಸಿವುಳ್ಳವನಾಗಿದ್ದ. ಆತನ ಮನೆಯಲ್ಲಿ ೩೦೦೦ಕ್ಕಿಂತ ಹೆಚ್ಚಿನ ಪುಸ್ತಕಗಳಿದ್ದವು.
ಇದೇ ಆತನ ಚೈತನ್ಯದ ಗುಟ್ಟು. ಹಾಗಾಗಿ ಆತನ ದೃಷ್ಠಿಕೋನ ಮೊನಚಾಗಿತ್ತು. ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, HG ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳ ಓದಿನ ವಿಸ್ತಾರವಿತ್ತು.

ಇದನ್ನೂ ಓದಿ:ಅರ್ನೆಸ್ಟೋ ಚೆಗುವಾರ ಕ್ರಾಂತಿಕಾರಿ ಭಾವಜೀವಿ

ಬೆಳೆದಂತೆಲ್ಲಾ ಲ್ಯಾಟಿನ್ ಅಮೆರಿಕನ್ ಬರಹಗಾರರಾದ ಹೊರಾಸಿಯೊ ಕ್ವಿರೋಗಾ, ಸಿರೊ ಅಲ್ಜಿರಿಯಾ, ಜೋರ್ಜ್ ಇಖಾಜಾ, ರುಬೆನ್ ಡರಿಯೊ ಮತ್ತು ಮಿಗುಯೆಲ್ ಆಸ್ಟೂರಿಯಸ್ ರವರ ಬರಹಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ. ಈ ಲೇಖಕರ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ತನ್ನ ಕೈ ಬರಹದ ಪುಸ್ತಕದಲ್ಲಿ ನೋಟ್ಸ್ ಮಾಡತೊಡಗಿದ. ಇವುಗಳಲ್ಲಿ ಬುದ್ಧ ಮತ್ತು ಅರಿಸ್ಟಾಟಲ್ ಕುರಿತ ವಿಶ್ಲೇಷಣಾತ್ಮಕ ರೇಖಾಚಿತ್ರಗಳು, ಬರ್ಟ್ರಾಂಡ್ ರಸ್ಸೆಲ್ ನ ಪ್ರೀತಿ ಮತ್ತು ದೇಶಭಕ್ತಿ, ಜಾಕ್ ಲಂಡನ್ ನ ಸಮಾಜದ ಬಗೆಗಿನ ಆತನ ಒಳನೋಟಗಳು, ನೀತ್ಸೆಯ ಸಾವಿನ ಕಲ್ಪನೆಯ ಸಿದ್ಧಾಂತಗಳನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸಿ, ಟೀಕಿಸಿ ಅದಕ್ಕೆ ತನ್ನದೇ ಆದ ಟಿಪ್ಪಣಿಗಳನ್ನು ಬರೆದಿಡುತ್ತಿದ್ದನು. ಶಾಲೆಯಲ್ಲಿ ಈತನ ನೆಚ್ಚಿನ ವಿಷಯಗಳೆಂದರೆ ತತ್ವಶಾಸ್ತ್ರ, ಗಣಿತಶಾಸ್ತ್ರ, ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರ,ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರಗಳಾಗಿದ್ದವು.

‘ಚೆ’ ಕಾವ್ಯದ ಕಡುಮೋಹಿಯೂ ಆಗಿದ್ದ. ಆತ ಓದಿನ ಅರಿವಿನ ಜೊತೆ ದೇಶದ ಜನರ ನಾಡಿ ಮಿಡಿತ ಅರಿಯಲು ಅಪಾರ ಸುತ್ತಾಟವನ್ನೂ ಮಾಡಿದ್ದ. ಅದಕ್ಕೆ ಆತನ ಮೋಟರ್ ಸೈಕಲ್ ಡೈರೀಸೇ ಸಾಕ್ಷಿ. ಹಾಗಾಗಿ ‘ಚೆ’ ಗೆ ಗೌರವ ಸಲ್ಲಿಸಿ ಆತನ ಸಂಗಾತಿ ಆಗುವುದೆಂದೆ ಅಪಾರ ಓದು ಮತ್ತು ಸುತ್ತಾಟದಿಂದ ಲೋಕವನ್ನು ಅರಿಯುವುದೇ ಆಗಿದೆ. ‘ಚೆ’ ಚಿತ್ರಗಳನ್ನಷ್ಟೇ ಹಿಂಬಾಲಿಸುವವರು ಆತನ ಮೂಲ ಆಶಯಕ್ಕೆ ವಿರುದ್ಧ ನಡೆದಂತೆ.

Donate Janashakthi Media

Leave a Reply

Your email address will not be published. Required fields are marked *