ಅಫ್ಘಾನಿಸ್ತಾನ ನಿರಾಶ್ರಿತರಿಗೆ ಪಾಕಿಸ್ತಾನ ಆಶ್ರಯ ನೀಡಬೇಕು-ಮಹಿಳೆಯರು, ಬಾಲಕಿಯರ ಸುರಕ್ಷತೆಯ ಅಗತ್ಯವಿದೆ: ಮಲಾಲಾ

ಲಂಡನ್‌: ಅಫ್ಗಾನಿಸ್ತಾನದಲ್ಲಿ ಬದಲಾದ ಸನ್ನಿವೇಶದಲ್ಲಿ ತಾಲಿಬಾನ್‌ ಉಗ್ರರ ಹಿಡಿತದಿಂದಾಗಿ ಅಲ್ಲಿನ ಪರಿಸ್ಥಿತಿ ವಿಷಮಯವಾಗಿದೆ. ಇದರಿಂದಾಗಿ ನಿರಾಶ್ರಿತರಾದರಾದವರಿಗೆ ಪಾಕಿಸ್ತಾನದಲ್ಲಿ ಆಶ್ರಯ ನೀಡಬೇಕು. ಎಲ್ಲ ನಿರಾಶ್ರಿತ ಮಕ್ಕಳಿಗೂ ಶಿಕ್ಷಣ, ಸುರಕ್ಷತೆ ಮತ್ತು ರಕ್ಷಣೆಯ ಅಗತ್ಯವಿದೆ. ಅವರ ಭವಿಷ್ಯ ಹಾಳಾಗದಂತೆ ಕಾಪಾಡಬೇಕಾಗಿದೆ. ಎಂದು ಆಗ್ರಹಿಸಿ ಮಲಾಲಾ ಯೂಸೂಫ್‌ಝಾಯಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಪತ್ರ ಬರೆದಿದ್ದಾರೆ.

ಅಫ್ಘಾನ್‌ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ವಿಚಾರವಾಗಿ ತೀವ್ರ ಕಳವಳವ್ಯಕ್ತಪಡಿಸಿರುವ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ವಿಶ್ವ ನಾಯಕರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜಾಗತಿಕ ಮತ್ತು ಪ್ರಾದೇಶಿಕ ಶಕ್ತಿಗಳು ತಕ್ಷಣವೇ ಕದನ ವಿರಾಮಕ್ಕೆ ಕರೆ ನೀಡುವಂತೆ ಮತ್ತು ಅಫ್ಘಾನಿಸ್ತಾನದಲ್ಲಿ ನಾಗರಿಕರಿಗೆ ಸಹಾಯ ಮಾಡುವಂತೆ ಒತ್ತಾಯಿಸಿದರು.

ಇದನ್ನು ಓದಿ: ಅಫ್ಘಾನಿಸ್ತಾನ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ, ಗಾಳಿಯಲ್ಲಿ ಗುಂಡು

‘ಈ ಹಿಂದೆ ಅಫ್ಗಾನಿಸ್ತಾನದ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಮುಂದಿನ ಭವಿಷ್ಯದ ದಿನಗಳಲ್ಲಿ ಆ ಬಗ್ಗೆ ನಮಗೆ ಖಾತ್ರಿ ಇಲ್ಲ  ಎಂದೆನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಲಾಲಾ ಹೇಳಿದ್ದಾರೆ.

ಅಫ್ಗನ್‌ ಜನರ ರಕ್ಷಣೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಾಡಬೇಕಾದದ್ದು ಬಹಳಷ್ಟಿದೆ. ಅಲ್ಲದೇ, ಅಫ್ಗಾನಿಸ್ತಾನದ ವಿಚಾರವಾಗಿ ತಾವು ವಿಶ್ವದ ನಾಯಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವೆ. ಇದು ಮಾನವೀಯತೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿ. ನಾವು ನಮ್ಮ ಸಹಾಯ ಮತ್ತು ಬೆಂಬಲವನ್ನು ಈ ಸಂದರ್ಭದಲ್ಲಿ ನೀಡಬೇಕಾಗಿದೆ’ ಎಂದು ಮಲಾಲಾ ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿಗೆ ತಿಳಿಸಿದ್ದಾರೆ.

ಈಶಾನ್ಯ ಪಾಕಿಸ್ತಾನದ ಸ್ವಾತ್‌ ಕಣಿವೆಯಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಆಂದೋಲನ ನಡೆಸಿದ ಮಲಾಲಾ ಯೂಸೂಫ್‌ಝಾಯಿಗೆ 2012ರಲ್ಲಿ ತಾಲಿಬಾನ್‌ ಉಗ್ರರಿಂದ ಗುಂಡು ಹಾರಿಸಿದ್ದರು. ಗುಂಡೇಟಿನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಗುಣಮುಖರಾದರು. ದಾಳಿಯ ನಂತರ, ತಾಲಿಬಾನ್ ಒಂದು ಹೇಳಿಕೆ ಬಿಡುಗಡೆಮಾಡಿ ಮಲಾಲಾ ಬದುಕಿದರೆ ಮತ್ತೆ ಅವರನ್ನು ಗುರಿಯಾಗಿಸಿ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ಆಫ್ಘಾನಿಸ್ತಾನ: ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ

2014ರಲ್ಲಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಯೂ ಸಿಕ್ಕಿತ್ತು. ಕಳೆದ ವರ್ಷ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *