ಗಂಗಾವತಿ | ಸಮೀಕ್ಷೆಯಿಂದ ಹೊರಗುಳಿದ ದೇವದಾಸಿ ಮಹಿಳೆಯರನ್ನು ಪಟ್ಟಿಗೆ ಸೇರಿಸಲು ಅಗ್ರಹ

ಗಂಗಾವತಿ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸಮೀಕ್ಷೆ ಪಟ್ಟಿಯಿಂದ ಹೊರಗುಳಿದ ದೇವದಾಸಿ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರನ್ನು ಕೂಡಲೇ ಪಟ್ಟಿಗೆ ಸೇರಿಸಿ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ತಾಲ್ಲೂಕು ಸಮಿತಿ ಸಿಡಿಪಿಒ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ಗಂಗಾವತಿ

ಇದನ್ನ ಓದಿ : ಚೂರಿ ಇರಿತ ಪ್ರಕರಣ: ನಾಲ್ವರು ಆರೋಪಿಗಳ ಗುರುತು ಪತ್ತೆ

ದೌರ್ಜನ್ಯದ ದೇವದಾಸಿ ಪದ್ಧತಿ ರದ್ದತಿಗೆ ದೇವದಾಸಿ ನಿಷೇಧ ಮಸೂದೆ-2025 ಜಾರಿ ಮಾಡಿರುವುದು ಶ್ಲಾಘನೀಯ. ಈಚೆಗೆ ದೇವದಾಸಿ ಮಹಿಳೆಯರ ಮತ್ತು ಕುಟುಂಬಸ್ಥರ ಮರು ಸಮೀಕ್ಷೆ ನಡೆಸಿದ್ದು, ದೇವದಾಸಿಗಳಿದ್ದರೂ ಸಮೀಕ್ಷೆ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಅವರಿಗೆ ಮತ್ತು ಮಕ್ಕಳಿಗೆ ಪ್ರಮಾಣಪತ್ರ ನೀಡದೆ, ಪಟ್ಟಿಯಿಂದ ದೂರ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ತಾಲ್ಲೂಕು ಸಮಿತಿ ಅಧ್ಯಕ್ಷೆ ಜಿ.ಹುಲಿಗೆಮ್ಮ ಮಾತನಾಡಿ, ‘ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ನಿರಂತರವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಾ ಬಂದಿದ್ದು ಎಂದರು. ಗಂಗಾವತಿ

‘ಪಟ್ಟಿಯಿಂದ ಹೊರಗುಳಿದ ದೇವದಾಸಿ ಮಹಿಳೆಯರು ಮತ್ತು ಕುಟುಂಬಸ್ಥರನ್ನು ಪಟ್ಟಿಗೆ ಸೇರಿಸಿ 2026ರ ಬಜೆಟ್‌ನಲ್ಲಿ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು. ಗಂಗಾವತಿ

ತಾಲ್ಲೂಕು ಸಮಿತಿ ಕಾರ್ಯದರ್ಶಿ ಮಂಜುನಾಥ ಡಗ್ಗಿ, ನಿರುಪಾದಿ ಬೆಣಕಲ್, ಎಂ.ಬಸವರಾಜ, ಹುಸೇನಪ್ಪ, ಮರೀನಾ ಗಪ್ಪಡಗ್ಗಿ, ದುರ್ಗಮ್ಮ, ನಾಗಮ್ಮ, ಈರಮ್ಮ, ಗಂಗಮ್ಮ, ಕವಿತಾ, ಭಾಗಮ್ಮ, ಕೆಂಚಮ್ಮ, ಯಮನಮ್ಮ, ಹುಲಿಗೆಮ್ಮ ಉಪಸ್ಥಿತರಿದ್ದರು.

ಇದನ್ನೂ ಓದಿ : ಧರ್ಮಸ್ಥಳದ ನಿಗೂಢಗಳು | ಲಾಡ್ಜ್‌ಗಳ ದಾಖಲೆ ಪರಿಶೀಲನೆಗೆ ಮುಂದಾದ ಎಸ್‌ಐಟಿ Janashakthi Media

Donate Janashakthi Media

Leave a Reply

Your email address will not be published. Required fields are marked *