ಕಪಾಳ ಮೋಕ್ಷ ಮಾಡಿಸಿಕೊಂಡ ಕಂಗನಾ ರಣಾವತ್‌ ಮಾಡಿದ್ದ ಆ ಪೋಸ್ಟ್‌ ಆದರೂ ಏನು?

ನವದೆಹಲಿ: ಕಂಗನಾ ರಣಾವತ್ ‘ಕಪಾಳಮೋಕ್ಷ’ ಘಟನೆಯು 2020 ರ ರೈತರ ಪ್ರತಿಭಟನೆಯ ಕುರಿತು ಬಿಜೆಪಿ ಸಂಸದರಾಗಿ ಆಯ್ಕೆಯಾದ ಕಂಗನಾ ರಣಾವತ್‌ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಮೇಲೆ ಮತ್ತೆ ಗಮನ ಹರಿಸುವಂತೆ ಮಾಡಿದೆ.

ಹಿಮಾಚಲದ ಮಂಡಿಯಿಂದ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ಸಂಸದ ಕಂಗನಾ ರಣಾವತ್, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನಟ-ರಾಜಕಾರಣಿಗೆ ಕಪಾಳಮೋಕ್ಷ ಮಾಡಿದ ಬಳಿಕ ಮತ್ತೆ ಗಮನಾರ್ಹ ಸುದ್ದಿಕೇಂದ್ರಕ್ಕೆ ಬರುವಂತಾಗಿದೆ.

ಇದನ್ನೂ ಓದಿ: ಐದು ದಿನಗಳಲ್ಲಿ ಚಂದ್ರಬಾಬು ನಾಯ್ಡು ಪತ್ನಿಗೆ ಕೋಟ್ಯಾಂತರ ರೂಪಾಯಿ ಗಳಿಕೆ

2020 ರ ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ರಣಾವತ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕುಲ್ವಿಂದರ್ ಕೌರ್ ಎಂದು ಗುರುತಿಸಲಾದ ಆರೋಪಿ ಮಹಿಳಾ ಕಾನ್ಸ್‌ಟೇಬಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕೆಯ ತಾಯಿ ಕೂಡ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಅಸಮಾಧಾನಗೊಂಡಿದ್ದಾರೆ.

ಕಪಾಳ ಮೋಕ್ಷ ಮಾಡಿದ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಿ ಕಸ್ಟಡಿಯಲ್ಲಿಡಲಾಗಿದ್ದು, ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಈ ವಿಷಯದ ಕುರಿತು ನ್ಯಾಯಾಲಯದ ವಿಚಾರಣೆಯನ್ನು ಪ್ರಾರಂಭಿಸಿದೆ.

ಒಂದು ವೈರಲ್ ವೀಡೀಯೊದಲ್ಲಿ, ಕುಲ್ವಿಂದರ್ ಕೌರ್, “ನನ್ನ ತಾಯಿ ಇದ್ದರು” ಎಂದು ಹೇಳುತ್ತಿರುವುದು ಕಂಡುಬಂದಿದೆ, ರೈತರ ಪ್ರತಿಭಟನೆಯಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ತಲಾ ₹ 100 ಪಾವತಿಸಲಾಗಿದೆ ಎಂಬ  ಕಂಗನಾ ರನೌತ್ ಹೇಳಿಕೆಯಿಂದ ಆಕೆ ಎಷ್ಟರಮಟ್ಟಿಗೆ ಬೇಸರಗೊಂಡು ಸಿಟ್ಟಿಗೆದ್ದಿದ್ದಳು ಎಂಬುದನ್ನು ಕೌರ್‌, ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ್ದನ್ನು ನೋಡಿದಾಗ ಕಂಡುಬರುತ್ತದೆ. ದಾಳಿಯ ಹಿಂದಿನ ಕಾರಣವನ್ನು ಕಂಗನಾ ಕಾನ್‌ಸ್ಟೆಬಲ್‌ಗೆ ಕೇಳಿದಾಗ, ರೈತ ಪ್ರತಿಭಟನೆಗೆ ತನ್ನ ಬೆಂಬಲವನ್ನು ಹೇಳುವ ಮೂಲಕ ಕೌರ್‌ ಉತ್ತರಿಸಿದ್ದಾಳೆ.

ಘಟನೆ ಬಳಿಕ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ ವೀಡೀಯೋ ಹೇಳಿಕೆಯಲ್ಲಿ ಕಂಗನಾ ರಣಾವತ್‌, ತಾನು ದೆಹಲಿಗೆ ಬಂದ ನಂತರ, ಭದ್ರತಾ ತಪಾಸಣೆ ಮುಗಿಸಿ ಹೊರಬಂದ ತಕ್ಷಣ, ಎರಡನೇ ಕ್ಯಾಬಿನ್‌ನಲ್ಲಿದ್ದ ಮಹಿಳೆ, ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ಕಡೆಯಿಂದ ಎದ್ದುಬಂದು, ನನ್ನ ಮುಖಕ್ಕೆ ಹೊಡೆದು ನಿಂದಿಸಲು ಪ್ರಾರಂಭಿಸಿದಳು. ಆಗ ನಾನು ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದಾಗ ಆಕೆ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ನಾನು ಸುರಕ್ಷಿತವಾಗಿದ್ದೇನೆ, ಆದರೆ ನನ್ನ ಕಳವಳ ಏನೆಂದರೆ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ… ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ?” ಎಂಬುದಾಗಿದೆ

ರೈತರ ಪ್ರತಿಭಟನೆ ಕುರಿತು ಕಂಗನಾ ಅವರ 2020 ಪೋಸ್ಟ್ 2020 ರಲ್ಲಿ ಕಂಗನಾ ರಣಾವತ್‌ ಪೋಸ್ಟ್‌ವೊಂದನ್ನು ನೆನಪಿಸಿಕೊಳ್ಳಬೇಕಾದರೆ, ಆಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ಹಲವಾರು ರೈತರು ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದರು. ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಕಂಗನಾ ರಣಾವತ್ ಪ್ರತಿಭಟನೆಯಲ್ಲಿ ವಯಸ್ಸಾದ ಮಹಿಳೆಯನ್ನು ಶಾಹೀನ್ ಬಾಗ್ ಪ್ರತಿಭಟನೆಯ ಪ್ರಮುಖ ವ್ಯಕ್ತಿ ಬಿಲ್ಕಿಸ್ ಬಾನೋ ಎಂದು ತಪ್ಪಾಗಿ ಗುರುತಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

ನಂತರ ಅಳಿಸಲಾದ ಟ್ವೀಟ್‌ನಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಲು ಮಹಿಳೆಗೆ ನೂರು ರೂಪಾಯಿಯನ್ನು ನೀಡಲಾಗಿತ್ತೆಂದು ನಟಿಯಾಗಿದ್ದ ಕಂಗನಾ ರಣಾವತ್‌ ಆರೋಪಿಸಿದ್ದರು. ರಣಾವತ್‌ನ ಈ ಹೇಳಿಕೆಗೆ ಭಾರೀ ಖಂಡನೆಗೆ ಗುರಿಯಾಗಿತ್ತು.

ದಿಲ್ಜಿತ್ ದೋಸಾಂಜ್, ರಣಾವತ್ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಟೀಕಿಸಿದ್ದರು. ಅಲ್ಲದೇ ಉದ್ವಿಗ್ನತೆಯನ್ನು ಹೆಚ್ಚಿಸುವುದನ್ನು ನಿಲ್ಲಿಸುವಂತೆ ಆಕೆಯನ್ನು ಗಾಯಕ ಒತ್ತಾಯಿಸಿದ್ದರು.

ವ್ಯಾಪಕ ಟೀಕೆಗಳ ನಂತರ ಕಂಗನಾ ಟ್ವೀಟ್ ಅನ್ನು ಅಳಿಸಿದ್ದರೂ ಸಹ, ತನ್ನ ‘ಅವಹೇಳನಕಾರಿ’ ಹೇಳಿಕೆಗಾಗಿ ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಹಲವಾರು ಕಾನೂನು ನೋಟಿಸ್‌ಗಳನ್ನು ಪಡೆದಿದ್ದರು.

ಇದನ್ನೂ ನೋಡಿ: ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *