ಬೆಂಗಳೂರು: ಅಂತರ್ಜಾತಿ ವಿವಾಹವಾದ ದಂಪತಿಗಳ ನೋಂದಣಿಗೆ ಸ್ವಯಂ ಸೇವಾ ಸಂಸ್ಥೆಯೊಂದು ಮುಂದಾಗಿದ್ದು, ಇದಕ್ಕಾಗಿ ಈ ಸ್ವಯಂಸೇವಾ ಸಂಸ್ಥೆ ವೆಬ್ಸೈಜ್ ಸಿದ್ಧಪಡಿಸಿದ್ದು,ಈ ಅಂತರ್ಜಾತಿ ವಿವಾಹವಾದ ದಂಪತಿಗಳ ವೆಬ್ಸೈಟ್ ಅನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ.
ಜನಸ್ಪಂದನ ಹಾಗೂ ಮಾನವ ಮಂಟಪ ಸಂಸ್ಥೆ ವತಿಯಿಂದ ಆಯೋಜಿಸಿರುವ ಅಂತರ್ಜಾತಿ ವಿವಾಹಿತರ ಸಭೆ ಹಾಗೂ ಅಂತರ್ಜಾತಿ ದಂಪತಿಗಳ ನೋಂದಣಿಯ ವೆಬ್ಸೈಟ್ ಇದಾಗಿದೆ.
ಇದನ್ನು ಓದಿ : ಸರ್ಕಾರಿ ಹೊರಗುತ್ತಿಗೆ ಮೀಸಲಾತಿ, ಸಾಮಾಜಿಕ ನ್ಯಾಯ, ಮೂಗಿಗೆ ತುಪ್ಪವೇ?
ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಾತಿ,ಜಾತಿ ನಡುವಿನ ಕಲಹ ಜತೆಗೆ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿರುವ ಈ ವೇಳೆ ಅಂತರ್ಜಾತಿ ದಂಪತಿಗಳ ಸಭೆ ನಡೆಸುತ್ತಿರುವುದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂಬ ಉದ್ದೇಶವಾಗಿರುವುದಾಗಿ ಹೇಳಿದ್ದಾರೆ .
ಇದನ್ನು ನೋಡಿ : ಗ್ರೇಸ್ ಮಾರ್ಕ್ಸ್ : ಶಾಲಾ ಶಿಕ್ಷಣದ ಹೀನಾಯ ಸ್ಥಿತಿ ಅನಾವರಣJanashakthi Media