ಪಾಶ್ಚ್ಯಾತ್ಯ ಪ್ರಜಾತಂತ್ರವೀಗ ಅಸಂಬದ್ಧ ಪರಿಸ್ಥಿತಿಯಲ್ಲಿ

-ಪ್ರೊ..ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್

ಜನರನ್ನು ಎಲ್ಲ ರೀತಿಯ ಪ್ರಚಾರಗಳಿಗೆ ಗುರಿಪಡಿಸಿದರೂ ಸಹ, ಅವರು ಏನನ್ನು ಬಯಸುತ್ತಾರೆ ಮತ್ತು ರಾಜಕೀಯ ರೂಢ ವ್ಯವಸ್ಥೆಯು ಏನನ್ನು ಆದೇಶಿಸುತ್ತಿದೆ ಎಂಬುದರ ನಡುವಿನ ವ್ಯತ್ಯಾಸವು ಎಲ್ಲ ಪಾಶ್ಚಾತ್ಯ ದೇಶಗಳನ್ನೂ ಬಾಧಿಸುತ್ತಿದೆ. ಈ ದೇಶಗಳು ಪ್ರಚಾರದ ಮೂಲಕ ಭಿನ್ನಾಭಿಪ್ರಾಯವನ್ನು ಕುಶಲವಾಗಿ ನಿರ್ವಹಣೆ ಮಾಡುತ್ತಿದ್ದ ಹಂತದಿಂದ ಭಿನ್ನಾಭಿಪ್ರಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಹಂತಕ್ಕೆ ಪರಿವರ್ತನೆಯಾಗಿವೆ. ಮಾತ್ರವಲ್ಲ, ಪ್ರಚಾರಕ್ಕೆ ಬಗ್ಗದ ಬಹುಮತದ ಭಿನ್ನಾಭಿಪ್ರಾಯವನ್ನೂ ಸಹ ಸಂಪೂರ್ಣವಾಗಿ ನಿರ್ಲಕ್ಷಿಸುವ ಹಂತಕ್ಕೆ ಈ ದೇಶಗಳು ಬಂದಿವೆ. ಇದು ಪ್ರಜಾಪ್ರಭುತ್ವವು ದುರ್ಬಲಗೊಳ್ಳುತ್ತಿರುವ, ಒಂದು ಅಭೂತಪೂರ್ವ ನೈತಿಕ ದಿವಾಳಿತನದಿಂದ ಬಳಲುತ್ತಿರುವ ಒಂದು ಹೊಸ ಹಂತವನ್ನು ಪ್ರತಿನಿಧಿಸುತ್ತದೆ. ಇದು ಫ್ಯಾಸಿಸಂ ಬೆಳೆಯಲು ವಾತಾವರಣವನ್ನು ನಿರ್ಮಿಸುತ್ತದೆ. ಈಗಾಗಲೇ ಇದು ಪಾಶ್ಚಾತ್ಯ ಸಮಾಜಗಳಲ್ಲಿ ಅಭೂತಪೂರ್ವ ಎನ್ನುವ ಮಟ್ಟಿಗೆ ಜನರನ್ನು ನಿರ್ಬಲೀಕರಿಸಿದೆ. ಪ್ರಜಾತಂತ್ರ

ಮುಂದುವರೆದ ಪಾಶ್ಚ್ಯಾತ್ಯ ದೇಶಗಳಲ್ಲಿ ಯುದ್ಧಾನಂತರದ ಸಮಯದಿಂದಲೂ ಅಸ್ತಿತ್ವದಲ್ಲಿರುವ ಪ್ರಜಾತಂತ್ರದ ರೀತಿ-ನೀತಿಗಳು ಇಂದು ತಲುಪಿರುವ ಅಧೋಗತಿಯ ಮಟ್ಟವನ್ನು ಹಿಂದೆಂದೂ ಕಂಡಿರಲಿಕ್ಕಿಲ್ಲ. ಪ್ರಜಾಪ್ರಭುತ್ವವೆಂದರೆ ಮತದಾರರ ಆಶಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸುವುದು ಮತ್ತು ಅಳವಡಿಸಿಕೊಳ್ಳುವುದು ಎಂದರ್ಥ. ನಿಜ, ಸರ್ಕಾರಗಳು ಜನರ ಆಸೆ-ಆಕಾಂಕ್ಷೆಗಳೇನು ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ನಂತರ ಅದಕ್ಕನುಗುಣವಾಗಿ ಕಾರ್ಯ-ನೀತಿಯನ್ನು ನಿರ್ಧರಿಸುವುದಿಲ್ಲ. ಪ್ರಜಾತಂತ್ರ

ಒಂದು ಬೂರ್ಜ್ವಾ ವ್ಯವಸ್ಥೆಯಲ್ಲಿ ಸರ್ಕಾರವು ಜನರು ವ್ಯಕ್ತಪಡಿಸಿದ ಆಸೆ- ಆಕಾಂಕ್ಷೆಗಳ ಸಂಬಂಧವಾಗಿ ತಾನು ನಿರ್ಧರಿಸಿದ ನೀತಿಗಳನ್ನು ಆಳುವ ವರ್ಗದ ಹಿತಾಸಕ್ತಿಗಳಿಗೆ ಅನುಗುಣವಾಗಿ ಮಾರ್ಪಡಿಸುತ್ತದೆ. ನಂತರ, ಈ ನೀತಿಗಳು ಜನರ ಹಿತ ಕಾಯುವ ಕಾಳಜಿ ಹೊಂದಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರದ ಪ್ರಚಾರ ಯಂತ್ರವು ಯಶಸ್ವಿಯಾಗುತ್ತದೆ. ಈ ರೀತಿಯಲ್ಲಿ, ಜನರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಆಳುವ ವರ್ಗದ ಹಿತಾಸಕ್ತಿಯೊಂದಿಗೆ ಹೊಂದಿಸುವ ಒಂದು ಸಂಕೀರ್ಣವಾದ ಕಾರ್ಯವನ್ನು ಚತುರತೆಯಿಂದ ಸಾಧಿಸಲಾಗುತ್ತದೆ. ಪ್ರಜಾತಂತ್ರ

ಇದನ್ನೂ ಓದಿ: ‘ಗೃಹ ಲಕ್ಷ್ಮೀ’ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸ್ಪಷ್ಟನೆ

ಆದರೆ ಪಶ್ಚಿಮದ ದೇಶಗಳಲ್ಲಿ ಇಂದಿನ ದಿನಗಳಲ್ಲಿ ಜರುಗುತ್ತಿರುವ ವಿದ್ಯಮಾನವು ಸಂಪೂರ್ಣವಾಗಿ ಭಿನ್ನವಾಗಿದೆ: ಜನರ ಅಭಿಪ್ರಾಯವನ್ನು ಮುಸುಕುಗೊಳಿಸಲು ಮಾಧ್ಯಮಗಳ ಮೂಲಕ ನಡೆಸುವ ಎಲ್ಲ ಪ್ರಚಾರಗಳ ಹೊರತಾಗಿಯೂ, ಒಂದು ವ್ಯವಸ್ಥಿತ ರೀತಿಯಲ್ಲಿ ಸರ್ಕಾರವು ಅನುಸರಿಸುತ್ತಿರುವ ಆಳುವ ವರ್ಗಗಳ-ಪರ ನೀತಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ನೀತಿಗಳನ್ನು ಅನುಸರಿಸಬೇಕೆಂದು ಜನತೆ ಬಯಸುತ್ತದೆ. ಅಂದರೆ, ಆಳುವ ವರ್ಗವು ಬಯಸುವ ನೀತಿಗಳನ್ನು ಅನುಸರಿಸಲಾಗುತ್ತಿದೆ ಮತ್ತು ಈ ನೀತಿಗಳನ್ನು ಜನರು ಸ್ಪಷ್ಟವಾಗಿ ಮತ್ತು ವ್ಯವಸ್ಥಿತವಾಗಿ ವಿರೋಧಿಸುತ್ತಿದ್ದಾರೆ. ಮತ್ತು, ಸರ್ಕಾರಕ್ಕೆ, ಈ ನೀತಿಗಳನ್ನು ಬೆಂಬಲಿಸಲು ಬಹುತೇಕ ರಾಜಕೀಯ ಪಕ್ಷಗಳು ಸಾಲುಗಟ್ಟಿ ನಿಂತಿರುವುದರಿಂದ. ಅವುಗಳನ್ನು ಅನುಸರಿಸುವುದು ಸಾಧ್ಯವಾಗಿದೆ. ಅಂದರೆ, ಬಹುಪಾಲು ಮತದಾರರು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ವಿರುದ್ಧವಾಗಿ ಈ ನೀತಿಗಳನ್ನು ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ ಮತ್ತು ಬೆಂಬಲಿಸುತ್ತವೆ. ಹಾಗಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ ಎರಡು ಲಕ್ಷಣಗಳು ಕಾಣಬರುತ್ತಿವೆ: ಪ್ರಜಾತಂತ್ರ

ಒಂದನೆಯದು, ಬಹುತೇಕ ರಾಜಕೀಯ ಪಕ್ಷಗಳ ನಡುವೆ ಈ ನೀತಿಗಳ ಬಗ್ಗೆ ಒಂದು ಒಮ್ಮತವಿದೆ. ಎರಡನೆಯದು, ಈ ಪಕ್ಷಗಳು ಏನನ್ನು ಒಪ್ಪಿಕೊಂಡಿವೆ ಎಂಬುದರ ಬಗ್ಗೆ ಮತ್ತು ಜನರು ಏನನ್ನು ಬಯಸುತ್ತಾರೆ ಎಂಬುದರ ನಡುವೆ ಸಂಪೂರ್ಣ ಅಸಮಂಜಸತೆ ಇದೆ. ಇಂತಹ ಒಂದು ಪರಿಸ್ಥಿತಿಯು ಬೂರ್ಜ್ವಾ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ. ಮೇಲಾಗಿ, ಈ ನೀತಿಗಳು ಇದೋ ಅಥವಾ ಅದೋ ಎನ್ನುವ ರೀತಿಯ ಸಣ್ಣ ಪ್ರಶ್ನೆಗಳಿಗೆ ಸಂಬಂಧಿಸಿದ ವಿಷಯವಲ್ಲ. ಇದು ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ಮೂಲಭೂತ ವಿಷಯಗಳಿಗೆ ಸಂಬಂಧಿಸಿದೆ. ಪ್ರಜಾತಂತ್ರ

ಈ ಬಗ್ಗೆ ಒಂದು ಉದಾಹರಣೆಯಾಗಿ ಅಮೆರಿಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಣ. ಲಭ್ಯವಿರುವ ಎಲ್ಲ ಅಭಿಪ್ರಾಯ ಸಂಗ್ರಹಣೆಗಳ ಪ್ರಕಾರ ಅಮೆರಿಕದ ಬಹುಪಾಲು ಜನರು ಪ್ಯಾಲೆಸ್ಟೀನಿಯನ್ ಜನತೆಯ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧ ಯುದ್ಧದಿಂದ ದಿಗ್ಭ್ರಮೆಗೊಂಡಿದ್ದಾರೆ. ಯುದ್ಧವನ್ನು ಅಮೆರಿಕಾ ಕೊನೆಗೊಳಿಸಬೇಕೆಂದು ಅವರು ಬಯಸುತ್ತಾರೆ ವಿನಃ, ಯುದ್ಧವನ್ನು ಮುಂದುವರೆಸಲು ಇಸ್ರೇಲಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನಲ್ಲ. ಆದರೆ, ಅಮೆರಿಕಾದ ಸರ್ಕಾರವು ಅದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತಿದೆ, ಈ ಯುದ್ಧವು ಹಂತ ಹಂತವಾಗಿ ವಿಸ್ತರಿಸಿ ಇಡೀ ಮಧ್ಯಪ್ರಾಚ್ಯವನ್ನು ಆವರಿಸುವ ಅಪಾಯವಿದ್ದರೂ ಸಹ. ಅಂತೆಯೇ, ಅಮೆರಿಕದ ಜನಾಭಿಪ್ರಾಯವು ಉಕ್ರೇನ್ ಯುದ್ಧದ ಮುಂದುವರಿಕೆಯನ್ನು ಬಯಸುವುದಿಲ್ಲ. ಪ್ರಜಾತಂತ್ರ

ಶಾಂತಿ-ಸಂಧಾನದ ಮೂಲಕ ಆ ಸಂಘರ್ಷವು ಕೊನೆಗೊಳ್ಳುವುದನ್ನು ಜನಾಭಿಪ್ರಾಯ ಬೆಂಬಲಿಸುತ್ತದೆ. ಆದರೆ, ಅಮೆರಿಕದ ಸರ್ಕಾರವು (ಇಂಗ್ಲೆಂಡಿನ ಜೊತೆಯಲ್ಲಿ ಸೇರಿಕೊಂಡು) ಶಾಂತಿಯುತ ಇತ್ಯರ್ಥದ ಎಲ್ಲ ಸಾಧ್ಯತೆಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತದೆ. ಉಕ್ರೇನ್-ರಷ್ಯಾ ನಡುವಿನ ಮಿನ್ಸ್ಕ್ ಒಪ್ಪಂದಗಳಿಗೆ ತನ್ನ ವಿರೋಧವಿದೆ ಎಂಬ ಸಂದೇಶವನ್ನು ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಮೂಲಕ ಉಕ್ರೇನ್‌ಗೆ ರವಾನಿಸುವ ಮೂಲಕ ಅಮೆರಿವು ಈ ಯುದ್ಧಕ್ಕೆ ನಾಂದಿ ಹಾಡಿತು. ಈಗಲೂ ಶಾಂತಿ ಸ್ಥಾಪನೆಗಾಗಿ ಕೆಲವು ಪ್ರಸ್ತಾಪಗಳನ್ನು ಪುಟಿನ್ ಮಾಡಿದಾಗ, ಕುರ್ಸ್ಕ್ ಆಕ್ರಮಣವನ್ನು ಪ್ರಾರಂಭಿಸುಂತೆ ಉಕ್ರೇನನ್ನು ಅಮೆರಿಕಾ ಪ್ರಚೋದಿಸಿತು. ಈ ವಿದ್ಯಮಾನವು, ಶಾಂತಿ ನೆಲಸುವ ಎಲ್ಲ ಭರವಸೆಗಳನ್ನೂ ಕೊನೆಗೊಳಿಸಿತು. ಒಂದು ಗಮನಾರ್ಹವಾದ ಸಂಗತಿಯೆಂದರೆ, ಜನಾಭಿಪ್ರಾಯವು ಶಾಂತಿಯನ್ನು ಬಯಸುತ್ತಿದ್ದರೂ ಮತ್ತು ಉಕ್ರೇನ್‌ನ ಆಕ್ರಮಣಕಾರಿ ದುಸ್ಸಾಹಸವು ಪರಮಾಣು ಯುದ್ಧವಾಗಿ ಪರಿಣಮಿಸಿ ಅದು ವಿಶ್ವವನ್ನು ಸುಟ್ಟು ಬೂದಿ ಮಾಡುತ್ತದೆ ಎಂಬ ಆತಂಕದ ಹೊರತಾಗಿಯೂ, ನೆತನ್ಯಾಹು ಮತ್ತು ಝೆಲೆನ್ಸ್ಕಿ ಇವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಅಮೆರಿಕದ ನೀತಿಯನ್ನು ಆ ದೇಶದ ರಿಪಬ್ಲಿಕನ್ನರು ಮತ್ತು ಡೆಮೋಕ್ರಾಟ್‌ರು ಒಪ್ಪಿಕೊಂಡಿದ್ದಾರೆ. ಪ್ರಜಾತಂತ್ರ

ಜರ್ಮನಿಯ ಉದಾಹರಣೆ

ಜನರನ್ನು ಎಲ್ಲ ರೀತಿಯ ಪ್ರಚಾರಗಳಿಗೆ ಒಳಪಡಿಸಿದರೂ ಸಹ, ಅವರು ಏನನ್ನು ಬಯಸುತ್ತಾರೆ ಮತ್ತು ರಾಜಕೀಯ ರೂಢ ವ್ಯವಸ್ಥೆಯು ಏನನ್ನು ಆದೇಶಿಸುತ್ತಿದೆ ಎಂಬುದರ ನಡುವಿನ ಈ ವ್ಯತ್ಯಾಸವು ಮುಂದುವರೆದ ಎಲ್ಲ ದೇಶಗಳನ್ನೂ ಬಾಧಿಸುತ್ತಿದೆ ಮತ್ತು ಜರ್ಮನಿಯನ್ನು ಅತಿ ಹೆಚ್ಚು ಬಾಧಿಸುತ್ತಿದೆ. ಉಕ್ರೇನ್ ಯುದ್ಧವು ಜರ್ಮನಿಯನ್ನು ನೇರವಾಗಿ ಮತ್ತು ಬಹಳವಾಗಿ ತಟ್ಟುತ್ತದೆ. ಏಕೆಂದರೆ, ಜರ್ಮನಿಯು ತನ್ನ ಇಂಧನದ ಅಗತ್ಯಗಳಿಗಾಗಿ ರಷ್ಯಾವನ್ನು ಸಂಪೂರ್ಣವಾಗಿ ಅವಲಂಬಿಸಿದೆ. ರಷ್ಯಾದ ಮೇಲೆ ಅಮೆರಿಕಾ ಹೇರಿದ ನಿರ್ಬಂಧಗಳು ಜರ್ಮನಿಯಲ್ಲಿ ಅನಿಲದ ಕೊರತೆಯನ್ನು ಉಂಟುಮಾಡಿವೆ. ರಷ್ಯಾದ ಬದಲಿಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಅನಿಲದ ಬೆಲೆಗಳು ಜರ್ಮನಿಯ ಕಾರ್ಮಿಕರ ಜೀವನಮಟ್ಟವನ್ನು ಬಲವಾಗಿ ಕೆಳಗೆ ತಳ್ಳುವಷ್ಟು ದುಬಾರಿಯಾಗಿವೆ. ಉಕ್ರೇನ್ ಯುದ್ಧವನ್ನು ತುರ್ತಾಗಿ ಕೊನೆಗೊಳಿಸುವಂತೆ ಜರ್ಮನ್ ಕಾರ್ಮಿಕರು ಒತ್ತಾಯ ಮಾಡಿದ್ದಾರೆ. ಪ್ರಜಾತಂತ್ರ

ಆದರೆ, ಸೋಶಿಯಲ್ ಡೆಮೋಕ್ರಾಟ್‌ಗಳು, ಫ್ರೀಡೆಮಾಕ್ರಟ್‌ಗಳು ಮತ್ತು ಗ್ರೀನ್‌ಗಳನ್ನು ಒಳಗೊಂಡು ಆಡಳಿತ ನಡೆಸುತ್ತಿರುವ ಮೈತ್ರಿ ಕೂಟವಾಗಲಿ ಅಥವಾ ಕ್ರಿಶ್ಚಿಯನ್ ಡೆಮೋಕ್ರಾಟ್‌ಗಳು ಮತ್ತು ಕ್ರಿಶ್ಚಿಯನ್ ಸೋಷಿಯಲಿಸ್ಟರನ್ನು ಒಳಗೊಂಡಿರುವ ಮುಖ್ಯ ವಿರೋಧಿ ಕೂಟವಾಗಲಿ ಈ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ಕೊಂಚವೂ ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಜರ್ಮನಿಯ ರಾಜಕೀಯ ವ್ಯವಸ್ಥೆಯು ಜರ್ಮನಿಯ ಗಡಿಗಳಲ್ಲಿ ರಷ್ಯಾದ ಪಡೆಗಳು ಕಾಣಿಸಿಕೊಳ್ಳುವ ಭಯವನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಪ್ರಜಾತಂತ್ರ

ವಿಪರ್ಯಾಸವೆಂದರೆ, ರಷ್ಯಾದ ಗಡಿಯಲ್ಲಿರುವ ಲಿಥುವೇನಿಯಾ ದೇಶದ ಗಡಿಗಳಲ್ಲಿ ಜರ್ಮನ್ ಪಡೆಗಳು ಈಗಾಗಲೇ ಠಿಕಾಣಿ ಹೂಡಿವೆ! ಉಕ್ರೇನ್ ಯುದ್ಧದ ಅಂತ್ಯವನ್ನು ಕಾಣುವ ಹತಾಶೆಯಲ್ಲಿ ಜರ್ಮನಿಯ ದುಡಿಯುವ ಜನರು, ಯುದ್ಧದ ವಿರುದ್ಧ ಗಟ್ಟಿಯಾಗಿ ಮಾತನಾಡುವ ನವ- ಫ್ಯಾಸಿಸ್ಟ್ ‘ಜರ್ಮನಿಯ ಪರ್ಯಾಯ’ದ(AfD) ಕಡೆಗೆ ತಿರುಗುತ್ತಿದ್ದಾರೆ (ಈ ಪರ್ಯಾಯವು ಎಲ್ಲಿಯಾದರೂ ಒಂದು ವೇಳೆ ಅಧಿಕಾರದ ಸನಿಹಕ್ಕೆ ಬಂದುದೇ ಆದರೆ ತಪ್ಪದೇ ಅದು ತನ್ನ ಈ ಭರವಸೆಗೆ ದ್ರೋಹ ಎಸಗುತ್ತದೆ), ಮತ್ತು, ಈ ಯುದ್ಧದ ವಿಷಯದಲ್ಲಿ ತನ್ನ ಮಾತೃ ಎಡಪಕ್ಷವಾದ ಡಿ ಲಿಂಕೆ ನಿಂದ ಬೇರ್ಪಟ್ಟ ಸಹರಾ ವ್ಯಾಗೆನ್‌ನೆಕ್ಟ್ ಎಂಬ ಹೊಸ ಎಡ ಪಕ್ಷದತ್ತ ತಿರುಗುತ್ತಿದ್ದಾರೆ. ಪ್ರಜಾತಂತ್ರ

ಇದೇ ರೀತಿಯ ಭಾವನೆಗಳನ್ನು ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆಯೂ ಜರ್ಮನರು ಹೊಂದಿದ್ದಾರೆ. ಬಹುಪಾಲು ಜರ್ಮನ್ ಜನರು ಈ ನರಮೇಧವನ್ನು ವಿರೋಧಿಸುತ್ತಿರುವಾಗ, ಜರ್ಮನಿಯ ಸರ್ಕಾರವು ಇಸ್ರೇಲಿ ನರಮೇಧದ ಬಗೆಗಿನ ಎಲ್ಲ ವಿರೋಧವನ್ನೂ ಅದು ಯೆಹೂದ್ಯ-ವಿರೋಧಿ ಎಂಬ ನೆಲೆಯಲ್ಲಿ ವಾಸ್ತವವಾಗಿ ಅಪರಾಧೀಕರಿಸಿದೆ. ಇಸ್ರೇಲಿ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಲು ಆಯೋಜಿಸಲಾಗಿದ್ದ ಸಮಾವೇಶಕ್ಕೆ ಯಾನಿಸ್ ವರೌಫಾಕಿಸ್ ಅವರಂತಹ ಅಂತರಾಷ್ಟ್ರೀಯ ಖ್ಯಾತಿ ಹೊಂದಿದ ಭಾಷಣಕಾರರನ್ನು ಆಹ್ವಾನಿಸಲಾಗಿತ್ತು. ಆದರೆ, ಜರ್ಮನಿಯ ಸರ್ಕಾರವು ಈ ಸಮಾವೇಶವನ್ನು ಭಗ್ನಗೊಳಿಸಿತು. ಇಸ್ರೇಲಿನ ಆಕ್ರಮಣಕಾರಿ ನಿಲುವಿಗೆ ವ್ಯಕ್ತಪಡಿಸುವ ಎಲ್ಲ ವಿರೋಧವನ್ನು ಹತ್ತಿಕ್ಕಲು ಯೆಹೂದ್ಯ-ವಿರೋಧಿ ಅಸ್ತ್ರವನ್ನು ಬಳಕೆ ಮಾಡಲಾಗುತ್ತಿದೆ ಮತ್ತು ಇದೇ ಅಸ್ತ್ರವನ್ನು ಮುಂದುವರೆದ ಎಲ್ಲ ದೇಶಗಳೂ ವ್ಯಾಪಕವಾಗಿ ಬಳಕೆ ಮಾಡುತ್ತಿವೆ. ಪ್ರಜಾತಂತ್ರ

ಬ್ರಿಟನ್‌ನಲ್ಲಿ, ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಅವರನ್ನು ಅವರ ನಿಲುವು ಮೇಲ್ನೋಟದಲ್ಲಿ ಯೆಹೂದಿ-ವಿರೋಧಿ ಯಾಗಿ ತೋರುತ್ತದೆ ಎಂಬ
ನೆಲೆಯಲ್ಲಿ ಲೇಬರ್ ಪಕ್ಷದಿಂದ ಹೊರಹಾಕಲಾಯಿತು. ಆದರೆ, ವಾಸ್ತವವಾಗಿ ಅವರು ಪ್ಯಾಲೇಸ್ಟಿನಿಯರಿಗೆ ಬೆಂಬಲ ವ್ಯಕ್ತಪಡಿಸಿದ ಕಾರಣದಿಂದಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಇದೇ ಯೆಹೂದಿ-ವಿರೋಧಿ ಆರೋಪವನ್ನು ಅಮೆರಿಕದ ಯೂನಿವರ್ಸಿಟಿಗಳ ಕ್ಯಾಂಪಸ್ ಅಧಿಕಾರಿಗಳು ಆ ದೇಶವನ್ನು ಅಲ್ಲಾಡಿಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೇಲೆ ಮತ್ತು ಬೋಧಕರ ಮೇಲೆ ಮಾಡಿದ್ದಾರೆ.

ಇಸ್ರೇಲಿ-ಪರ ಲಾಬ್ಬಿಯ ಹಣಪ್ರಭಾವ

ಸಾರ್ವಜನಿಕ ಅಭಿಪ್ರಾಯದ ಮೇಲೆ ನಡೆಸುವ ಇಂತಹ ಒರಟು ಸವಾರಿಯ ಮೂಲಕ ಶಾಂತಿ ಮತ್ತು ಯುದ್ಧದ ಈ ಜ್ವಲಂತ ಸಮಸ್ಯೆಗಳ ಚರ್ಚೆಯನ್ನು ಸಾಮಾನ್ಯವಾಗಿ ಸಾರ್ವಜನಿಕರಿಂದ ದೂರ ಇಡಲು ಪ್ರಯತ್ನಿಸಲಾಗುತ್ತದೆ. ಉದಾಹರಣೆಗೆ, ಅಮೆರಿಕದ ಮುಂಬರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಈ ಇಬ್ಬರೂ ಸ್ಪರ್ಧಿಗಳೂ ಇಸ್ರೇಲಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ವಿಷಯದಲ್ಲಿ ಸಹಮತ ಹೊಂದಿರುವುದರಿಂದ, ಶಸ್ತ್ರಾಸ್ತ್ರಗಳ ಪೂರೈಕೆಯ ವಿಷಯವು ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆಯಲ್ಲಿ ಅಥವಾ ಅವರ ಪ್ರಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಅವರು ಭಿನ್ನಮತ ಹೊಂದಿರುವ ಕೆಲವು ಚಿಲ್ಲರೆ ವಿಷಯಗಳು ರಂಗದ ಮಧ್ಯೆ ಕಾಣಿಸಿಕೊಳ್ಳುತ್ತವೆ. ಜನರ ಮೇಲೆ ಪರಿಣಾಮ ಬೀರುವ ಹಾಗೂ ಸ್ಪರ್ಧಿಗಳಿಗಿಂತ ಭಿನ್ನವಾದ ಅಭಿಪ್ರಾಯವನ್ನು ಜನರು ಹೊಂದಿರುವ ಕೆಲವು ನಿರ್ಣಾಯಕ ವಿಷಯಗಳು ಚರ್ಚೆಗಳಲ್ಲಿ ಒಂದು ವಸ್ತುವಾಗುವುದೇ ಇಲ್ಲ. ಭಾರೀ ಪ್ರಮಾಣದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣಕಾರಿ ಕೃತ್ಯಗಳಿಗೆ ರಾಜಕೀಯ ವ್ಯವಸ್ಥೆಯು ನೀಡುತ್ತಿರುವ ಬೆಂಬಲದ ಹಿಂದಿರುವ ಒಂದು ಕಾರಣವೆಂದರೆ, ಅದು ಇಸ್ರೇಲ್ ಪರ ದಾನಿಗಳಿಂದ ದೇಣಿಗೆಯ ಮೂಲಕ ದೊರೆತ ಅಪಾರ ಹಣ ಬಲದ ಅಂಶವೇ.

ನಿಜಕ್ಕೂ ಇದು ನಿರ್ಲಕ್ಷಿಸುವನಅಂಶವಲ್ಲ. ಆಗಸ್ಟ್ 21ರಂದು ‘ಡೆಲ್ಫಿ ಇನಿಶಿಯೇಟಿವ್‌’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬ್ರಿಟನ್‌ನ ಹೊಸದಾಗಿ ಚುನಾಯಿತರಾದ ಲೇಬರ್ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರ ಮಂತ್ರಿ ಮಂಡಲದ ಅರ್ಧದಷ್ಟು ಮಂದಿ, ತಮ್ಮನ್ನು ಅಧಿಕಾರಕ್ಕೆ ತಂದ ಚುನಾವಣೆಗಳಲ್ಲಿ ಹೋರಾಡಲು ಇಸ್ರೇಲ್- ಪರ ಮೂಲಗಳಿಂದ ಹಣ ಪಡೆದಿದ್ದಾರೆ. ಇದೇ ವರದಿಯಲ್ಲಿ, ಬ್ರಿಟಿಷ್ ಸಂಸತ್ತಿನ ಮೂರನೇ ಒಂದು ಭಾಗದಷ್ಟು ಕನ್ಸರ್ವೇಟಿವ್ ಸದಸ್ಯರೂ ಸಹ ಚುನಾವಣೆಗಾಗಿ ಇಸ್ರೇಲ್ ಪರ ಮೂಲಗಳಿಂದ ಹಣವನ್ನು ಪಡೆದಿದ್ದಾರೆ ಎಂಬುದನ್ನೂ ಹೇಳಲಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ
ಹೇಳುವುದಾದರೆ, ಇಸ್ರೇಲ್ ಪರ ಮೂಲದ ಹಣವು ಬ್ರಿಟನ್‌ನ ಎರಡೂ ಪ್ರಮುಖ ಪಕ್ಷಗಳಿಗೆ (ಲೇಬರ್ ಪಕ್ಷ ಮತ್ತು ಕನ್ಸರ್ವೇಟಿವ್ ಪಕ್ಷ) ಲಭಿಸಿದೆ. ಇದು
ಇಸ್ರೇಲಿ ಆಕ್ರಮಣಕಾರಿ ಕೃತ್ಯಗಳಿಗೆ ದೊರೆಯುವ ಬೆಂಬಲವನ್ನು ಒಂದು ಉಭಯಪಕ್ಷೀಯ ವ್ಯವಹಾರವನ್ನಾಗಿ ಮಾಡಿದೆ.

ಮತ್ತೊಂದೆಡೆಯಲ್ಲಿ, ಪ್ಯಾಲೆಸ್ಟೈನ್ ಪರವಾಗಿ ನಿಲ್ಲುವವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಯುಎಸ್ ಕಾಂಗ್ರೆಸ್‌ನ ಸದಸ್ಯರ ಎರಡು ಪ್ರಕರಣಗಳು
ವಿವರಿಸುತ್ತವೆ. ಜಮಾಲ್ ಬೌಮನ್ ಮತ್ತು ಕೋರಿ ಬುಷ್ ಎಂಬ ಇಬ್ಬರು ಕರಿಯ ಪ್ರಗತಿಪರ ಪ್ರತಿನಿಧಿಗಳು ಪ್ಯಾಲೇಸ್ಟೀನಿಯರ ಹೋರಾಟದ ಬಗ್ಗೆ
ಸಹಾನುಭೂತಿ ಹೊಂದಿದ್ದಾರೆ ಮತ್ತು ಇಸ್ರೇಲಿ ನರಮೇಧವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಈ ಇಬ್ಬರನ್ನೂ, ಇಸ್ರೇಲನ್ನು ಬೆಂಬಲಿಸುವುದಕ್ಕಾಗಿ
ತೊಡಗಿಕೊಂಡಿರುವ ಎಐಪಿಎಸಿ (ಅಮೇರಿಕನ್-ಇಸ್ರೇಲ್ ಸಾರ್ವಜನಿಕ ವ್ಯವಹಾರಗಳ ಸಮಿತಿ) ಎಂಬ ಒಂದು ಪ್ರಬಲ ಮತ್ತು ಪ್ರಭಾವಶಾಲಿ ಲಾಬಿಯು
ಸೋಲಿಸಿತು.

ಇಂತಹ ಕೆಲವು ಪ್ರಯತ್ನಗಳಿಗಾಗಿ ಅದು ಮಿಲಿಯಗಟ್ಟಲೆ ಡಾಲರ್‌ಗಳನ್ನು ಖರ್ಚುಮಾಡುತ್ತದೆ. ಬೌಮನ್ ಅವರನ್ನು ಸೋಲಿಸಲು 17 ಮಿಲಿಯನ್ ಡಾಲರ್‌ಗಳನ್ನು ಮತ್ತು ಕೋರಿ ಬುಷ್ ವಿರುದ್ಧ ಜಾಹೀರಾತು ಪ್ರಚಾರಕ್ಕಾಗಿ 9 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲಾಗಿದೆ ಎಂಬುದನ್ನು ಆಗಸ್ಟ್ 31ರ ಡೆಲ್ಫಿ ಇನಿಶಿಯೇಟಿವ್ ವರದಿ ಮಾಡಿದೆ. ಈ ಸೋಲಿಸುವ ಪ್ರಕರಣದ ಒಂದು ಕುತೂಹಲಕರ ಅಂಶವೆಂದರೆ, ಈ ಲಾಬಿಯು ಕೋರಿ ಬುಷ್ ವಿರುದ್ಧ ನಡೆಸಿದ ಅಭಿಯಾನದಲ್ಲಿ ಗಾಜಾ ವಿರುದ್ಧ ಇಸ್ರೇಲ್ ನಡೆಸಿದ ಆಕ್ರಮಣವನ್ನು ಪ್ರಸ್ತಾಪಿಸಲಿಲ್ಲ. ಏಕೆಂದರೆ, ಗಾಜಾ ಜನತೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯ ವಿಷಯದಲ್ಲಿ ಸಾರ್ವಜನಿಕರು ಕೋರಿ ಬುಷ್ ಅವರ ಎದುರಾಳಿಯನ್ನು ಬೆಂಬಲಿಸುವುದಿಲ್ಲ ಮತ್ತು ಅದು ಅವಳನ್ನು ಸೋಲಿಸುವ ಯೋಜನೆಯನ್ನೇ ಸೋಲಿಸಿದಂತಾಗುತ್ತದೆ ಎಂಬುದು ಎಐಪಿಎಸಿ ಗೆ ತಿಳಿದಿತ್ತು. ಇವೆಲ್ಲವುಗಳ ಅರ್ಥವೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಪರಿಣಾಮ ಬೀರುವ ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ಮೂಲಭೂತ ವಿಷಯಗಳ ಬಗ್ಗೆ ಮುಂದುವರೆದ ದೇಶದ ಜನತೆಯ ಇಚ್ಛೆಗೆ ವಿರುದ್ಧವಾದ ನಿರ್ಧಾರವನ್ನು ಪಟ್ಟಭದ್ರ ಹಿತಾಸಕ್ತಿಗಳ ಲಾಬಿಗಳಿಂದ ಹಣ ಪಡೆಯುವ ರಾಜಕೀಯ ವ್ಯವಸ್ಥೆಯು ತೆಗೆದುಕೊಳ್ಳುತ್ತದೆ.

ಈ ರೀತಿಯಲ್ಲಿ ಮುಂದುವರೆದ ದೇಶಗಳು ಪ್ರಚಾರದ ಮೂಲಕ ಭಿನ್ನಾಭಿಪ್ರಾಯವನ್ನು ಕುಶಲವಾಗಿ ನಿರ್ವಹಣೆ ಮಾಡುತ್ತಿದ್ದ ಹಂತದಿಂದ ಭಿನ್ನಾಭಿಪ್ರಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಹಂತಕ್ಕೆ ಪರಿವರ್ತನೆಯಾಗಿವೆ. ಮಾತ್ರವಲ್ಲ, ಪ್ರಚಾರಕ್ಕೆ ಬಗ್ಗದ ಬಹುಮತದ ಭಿನ್ನಾಭಿಪ್ರಾಯವನ್ನೂ ಸಹ ಸಂಪೂರ್ಣವಾಗಿ ನಿರ್ಲಕ್ಷಿಸುವ ಹಂತಕ್ಕೆ ಈ ದೇಶಗಳು ಬಂದಿವೆ ಎಂಬುದು ಸಾಬೀತಾಗುತ್ತದೆ. ಇದು ಪ್ರಜಾಪ್ರಭುತ್ವವು ದುರ್ಬಲಗೊಳ್ಳುತ್ತಿರುವ ಒಂದು ಹೊಸ ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ರಾಜಕೀಯ ವ್ಯವಸ್ಥೆಯು ಒಂದು ಅಭೂತಪೂರ್ವ ನೈತಿಕ ದಿವಾಳಿತನದಿಂದ ಬಳಲುತ್ತಿದೆ ಎಂಬುದನ್ನು ಒತ್ತಿ ಹೇಳುತ್ತದೆ. ರೂಢಿಯಲ್ಲಿರುವ ರಾಜಕೀಯ ವ್ಯವ¸ಯಲ್ಲಿ ಕಾಣುತ್ತಿರುವ ನೈತಿಕ ದಿವಾಳಿತನವು ಫ್ಯಾಸಿಸಂನ ಬೆಳವಣಿಗೆಯ ವಾತಾವರಣವನ್ನು ನಿರ್ಮಿಸುತ್ತದೆ. ನಿಜಕ್ಕೂ ಫ್ಯಾಸಿಸಂ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಎಂಬುದು ಬೇರೆಯ ವಿಷಯ. ಆದರೆ, ಮುಂದುವರೆದ ಸಮಾಜಗಳಲ್ಲಿ ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವವು ಈಗಾಗಲೇ ಅಭೂತಪೂರ್ವ ಎನ್ನುವ ಮಟ್ಟಿಗೆ ಜನರನ್ನು ನಿರ್ಬಲೀಕರಿಸಿದೆ.

ಇದನ್ನೂ ನೋಡಿ: ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media

Donate Janashakthi Media

Leave a Reply

Your email address will not be published. Required fields are marked *