ಒಂದು ವರ್ಗವನ್ನು ನೋಯಿಸುವ ಯಾವುದೇ ವಿಷಯದಲ್ಲಿ ನಾವು ಭಾಗಿಯಾಗಬಾರದು : ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ಹೇಳಿಕೆಗೆ ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವರ್ಗದ ಜನರನ್ನು ನೋಯಿಸುವ ಯಾವುದೇ ವಿಷಯದಲ್ಲಿ ನಾವು ಭಾಗಿಯಾಗಬಾರದು ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮಮತಾ ಅವರು ಹೇಳಿದ್ದಾರೆ.

ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡಬಾರದು, ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳಿದರು. ನನಗೆ ತಮಿಳುನಾಡು ಜನರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರಿಗೆ ಒಂದು ಕಳಕಳಿಯ ವಿನಂತಿ, ಪ್ರತಿ ಧರ್ಮವೂ ಅದರದೇ ಆದ ಭಾವನೆಗಳನ್ನು ಹೊಂದಿದೆ ಎಂದು ಮಮತಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಮಮತಾ ಬ್ಯಾನರ್ಜಿ ನಿವಾಸಕ್ಕೆ ಬಂದೂಕು ಹಿಡಿದು ನುಗ್ಗಲು ಯತ್ನಿಸಿದ : ವ್ಯಕ್ತಿ ಬಂಧನ

ಭಾರತವು ಒಂದು ಜಾತ್ಯತೀತ ರಾಷ್ಟ್ರ. ಇದು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ವಿವಿಧತೆಯಲ್ಲಿ ಏಕತೆ ನಮ್ಮ ಮೂಲವಾಗಿದೆ. ಹಾಗಾಗಿ ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ಎಲ್ಲೆಂದರಲ್ಲಿ ಹೋಗುತ್ತೇವೆ. ಯಾವುದೇ ವರ್ಗಕ್ಕೆ ನೋವುಂಟು ಮಾಡುವ ಯಾವುದೇ ವಿಷಯದಲ್ಲಿ ನಾವು ಭಾಗಿಯಾಗಬಾರದು ಎಂದು ಹೇಳಿದರು.

ಖಂಡನೆ ಎಂದು ಹೇಳುವ ಬದಲು, ಪ್ರತಿಯೊಬ್ಬರಿಗೂ ನನ್ನ ವಿನಮ್ರ ವಿನಂತಿಯೆಂದರೆ, ನಾವು ಪ್ರಮುಖ ವಿಭಾಗ ಅಥವಾ ಸಣ್ಣ ವಿಭಾಗವನ್ನು ನೋಯಿಸುವ ಯಾವುದನ್ನಾದರೂ ನಾವು ಪ್ರತಿಕ್ರಿಯಿಸಬಾರದು. ನಾವು ವಿವಿಧತೆಯಲ್ಲಿ ಏಕತೆಯನ್ನು ನೆನಪಿಟ್ಟುಕೊಳ್ಳಬೇಕು ಎಂದು ಮಮತಾ ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *