ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ನಾವು ಗೌರವಿಸಬೇಕು: ಡಿಕೆ ಶಿವಕುಮಾರ್

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ನಾವು ಗೌರವಿಸಬೇಕು. ನಮ್ಮ ರಾಜ್ಯದಲ್ಲಿ ಸಮರ್ಪಕವಾದ ಮಳೆಯಾಗಿಲ್ಲ, ಆದರೂ ನಾವು ಪ್ರಾಧಿಕಾರದ ತೀರ್ಪನ್ನು ಗೌರವಿಸಬೇಕಿದೆ. ನಮ್ಮಲ್ಲಿರುವ ನೀರನ್ನು ಹರಿಸಲು ಚಿಂತನೆ ನಡೆಸಿದ್ದೇವೆ, ನಾವು ಪ್ರಾಧಿಕಾರದ ತೀರ್ಪನ್ನು ಗೌರವಿಸುತ್ತೇವೆ ಎಂದು ನೀರು ಬಿಡುವ ಕುರಿತು ತಮಿಳುನಾಡಿನ ಜಲಶಕ್ತಿ ಸಚಿವರಿಗೆ ಬರೆದ ಪತ್ರದ ಬಗ್ಗೆ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲೆಂದು ನದಿ ಜೋಡಣೆ: ಸಿದ್ದರಾಮಯ್ಯ ಆರೋಪ

ರಾಜ್ಯದಲ್ಲಿ ಮಳೆಯ ಕೊರತೆ ಇದ್ದರೂ, ಕುಡಿಯುವ ನೀರಿನ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಸಾಕಾಗುವಷ್ಟು ನೀರಿಲ್ಲ. ಇನ್ನೂ ಕೆಲವು ದಿನಗಳಲ್ಲಿ ನದಿ ಪ್ರದೇಶಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಜಲಸಂಪನ್ಮೂಲ ಸಚಿವ  ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕುಡಿಯುವ ನೀರನ್ನು ಇಟ್ಟುಕೊಳ್ಳದೇ ನಾವು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಲು ಯೋಚಿಸುತ್ತೇವೆ. ಕಳೆದ 3 ವರ್ಷಗಳಲ್ಲಿ ಚೆನ್ನಾಗಿ ಮಳೆಯಾಗಿತ್ತು. ಆದರೆ ಈ ವರ್ಷ ಮಳೆಯಾಗಿಲ್ಲ ಎಂದು  ಹೇಳಿದ್ದಾರೆ.

ಪರ್ಯಾಯ ಯೋಜನೆ ಇದೆಯೇ? ಎಂದು ಕೇಳಿದ್ದಕ್ಕೆ ಸಂಕಟದ ಸಂದರ್ಭದಕ್ಕೆ ಒಂದು ಸೂತ್ರವಿದೆ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಕಾವೇರಿ ನೀರು ಹರಿಸದೇ ಇದ್ದರೆ, ಕಟಾವಿಗೆ ಬಂದಿರುವ ಕರುವೈ ಬೆಳೆ ಹಾಳಾಗುತ್ತದೆ ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಮಿಳುನಾಡು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿತ್ತು.

Donate Janashakthi Media

Leave a Reply

Your email address will not be published. Required fields are marked *