ಸುಂಕದವನ ಮುಂದೆ ಸುಖ ದುಖ ಹೇಳಿಕೊಂಡರೇನು ಪ್ರಯೋಜನ?

ಸುಂಕದವನ ಮುಂದೆ ಸುಖ ದುಖ ಹೇಳಿಕೊಂಡರೇನು ಪ್ರಯೋಜನ? ಎನ್ನುವ ಹಳೆ ಗಾದೆ ಮಾತು ನವ ಫ್ಯಾಸಿಸ್ಟ್ ಟ್ರಂಪ್ ನ ತಿಕ್ಕಲು, ಅವಿವೇಕಿತನದ‌ ಕಾರಣ ಮತ್ತೊಮ್ಮೆ ಚರ್ಚೆಯಲ್ಲಿದೆ.

-ಬಿ. ಶ್ರೀಪಾದ ಭಟ್

ಮೊದಲಿಗೆ ಈ ಸುಂಕಗಳು ಎಂದರೇನು?

ಸರಳವಾಗಿ ಹೇಳುವುದಾದರೆ ‘ಸರ್ಕಾರವು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸುವ ತೆರಿಗೆ’.

ಇದರ ಉದ್ದೇಶವೇನು ?

ಸ್ಥಳೀಯ ಉತ್ಪಾದನೆ , ವ್ಯಾಪಾರವನ್ನು ಬೆಂಬಲಿಸುವುದು ಮತ್ತು ರಕ್ಷಿಸುವುದು.
ರಫ್ತು ಹೆಚ್ಚಿಸುವುದು.
ವ್ಯಾಪಾರ ಕೊರತೆ ತಗ್ಗಿಸುವುದು.
ಸಾಧ್ಯವಾದರೆ ಅಗ್ಗದ ವಿದೇಶಿ ಉತ್ಪನ್ನಗಳೊಂದಿಗೆ ಸ್ಪರ್ಧಿಸುವುದು.

ಇದನ್ನೂ ಓದಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಎಂಎ ಬೇಬಿ ಆಯ್ಕೆ

ನವ ಉದಾರೀಕರಣದ‌ ಸಂದರ್ಭದಲ್ಲಿ ಇದರ mechanism and transaction ಹೇಗಿರುತ್ತದೆ?

ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ.

ಭಾರತದಲ್ಲಿ ಯಂತ್ರದ‌ ಒಂದು ಭಾಗವನ್ನು $3ಕ್ಕೆ(ರೂ.258) ತಯಾರಿಸಿ ಅದನ್ನು ಅಮೇರಿಕಾಗೆ $6ಕ್ಕೆ(ರೂ.516) ಮಾರಾಟ ಮಾಡುವುದನ್ನು ಊಹಿಸಿ.
ಅಮೆರಿಕದಲ್ಲಿ ಅದೇ ಸುತ್ತಿಗೆಯನ್ನು ತಯಾರಿಸಲು $5(ರೂ.436) ಖರ್ಚಾಗುತ್ತದೆ.

ಅಂದರೆ ಪ್ರತಿ‌ ಉತ್ಪನ್ನಕ್ಕೆ ಭಾರತಕ್ಕಿಂತ $5ರಷ್ಟು (ರೂ.178) ಜಾಸ್ತಿ ಖರ್ಚಾಗುತ್ತದೆ. (ಅಲ್ಲಿನ ವೇತನ ಇಲ್ಲಿಗಿಂತ ಹತ್ತು ಪಟ್ಟು ಜಾಸ್ತಿ , ಉತ್ಪಾದನಾ ವೆಚ್ಚ ಐದು ಪಟ್ಟು ಜಾಸ್ತಿ) ಬಆದ್ದರಿಂದ ಅಲ್ಲಿ ಯಾರೂ ಅದನ್ನು ಉತ್ಪಾದಿಸುವುದಿಲ್ಲ.

ಮುಕ್ತ ಮಾರುಕಟ್ಟೆ ನೀತಿ ಕಾರಣ ಅಮೇರಿಕಾ ತನ್ನ ಉತ್ಪನ್ನಗಳನ್ನು ಭಾರತದಲ್ಲಿನ ಅಗ್ಗದ ಉತ್ಪಾದನಾ ವೆಚ್ಚ ಮತ್ತು ಕಡಿಮೆ ವೇತನ ನೀತಿ ಬಳಸಿಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಿ ಶೇ.30ರಷ್ಟು ಲಾಭದಲ್ಲಿ ಜಾಗತಿಕವಾಗಿ ಮಾರಾಟ ಮಾಡುತ್ತಿತ್ತು.

ಇಲ್ಲಿ ಅಮೇರಿಕಾ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಒದಗಿಸುವ, ಕಡಿಮೆ ವೇತನಕ್ಕೆ ಕಾರ್ಮಿಕರನ್ನು ಪೂರೈಸುವ ಭಾರತಕ್ಕೇನು ಲಾಭ?
ಮೇಲ್ನೋಟಕ್ಕೆ ಕಾಣುವಂತೆ ಒಂದಷ್ಟು ಉದ್ಯೋಗ ಸೃಷ್ಟಿ ಮತ್ತು ವಿದೇಶಿ ವಿನಿಮಯದ ಮೀಸಲು ನಿಧಿಯಲ್ಲಿ ಸ್ವಲ್ಪ ಹೆಚ್ಚಳ.
ಆದರೆ ದೀರ್ಘಕಾಲೀನದಲ್ಲಿ ಸಾರ್ವಜನಿಕ ಸಂಸ್ಥೆಗಳ, ಎಂಎಸ್ ಎಂಇಗಳ ಮುಚ್ಚುವಿಕೆ, ಸ್ವಾವಲಂಬನೆ ನಾಶ…. ಹೀಗೆ..

ಆದರೆ ತಮಗೆ ಲಾಭವಾಗುವ ಈ ಪದ್ಧತಿಯ ಮೇಲೆ ಟ್ರಂಪ್ ಗೆ ಯಾಕೆ ಕೆಂಗಣ್ಣು?

ಟ್ರಂಪಣ್ಣನಿಗೂ ಇಲ್ಲಿನ ಮೋದಿಯ ರೀತಿ ರಾಷ್ಟ್ರೀಯತೆಯ ಹುಚ್ಚು.. ಆತನ make America great again (mega) ಎನ್ನುವ ಚುನಾವಣಾ ಪ್ರಚಾರಕ್ಕೆ ಅಲ್ಲಿನ ಬಿಳಿಯರು ಮರುಳಾಗಿ (ಮೇಕ್ ಇನ್ ಇಂಡಿಯಾ ಎಂಬ ವಂಚನೆಗೆ ಬಲಿಯಾದ ನಮ್ಮಲ್ಲಿನ ಹಿಂದೂಗಳ ರೀತಿ) ಈತನನ್ನು ಆರಿಸಿದರು.

ಈಗ ಈ ಟ್ರಂಪ್ ನ ಪ್ರತಿ ಸುಂಕದ(reciprocating tariff) ಹುಚ್ಚುತನ ಮಾತು ರಾಷ್ಟ್ರೀಯತೆ ಎರಡೂ ತಾರಕಕ್ಕೇರಿದೆ…
ಮೇಲಿನ ಉದಾಹರಣೆಗೆ ಮರಳುವುದಾದರೆ…

ಇದರ ಫಲವಾಗಿ ಅಮೆರಿಕವು ಭಾರತದಲ್ಲಿ ಯಂತ್ರದ‌ ಒಂದು ಭಾಗದ ಮೇಲೆ 100%ರಷ್ಟು ಸುಂಕ ವಿಧಿಸುತ್ತದೆ. ಇದರಿಂದ ಭಾರತದಲ್ಲಿ ತಯಾರಾದ ಯಂತ್ರದ ಬಿಡಿ ಭಾಗದ ಬೆಲೆ $6ಕ್ಕೆ(ರೂ.516) ರಿಂದ $8ಕ್ಕೆ(ರೂ.688) ಏರಿಕೆಯಾಗುತ್ತದೆ. ಅಂದರೆ ಪ್ರತಿ ಉತ್ಪನ್ನದ ಬೆಲೆ $2ರಷ್ಟು (ರೂಂ. 172) ಹೆಚ್ಚಾಗುತ್ತದೆ.

ಇಲ್ಲಿ ಭಾರತಕ್ಕೇನು ಲಾಭ?

ರಫ್ತಿನ ಮೇಲೆ ಸುಂಕ ಶೇ.100ರಷ್ಟು ಹೆಚ್ಚಾದ ಕಾರಣ ಅದರ ಮುಖಬೆಲೆಯೂ ಹೆಚ್ಚಾಗುತ್ತದೆ. ಇದು ಮಾಲೀಕರಿಗೆ ಲಾಭ. ಇದಕ್ಕೆ ಸಮಾನಂತರವಾಗಿ‌ ಕಾರ್ಮಿಕರ ವೇತನದಲ್ಲಿ ಹೆಚ್ಚಳವಾಗುವುದಿಲ್ಲ. ಉದ್ಯೋಗ ಪ್ರಮಾಣದಲ್ಲಿಯೂ ವ್ಯತ್ಯಾಸವಾಗುವುದಿಲ್ಲ.

ಇದನ್ನು ಮಾರ್ಕ್ಸ್ ವಾದದ ಪರಿಭಾಷೆಯಲ್ಲಿ ಹೇಳಬೇಕೆಂದರೆ ಬಂಡವಾಳಶಾಹಿಗಳ ಪುನರುತ್ಪಾದನೆ (re production) ಹೆಚ್ಚಾಗುತ್ತದೆ. ಮತ್ತು ಕಾರ್ಮಿಕರ ಪುಕ್ಕಟೆ ದುಡಿಮೆ ಮತ್ತು ಉತ್ಪಾದಕತೆಯ ಕಾರಣ ಅವರ ಹೆಚ್ಚುವರಿ ಮೌಲ್ಯ (surplus value) ಏರಿಕೆಯಾಗುತ್ತದೆ.

ಅಮೇರಿಕಾದಲ್ಲಿ ಏನಾಗುತ್ತದೆ?

ಅಲ್ಲಿ ಭಾರತದಿಂದ ತರಿಸಿಕೊಳ್ಳುವ ಉತ್ಪನ್ನಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ವಿದೇಶದ ಬದಲು ಅಮೇರಿಕಾದಲ್ಲಿ ಉತ್ಪಾದನೆ ಪ್ರಾರಂಭಿಸುತ್ತಾರೆ ಎಂಬುದು ಟ್ರಂಪ್ ನ maga ನೀತಿ. ಆದರೆ ಅದು ಶುರುವಾದರೆ ಅಲ್ಲಿ ಪ್ರತಿಕ್ರಾಂತಿಯೆ ಉಂಟಾಗುತ್ತದೆ..

ಇತರ ದೇಶಗಳ ಮೇಲೆ ಆಕ್ರಮಣ ಮಾಡುವ ದುಷ್ಟ ಅಮೇರಿಕಾಗೆ ಹಾಗೆನೇ ಆಗಬೇಕಲ್ಲವೇ?

ಸರಿ ..ನಮ್ಮ ಕತೆಯೇನು?
ನಾವು ಕನಿಷ್ಠ ‘ನೆಹರೂವಿಯನ್ ಮಿಶ್ರ ಆರ್ಥಿಕ ನೀತಿಗೆ’ ಮರಳಬೇಕಲ್ಲವೆ? ಆದರೆ ಸಂಪೂರ್ಣ 180 ಡಿಗ್ರಿ ಉಲ್ಟಾ ತಿರುಗುವುದು ಹೆಂಗ? ಸಮಗ್ರ ನೀಲನಕ್ಷೆ, ಕಾರ್ಯಯೋಜನೆ ಇದೆಯೇ? ಇದೆಯೇ? ಇದೆಯೇ?

ಇದನ್ನೂ ನೋಡಿ: ಸ್ವರಗಳು ಮತ್ತು ವ್ಯಂಜನಗಳು | Vowels and Consonants | ತೇಜಸ್ವಿನಿ Janashakthi Media

Donate Janashakthi Media

Leave a Reply

Your email address will not be published. Required fields are marked *