ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ:696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭ 

ಕೋಲ್ಕತ್ತ: ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪದಡಿ ಮರು ಮತದಾನಕ್ಕೆ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು , ಇಂದು 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭಗೊಂಡಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಮರು ಮತದಾಣ ಆರಂಭಗೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ರಾಜ್ಯ ಪೊಲೀಸರನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಸಂಜೆ ಐದು ಗಂಟೆಯವರೆಗೆ ಮರು ಮತದಾನ ನಡೆಯಲಿದೆ.

ಇದನ್ನೂ ಓದಿ:ಮತದಾನದ ದಿನವೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಮರು ಮತದಾನ ನಡೆಯುತ್ತಿರುವ 696 ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯ ಚುನಾವಣೆ ಪ್ರಕಟಣೆ ಹೊರಡಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರು ಮತದಾನ ನಡೆಯುತ್ತಿರುವ ಜಿಲ್ಲೆಗಳ ಪೈಕಿ ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 175 ಮತಗಟ್ಟೆಗಳಿವೆ. ಮಾಲ್ಡಾ ಜಿಲ್ಲೆ 109 ಮತಗಟ್ಟೆಗಳನ್ನು ಹೊಂದಿದೆ. ಉಳಿದಂತೆ ನಾಡಿಯಾದಲ್ಲಿ 89 ಮತಗಟ್ಟೆಗಳು, ಕೊಚ್‌ ಬೆಹಾರ್‌ 53, ಉತ್ತರ 24 ಪರಗಣಗಳು 46, ಉತ್ತರ ದಿನಜ್‌ಪುರ 42, ದಕ್ಷಿಣ 24 ಪರಗಣಗಳು 36, ಪುರ್ಬಾ ಮೇದಿನಪುರ 31 ಮತ್ತು ಹೂಗ್ಲಿ 29 ಮತಗಟ್ಟೆಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಶನಿವಾರ ರಾಜ್ಯದ 61 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಈ ವೇಳೆ ಹಲವು ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿದ್ದವು. ಇಲ್ಲಿಯವರೆಗೆ 15 ಜನರು ಮೃತಪಟ್ಟಿದ್ದಾರೆ. ಮತಯಂತ್ರಗಳನ್ನು ವಿರೂಪಗೊಳಿಸಿ, ಬೆಂಕಿ ಹಚ್ಚಿ ಕೆರೆಗಳಿಗೆ ಎಸೆದ ಪ್ರಕರಣಗಳು ಕಂಡುಬಂದಿದ್ದವು.

ಮರು ಮತದಾನವನ್ನು ಘೋಷಿಸಿದ ಜಿಲ್ಲೆಗಳಲ್ಲಿ, ಮುರ್ಷಿದಾಬಾದ್ ನಲ್ಲಿ ಅತಿ ಹೆಚ್ಚು 175 ಮತಗಟ್ಟೆಗಳನ್ನು ಹೊಂದಿದೆ, ನಂತರ ಮಾಲ್ಡಾ 112 ಬೂತ್‌ಗಳನ್ನು ಹೊಂದಿದೆ. ಹಿಂಸಾಚಾರ ಪೀಡಿತ ನಾಡಿಯಾದ  89 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಕ್ರಮವಾಗಿ 46 ಮತ್ತು 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *