ದೂರು ನೀಡುವ ಬಿಜೆಪಿ, ಗಲಭೆಯನ್ನು ಪ್ರೋತ್ಸಾಹಿಸುತ್ತದೆ – ಡಾ.ಜಿ.ಪರಮೇಶ್ವರ್

ಬೆಂಗಳೂರು :ವಿನಾಕಾರಣ ಚುನಾವಣಾ ಸಮಯದಲ್ಲಿ ಗಲಭೆ, ದಾಂಧಲೆ ಮಾಡಿದರೆ, ಕಾನೂನಿನಡಿ ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಗರದಲ್ಲಿಂದು ಸಚಿವ ಶಿವರಾಜ್‌ ತಂಗಡಿ ವಿರುದ್ಧ ಬಿಜೆಪಿ ಯುವ ಮತದಾರರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕುರಿತು ಮಾಧ್ಯಮದವರೊಂದಿಗೆ ಪರಮೇಶ್ವರ್‌ ಮಾತನಾಡಿದರು.

ತಂಗಡಗಿ ಅವರು ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ , ಅವರೇ ಹೇಳಿದಂತೆ ಯುವಜನತೆಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಪ್ರಧಾನ ಮಂತ್ರಿಯಾದವರು ಹೀಗೆ ಭರವಸೆ ನೀಡಿ ಸುಳ್ಳು ಹೇಳುವುದು ಎಂದರೆ ಏನು? ಪ್ರಚೋದನಕಾರಿ ಹೇಳಿಕೆ ನೀಡುವುದು ಎಂದರೆ, ಅದು ಬಿಜೆಪಿ .ಗಲಭೆ ಮಾಡಿಸುವವರು ಯಾರು? ಯಾರು ಹೇಳುತ್ತಾರೆಯೋ ಅವರೇ ಗಲಭೆ ಮಾಡಿಸುವುದು ಎಂದು ಬಿಜೆಪಿಯ ಆರೋಪಕ್ಕೆ ಪರಮೇಶ್ವರ್‌, ತಿರುಗೇಟು ನೀಡಿದರು.

ಚುನಾವಣಾ ಆಯುಕ್ತರಾದವರೇ ವಿವಾದಾತ್ಮಕ ಹೇಳಿಕೆ, ಪ್ರಚೋದನೆ ಹೇಳಿಕೆ, ಧಾರ್ಮಿಕ ಪ್ರಚೋದನೆ ಮಾಡಬಾರದು ಎಂದು ಸೂಚಿಸಿದ್ದಾರೆ. ಮಾದರಿ ನೀತಿ ಸಂಹಿತೆಯ ನಿಯಮದಲ್ಲಿ ಇವೆಲ್ಲವೂ ಬರುತ್ತವೆ. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದೂರಿನ ಬಗ್ಗೆ ತಮಗೆ ತಿಳಿದಿಲ್ಲ. ಯಾರೇ ಆದರೂ ಪ್ರಚೋದನಕಾರಿಯಾಗುವಂತೆ ಹೇಳಿಕೆ ನೀಡಬಾರದು.ಎಲ್ಲವನ್ನು ಚುನಾವಣಾ ಆಯೋಗ ಗಮನಿಸುತ್ತದೆ . ಗಲಭೆ ಸೃಷ್ಟಿಸಿದಲ್ಲಿ, ಗಲಭೆ ಮಾಡಿದಲ್ಲಿ ಅದನ್ನು ಕಾಪಾಡುವುದಕ್ಕೆ ನಮ್ಮ ಬಳಿ ಸೌಲಭ್ಯಗಳಿವೆ ಎಂದು ಸೂಚ್ಯವಾಗಿ ಪರಮೇಶ್ವರ್‌ ಹೇಳಿದರು.

ಜನಾರ್ಧನರೆಡ್ಡಿ ಬಿಜೆಪಿ ಮರುಸೇರ್ಪಡೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್‌, ಒಂದು ಕಾಲದಲ್ಲಿ ಬಿಜೆಪಿಗೂ- ರೆಡ್ಡಿಗೆ ಸಂಬಂಧ ಇಲ್ಲ ಎಂದು ಬಿಜೆಪಿ ನಾಯಕರೇ ಅನೇಕ ಬಾರಿ ಹೇಳಿದ್ದರು. ಬಿಜೆಪಿ ರೆಡ್ಡಿಯನ್ನು ದೂರವಿಟ್ಟು, ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಬಾಹಿರದ ಪ್ರಕರಣಗಳೆಲ್ಲ ಮರೆತು ಹೋದವಾ? ಜನಾರ್ಧನ ರೆಡ್ಡಿ ಬಿಜೆಪಿ ಮರುಸೇರಿದ ಮಾತ್ರಕ್ಕೆ ಇವೆಲ್ಲವೂ ಹೊರಟು ಹೋಗುತ್ತದೆಯೇ?

ಎಂದು ಪ್ರಶ್ನಿಸಿದ ಪರಮೇಶ್ವರ್‌, ರೆಡ್ಡಿಯ ಬಿಜೆಪಿ ಮರುಸೇರ್ಪಡೆಯನ್ನು ರಾಜ್ಯದ ಜನ ಗಮನಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಾವು ಸೋಲುತ್ತೇವೆ ಎನ್ನುವ ಗಾಬರಿ ಹುಟ್ಟಿಕೊಂಡಿದೆ. ಕೇಂದ್ರದಲ್ಲಿ ಮತ್ತೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯದಲ್ಲಿ ಬಿಜೆಪಿ ನಾಯಕರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪದೇಪದೇ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡುವುದನ್ನು ನೋಡಿದರೆ, ಬಿಜೆಪಿಯವರಿಗಿರುವ ಭಯದ ವಾತಾವರಣ ಎದ್ದು ಕಾಣುತ್ತದೆ ಎಂದು ಜಿ.ಪರಮೇಶ್ವರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಇನ್ನೂ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಟಿಕೇಟ್‌ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡಿದ ಪರಮೇಶ್ವರ್‌, ಆದಷ್ಟು ಬೇಗ ಎಲ್ಲ ಗೊಂದಲ ಬಗೆಹರಿಯಲಿದೆ. ಕೆಲವನ್ನು ಕಾಂಪ್ರಮೈಸ್‌ ಮಾಡಬೇಕಾಗುತದೆ. ಆಕಾಂಕ್ಷಿಗಳಿಗೆ ಕೇಳಿ ಟಿಕೆಟ್ ಕೊಡಬೇಕೆನ್ನುವ ವಾತಾವರಣ ರಾಜಕೀಯದಲ್ಲಿ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಟಿಕೆಟ್ ಹಂಚಿಕೆ ಮಾಡಬೇಕು.ಇಂದು ಅಥವಾ ನಾಳೆಯೊಳಗೆ ಉಳಿದಿರುವ ಕ್ಷೇತ್ರಗಳಲ್ಲಿರುವ ಟಿಕೇಟ್‌ ಗೊಂದಲ ಬಗೆಹರಿಯುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಟಿಕೆಟ್ ಗೊಂದಲವನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *