ನಗದು ಬದಲು ದಿನಸಿ ಕಿಟ್ ಸ್ವಾಗತ , ಅವೈಜ್ಞಾನಿಕ ಕಾರ್ಡ್ ಕಡಿತಕ್ಕೆ ವಿರೋದ – ಸಿಪಿಐಎಂ

ಬೆಂಗಳೂರು: ಒಕ್ಕೂಟ ಸರಕಾರ ಹೆಚ್ಚುವರಿ ಐದು ಕೇಜಿ ಅಕ್ಕಿ ನೀಡದ ಪ್ರಯುಕ್ತ, ರಾಜ್ಯ ಸರಕಾರ ಬಿಪಿಎಲ್ ರೇಷನ್ ಕಾರ್ಡದಾರರಿಗೆ ಇದುವರೆಗೆ ಅನ್ನ ಭಾಗ್ಯ ಯೋಜನೆಯಡಿ ನೀಡುತ್ತಿದ್ದ ನಗದು ಹಣ ನೀಡಿಕೆ ಬದಲಿಗೆ, ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಇರುವ ದಿನಸಿ ಕಿಟ್ ನೀಡಲು ನಿರ್ಧರಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಸ್ವಾಗತಿಸುತ್ತದೆ ಮತ್ತು ಇದನ್ನು ಮುಂದುವರೆಸಿ ಇತರೆ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯ ಅರ್ಧ ದರಕ್ಕೆ ಒದಗಿಸಲು ಅಗತ್ಯ ಕ್ರಮವಹಿಸುವಂತೆ  ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮನವಿ ಮಾಡಿದ್ದಾರೆ. ನಗದು 

ಆದರೆ, ರೇಷನ್ ಕಾರ್ಡ ರದ್ದತಿಗೆ ಕುಟುಂಬದ ಯಜಮಾನರ ಆದಾಯದ ಬದಲಿಗೆ ಕೂಡು ಕುಟುಂಬದ ಸದಸ್ಯರ ವಾರ್ಷಿಕ ಆದಾಯ 1.20 ಲಕ್ಷ ಮೀರಿದರೆ ಕಾರ್ಡ್ ರದ್ದು ಮಾಡುವ ಚಿಂತನೆ ಅವೈಜ್ಞಾನಿಕವಾಗಿದೆ. ಈ ಕೂಡಲೆ ಅಂತಹ ಜನ ವಿರೋದಿ ನಿಲುಮೆಯನ್ನು ಕೈ ಬಿಡುವಂತೆ ಸಿಪಿಐಎಂ ಬಲವಾಗಿ ಒತ್ತಾಯಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ಗುಣಮುಖ; ಆಸ್ಪತ್ರೆಯಿಂದ ಡಿಸ್ಚಾರ್ಜ್

ಅಗತ್ಯ ವಸ್ತುಗಳ ಬೆಲೆಗಳು ಇಳಿಯದೆ ನಿರಂತರ ಗಗನಮುಖಿಯಾಗುತ್ತಿರುವ ಸಂದರ್ಭದಲ್ಲಿ, ಇಂತಹ ಯೋಚನೆಗಳು, ವ್ಯಾಪಕವಾಗಿ ಬಡ ಜನತೆಯನ್ನು ಮತ್ತಷ್ಠು ಗಂಭೀರ ಅಪೌಷ್ಠಿಕತೆಯೆಡೆಗೆ ಹಾಗೂ ಹಸಿವಿನ ಸಾವುಗಳ ದವಡೆಗೆ ತಳ್ಳಲಿವೆ. ಮೇಲಾಗಿ ಬಿಪಿಎಲ್ ಮಾನದಂಡವೆ ಅವೈಜ್ಞಾನಿಕವಾಗಿದೆ ಅದನ್ನು ಕನಿಷ್ಠ 2.5 ಲಕ್ಷ ರೂಗಳಿಗೆ ಹೆಚ್ಚಿಸಬೇಕಾಗಿದೆ ಎಂದರು.

ಕೂಡು ಕುಟುಂಬದಲ್ಲಿ ಯಾರಾದರು ಆದಾಯದ ಹೆಚ್ಚಳದ ದುಡಿಮೆಯಲ್ಲಿ ತೊಡಗಿದ್ದರೆ,ಅಂತಹ ವ್ಯಕ್ತಿಯನ್ನು ವೈಜ್ಞಾನಿಕ ನೀತಿಯಡಿ ಹೊರಗಿಡಬಹುದೇ ಹೊರತು ಕುಟುಂಬದ ಕಾರ್ಡ್ ರದ್ದುಗೊಳಿಸುವುದು ಸರಿಯಾದ ಕ್ರಮವಾಗಿಲ್ಲ ವೆಂದು ಸಿಪಿಐಎಂ ವಿಶ್ಲೇಷಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಶ್ರಮಿಕರ ಧ್ವನಿ ಕಾಮ್ರೇಡ್ ಸೂರಿ – ತಪನ್ ಸೇನ್ Janashakthi Media

Donate Janashakthi Media

Leave a Reply

Your email address will not be published. Required fields are marked *