ಹಳೆ ವರ್ಷ ವಿದಾಯದ ಹೆಸರಿನಲ್ಲಿ 27ನೇ ಕಾರ್ಯಕ್ರಮವು ಯುದ್ಧನೌಕೆಯ ಎದುರು ಹೊಸವರ್ಷದ ಮೊದಲ ದಿನ ನಡೆಯಿತು ಸುಸ್ಥಿರ
ಕಾರವಾರ: ಪ್ರೊ. ಮೋಹನ ಹಬ್ಬು ಕಾವ್ಯ ಓದಿಗೆ ಚಾಲನೆ ನೀಡಿ ಮಾತನಾಡಿ, ಸಾವಿರಾರು ವಿಚಾರಗಳು, ಮತಪಂಥ ಜನಾಂಗ ಜಾತಿ ಧರ್ಮಗಳಿರುವ ಸಾಂಸ್ಕೃತಿಕ ಒಗ್ಗಟ್ಟಿನ ದೇಶ ಇಂದು ಆತಂಕದ ಮಡುವಿನಲ್ಲಿರುವಂತೆ ಆದುದು ಖೇದಕರ. ಮನಸ್ಸನ್ನು ಒಗ್ಗೂಡಿಸಬೇಕಾದ ಧರ್ಮಗಳ ನಡುವೆ ಹೊಡೆದಾಟ, ಸರಕಾರದ ಚುಚ್ಚಾಣಿ ಹಿಡಿದಲ್ಲಿ ಭ್ರಷ್ಟಾಚಾರ ಇವುಗಳನ್ನು ಜನ ದೂರವಿಟ್ಟು ಪ್ರತಿಹೃದಯವೂ ಪ್ರೀತಿಯಿಂದ ಅರಿವು ವಿವೇಕದಿಂದ ಬಾಳುವಂತಾಗಲಿ. ಶಿಕ್ಷಣದಲ್ಲಿ ತಾರತಮ್ಯನಿಲ್ಲಲಿ. ಶಾಲೆಗಳು ಮಕ್ಕಳ ಭವಿಷ್ಯಕ್ಕಾಗಿ ಉಳಿಯಲಿ. ಹಾಗೆಯೇ, ನಿರಂತರ ಕಾಳಜಿ, ಹೊಸತನ್ನು ಹುಡುಕುವ ತವಕ, ಸಮಾಜ ಬದಲಾವಣೆಗೆ ಹಾತೊರೆಯುವ ಮನಸ್ಸಿನ ಡಾ. ವಿಠ್ಠಲ ಭಂಡಾರಿಯವರ ಪ್ರೇರಣೆಯಿಂದ ನಿರಂತರ ನಡೆಯುವ ಈ ಕಾರ್ಯಕ್ರಮ ಮುಂದುವರಿಯಲಿ ಎಂದು ಶುಭಹಾರೈಸಿ ಕವನ ಓದಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಜೊರ್ಜ ಫರ್ನಾಂಡೀಸ್ ವಹಿಸಿ, ಜಿಲ್ಲೆಯ ಅಭಿವೃದ್ಧಿ ಮತ್ತು ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ, ಸ್ವಚ್ಛತೆಗೆ ಸರ್ಕಾರ ಮತ್ತು ಜನರು ಹೆಚ್ಚು ಒತ್ತುಕೊಡಬೇಕು. ಇಲ್ಲಿ ಮಕ್ಕಳು ಮತ್ತು ಯುವಜನಸ್ನೇಹಿಯಾದ ಯೋಜನೆಗಳು ನೆಲೆಗೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ ಅವರು ಮಾತನಾಡಿ ದೇಶದ ನೆಮ್ಮದಿ ಹಾಳುಮಾಡುವಂತಹ ರಾಜಕೀಯ ಉದೇಶಕ್ಕೆ ಮನುಷ್ಯರ ಮಧ್ಯೆ ದಲಿತರು ಮತ್ತು ಮೇಲ್ಜಾತಿಗಳ ಮದ್ಯೆ ಮಧ್ಯೆ, ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎನ್ನುವ ಧರ್ಮದ ಕಾರಣಕ್ಕೆ ದ್ವೇಷ ಹುಟ್ಟಿಸುವ ಜನರನ್ನು ಒಡೆಯುವ ಕ್ರಿಯೆ, ಮನುಷ್ಯರ ಮೇಲೆ ಮನುಷ್ಯರೇ ಹೇರುತ್ತಿರುವ ಯುದ್ಧಗಳು ನಿಲ್ಲಬೇಕು. ಆದರೆ ಪ್ರಜಾಪ್ರಭುತ್ವ, ಸಂವಿಧಾನ, ಸಂಸತ್ತು, ಚರ್ಚೆ ಎಲ್ಲವೂ ಅರ್ಥ ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಎಚ್ಚರದ ನಡೆ ನಮ್ಮದಾಗಲಿ ಎಂದು ಬಯಸಿದರು.
ಇದನ್ನೂ ಓದಿ: ಹೊಸಪೇಟೆ | ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ
ಎಸ್ ಸಿ, ಎಸ್, ಟಿ ನೌಕರರ ಸಂಘದ ಅಧ್ಯಕ್ಷರಾದಂಥ ಜಿಡಿ ಮನೋಜೆ ಕುವೆಂಪು ಮನುಜಮತ ವಿಶ್ವಪಥ ನಮ್ಮದಾಗಬೇಕಿದೆ. ಆಧುನಿಕ ಜಗತ್ತು ಮನುಷ್ಯತ್ವದಿಂದ ದೂರಸರಿಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆರದು ಎಂದರು.
ಲೇಖಕರಾದ ಎನ್.ಜಿ. ನಾಯ್ಕ ತಮ್ಮ ಮಾತಿನಲ್ಲಿ ದೇಶದ ಅರ್ಥಶಾಸ್ತ್ರ ತೆರೆದಿಟ್ಟರು. ಜಪಾನ್ ಹಿಂದಿಕ್ಕಿದ ನಾಲ್ಕನೇ ಆರ್ಥಿಕವಾಗಿ ಭಾರತ ಹೊಮ್ಮಿದರೂ ಅದು ಎಷ್ಟರ ಮಟ್ಟಿಗೆ ಜನಜೀವನವನ್ನು ಬದಲಾಯಿಸಿದೆ ಎಂದು ಪ್ರಶ್ನಿಸಿದರೆ ಉದ್ಯೋಗಾವಕಾಶಗಳಿಲ್ಲದ ಬೆಳವಣಿಗೆ ಮತ್ತು ಲಾಭದ ಮುಖ್ಯಪಾಲು ಶ್ರೀಮಂತರ ಜೇಬಿಗೆ ಸೇರುತ್ತಿದೆ. ರಮೇಶ ಭಂಡಾರಿ ಮಾತನಾಡಿ ಸಮಾಜದಲ್ಲಿ ಲಿಂಗತಾರತಮ್ಯ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಕ್ರೌರ್ಯ ನಿಲ್ಲಿಸಲು ಎಲ್ಲರೂ ಮುಂದಾಗೋಣ ಎಂದರು.
ಪ್ರೇಮಾ ಟಿಎಂಆರ್, ವಸಂತ ಬಾಂದೇಕರ್, ನಾಗೇಶ ಅಣ್ವೇಕರ್, ಕೃಷ್ಣಾನಂದ ಬಾಂದೇಕರ್, ಶ್ರೀದೇವಿ ಕೆರೆಮನೆ, ಸಂಧ್ಯಾ ಹೆಗಡೆ, ಯಲ್ಲಪ್ಪ, ದಿವಾಕರ ಪಿಎಲ್, ಮುಂತಾದವರು ಕವಿತೆ ಓದಿ ಶುಭ ಹಾರೈಸಿದ ಕಾವ್ಯಪ್ರೇಮಿಗಳು. ರಂಗಭೂಮಿ ಕಲಾವಿದರಾದ ವಿದ್ಯಾನಾಯ್ಕ, ಹಾಗೂ ಸಂಗಡಿಗರು ಬುದ್ಧ ಗೀತೆ ಹಾಗೂ ಸೌಹಾರ್ದ ಹಾಡನ್ನು ಶಶಿಧರ, ಶೇಕಪ್ಪ, ಮಲ್ಲಿಕಾರ್ಜುನ ಸಂಗಡಿಗರು ಶಿಶುನಾಳ ಷರಿಫರ ಹಾಡು ಹಾಡಿದರು.

ಯಮುನಾ ಗಾಂವ್ಕರ್ ಆರಂಭಿಕ ಮಾತಾಡಿ ನಿರಾತಂಕದ ಹಗಲು, ನಿರ್ಭಯದ ರಾತ್ರಿಗಳು ನಮ್ಮೆಲ್ಲರದಾಗಲಿ ಎಂದು ಎಲ್ಲರನ್ನೂ ಸ್ವಾಗತಿಸಿದರು. ಶ್ಯಾಮನಾಥ ನಾಯ್ಕ ವಂದಿಸಿದರು. ವೀರೇಶ್ ರಾಠೋಡ ನಿರ್ವಹಿಸಿದರು.
ನಾಡಿನ ಹಸಿರು ತಾಯಂದಿರಾದ ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮಗೌಡ ಹಾಗೂ ತುಳಸಿಗೌಡರಿಗೆ ಪುಷ್ಪನಮನ ಗೌರವ ಸಲ್ಲಿಸಲಾಯಿತು ಹಾಗೂ ಈ ವರ್ಷದಲ್ಲಿ ಅಗಲಿದ ಸಾಹಿತಿ ಕಲಾವಿದರು ಪತ್ರಕರ್ತರು ರಾಜಕೀಯ ಮುತ್ಸದ್ದಿಗಳು ಇತರ ಮಹನೀಯರಿಗೆ, ಪ್ರಕೃತಿ ವಿಕೋಪ ಹಾಗೂ ಯುದ್ಧದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಾಸುದೇವ ಶೇಟ್, ಜಯಶ್ರೀ ಗೌಡ, ಓಂಕಾರ ಗುನಗಿ, ಪ್ರದ್ಯುಮ್ನ ಬಸಾಪೂರ, ಎಸ್ ಎಫ್ ಐ ವಿವಿಧ ಘಟಕಗಳ ವಿದ್ಯಾರ್ಥಿ ಮುಖಂಡರು ಸಹಕಾರ ನೀಡಿದರು. ಚಿಂತನ ಉತ್ತರಕನ್ನಡ, ಕನ್ನಡ ಸಾಹಿತ್ಯ ಪರಿಷತ್ತು, ಸಹಯಾನ, ಪ್ರೀತಿಪದ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ) ಮಂಥನ ಹಾಗೂ ಎಸ್.ಎಫ್.ಐ ಸಂಘಟನೆಗಳು ಸಹಯೋಗ ನೀಡಿದ್ದರು.
ಕಾರವಾರದ ಕಡಲತಡಿಯಲ್ಲಿ ಸಾಹಿತ್ಯ ಸಮಾಜ ಚಿಂತನೆಯ ಕಾರ್ಯಕ್ರಮ ನನಸು ಕನಸಿಗೆ 25 ಸಂದು ಎರಡು ವರ್ಷ. 1992-93ರಿಂದ ಅಂದರೆ ಯುದ್ಧನೌಕೆ ಬರುವುದಕ್ಕೂ ಮೊದಲಿಂದ ನಡೆಯುತ್ತಿರುವ ಆಪ್ತ ಕಾರ್ಯಕ್ರಮ. ಬಹುತ್ವ ಭಾರತದಲ್ಲಿ ಶಾಂತಿ ಸಮೃದ್ಧಿ, ಸೌಹಾರ್ದ ಕರ್ನಾಟಕ ಬಯಸಿ ಸಮಾಜ ಬದಲಾವಣೆಯಲ್ಲಿ ತುಡಿತವಿರುವವರೆಲ್ಲ ತಪ್ಪದೇ ಸೇರಿ ಹಿಂದಿನ ದಿನಮಾನಗಳ ವಿಮರ್ಷಿಸಿ ಮುಂದೇನು ಬಯಸುತ್ತೇವೆ ಎಂದು ಮಾತಾಡುತ್ತಾರೆ ಕವಿತೆ ಓದುತ್ತಾರೆ ಹಾಡು ಹೇಳುತ್ತಾರೆ ಕೆಲವೊಮ್ಮೆ ಚಿತ್ರ ಬರೆಯುತ್ತಾರೆ ಅಲ್ಲೇ ಪಕ್ಕದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಇದಕ್ಕೆ ಈ ಹಿಂದೆ ರಾಜ್ಯದ ಅನೇಕ ಗಣ್ಯರು ಹೋರಾಟಗಾರರು ಪತ್ರಕರ್ತರು ಹಿರಿಯ ಅಧಿಕಾರಿಗಳು ನ್ಯಾಯಮೂರ್ತಿಗಳು ಚಿಂತಕರು ಬಂದುಹೋಗಿದ್ದಾರೆ.
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆಗೆ ಸಿದ್ಧತೆ!?| ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
