ಹಿರಿಯೂರು: ದ್ವಿಚಕ್ರ ವಾಹನಗಳನ್ನು ‘ಹೆಲ್ಮೆಟ್ ಧರಿಸದೆ ಓಡಿಸುವುದರಿಂದ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತಾಗುತ್ತದೆ’ ಎಂದು ನಗರ ಪಿಎಸ್ಐ ಲಕ್ಷ್ಮಿ ನಾರಾಯಣ್ ಎಚ್ಚರಿಸಿದರು.
ನಗರದ ಪ್ರಧಾನ ರಸ್ತೆಯಲ್ಲಿ ಭಾನುವಾರ ಹೆಲ್ಮೆಟ್ ಧರಿಸದೆ ವಾಹನ ಓಡಿಸುತ್ತಿದ್ದವರನ್ನು ತಡೆದು, ಜಾಗೃತಿ ಮೂಡಿಸಿದರು.
ಇದನ್ನೂ ಓದಿ : ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ಭಾಗಿಯಾದರೆ ವಜಾ: ಜಿ. ಪರಮೇಶ್ವರ್
‘ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿ ಎಂಬುದನ್ನು ಸವಾರರು ನೆನಪಿಡಬೇಕು. ಹೆಲ್ಮೆಟ್ ಧರಿಸದವರು ಪೊಲೀಸರನ್ನು ಕಂಡಾಕ್ಷಣ ದಂಡದಿಂದ ತಪ್ಪಿಸಿಕೊಳ್ಳಲು ಪರ್ಯಾಯ ದಾರಿಯಲ್ಲಿ ವೇಗವಾಗಿ ತೆರಳಿ ಅಪಘಾತಕ್ಕೆ ಈಡಾಗಿರುವುದುಂಟು. ₹500 ರಿಂದ ₹1,000 ದಂಡ ಹಾಕಿಸಿಕೊಳ್ಳುವ ಬದಲು ಐಎಸ್‌ಐ ಮಾನ್ಯತೆಯ ಹೆಲ್ಮೆಟ್ ಧರಿಸಿದಲ್ಲಿ ಧೈರ್ಯವಾಗಿ ವಾಹನ ಚಲಾಯಿಸಬಹುದು’ ಎಂದು ಹೇಳಿದರು.
ಪಿಎಸ್ಐ ಶಶಿಕಲಾ, ಎಎಸ್ಐ ರೇಖಾ, ಹೆಡ್ ಕಾನ್‌ಸ್ಟೆಬಲ್ ಸುರೇಶನಾಯಕ್, ನಂಜೇಗೌಡ, ಕಾನ್‌ಸ್ಟೆಬಲ್ ರಾಘವೇಂದ್ರ, ಸುನಿಲ್, ನಿಂಗಪ್ಪ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತಂದ ನಾಟಕಕಾರ ಪಿ.ಬಿ.ಧುತ್ತರಗಿ Janashakthi Media
