“ನಮಗೆ ಭಿಕ್ಷಾಪಾತ್ರೆಗಳು ಬೇಡ, ನಮಗೆ ಹಕ್ಕುಗಳು ಬೇಕು”

ಮನರೇಗ ಮತ್ತೆ ಜಾರಿಗೆ ಕಾರ್ಮಿಕರು, ರೈತರು, ಕಾರ್ಯಕರ್ತರ ಆಗ್ರಹ ಭಿಕ್ಷಾಪಾತ್ರೆ
ನವದೆಹಲಿ: ಭಾರತದ 12ಕ್ಕೂ ಹೆಚ್ಚು ರಾಜ್ಯಗಳ ರೈತ, ಗ್ರಾಮ ಕಾರ್ಮಿಕರು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಅಧ್ಯಯನಕಾರರು, ಕಾನೂನು ತಜ್ಞರು ಮತ್ತು ದುಡಿಮೆಯ ಹಕ್ಕಿನ ಕಾರ್ಯಕರ್ತರು ಜನವರಿ 8ರಂದು ನವದಹಲಿಯ ಸುರ್ಜಿತ್‍ ಭವನದಲ್ಲಿ  ದುಂಡುಮೇಜಿನ ಸಭೆ ನಡೆಸಿ   ಒಂದು ರಾಷ್ಟ್ರೀಯ ಮಟ್ಟದ ಸಂಯುಕ್ತ ವೇದಿಕೆಯನ್ನು ರಚಿಸಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಮತ್ತು ಹೊಸ ವಿಬಿ-ಜಿ ರಾಮ್‍ ಜಿ  ಕಾಯ್ದೆಯನ್ನು ವಾಪಾಸು ಪಡೆಯಬೇಕು ಮತ್ತು ಬಲಪಡಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಭಿಕ್ಷಾಪಾತ್ರೆ

ಹೊಸ ಕಾನೂನು ಗ್ರಾಮೀಣ ಕಾರ್ಮಿಕರ ಹಕ್ಕುಗಳು, ಜೀವನಾಧಾರಗಳು ಮತ್ತು ಘನತೆಯ ಮೇಲೆ  ಒಂದು  ಮೂಲಭೂತ ಹಲ್ಲೆಯಾಗಿದೆ ಎಂಬ ಸರ್ವಾನುಮತದ ತೀರ್ಮಾನಕ್ಕೆ ಬಂದು  ಕೃಷಿ ಮತ್ತು ಗ್ರಾಮೀಣ ಕೂಲಿಕಾರ ಸಂಘಗಳು ಹಾಗೂ ನರೇಗಾ ಸಂಘರ್ಷ ಮೋರ್ಚಾ ಸೇರಿಕೊಂಡು  ಈ ರಾಷ್ಟ್ರೀಯ ಮಟ್ಟದ ಸಂಯೋಜಕ ಸಮಿತಿಯ ರಚನೆ ಮಾಡಲು ನಿರ್ಧಾರ ಮಾಡಿದ್ದಾರೆ.

ಹೊಸ ಬಜೆಟ್-ಸೀಮಿತ ಯೋಜನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ಮನರೇಗದ ಹಕ್ಕು-ಆಧಾರಿತ ಚೌಕಟ್ಟನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಯಲ್ಲದೆ,  ಈ ಕೆಳಗಿನ ಆಗ್ರಹಗಳನ್ನೂ ಈ ಸಂಯುಕ್ತ ವೇದಿಕೆ ಮುಂದಿಟ್ಟಿದೆ.

  • ದಿನಕ್ಕೆ ಕನಿಷ್ಠ ₹700 ಕೂಲಿಯಲ್ಲಿ 200 ದಿನಗಳ ಖಚಿತ ಉದ್ಯೋಗ
  • ಹೊರತುಪಡಿಸುವ ತಂತ್ರಜ್ಞಾನಗಳನ್ನು ಹಿಂಪಡೆಯಬೇಕು
  • ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಗ್ರಾಮ ಸಭೆಗಳ ಮಂಜೂರಾತಿ  ಮತ್ತು ಮೇಲ್ವಿಚಾರಣೆ ಕಡ್ಡಾಯವಾಗಬೇಕು.

ಇದನ್ನೂ ಓದಿ: 10 ನಿಮಿಷಗಳ ತ್ವರಿತ ವಿತರಣೆ ನಿಷೇಧಕ್ಕೆ ಸಿಐಟಿಯು ಸ್ವಾಗತ; ಸಮಗ್ರ ನೀತಿಯ ಅನುಷ್ಠಾನಕ್ಕೆ ಆಗ್ರಹ

10 ಜನವರಿ ಯಿಂದ 12 ಫೆಬ್ರವರಿ ವರೆಗೆ ಒಂದು ತಿಂಗಳ ದೇಶವ್ಯಾಪಿ ಅಭಿಯಾನ ಸಂಯೋಜಿತ  ಸಾಮೂಹಿಕ ಪ್ರತಿರೋಧದ ಮೊದಲ  ಹಂತವಾಗುತ್ತದೆ ಎಂದು  ದುಂಡು ಮೇಜಿನ ಸಭೆ  ತೀರ್ಮಾನ  ಮಾಡಿದೆ.

ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಡಿಸೆಂಬರ್ 21ರಂದು ಶಾಸನ ವಾಗಿರುವ ವಿಬಿ ಜಿ ರಾಮ್‍ ಜಿ 125 ದಿನಗಳ ಕೆಲಸದ ಭರವಸೆ ನೀಡುವ ಒಂದು ಸುಧಾರಣೆಯತ್ತ ಮುಖ ಮಾಡಿರುವ ಗ್ರಾಮೀಣ ಉದ್ಯೋಗ ಉಪಕ್ರಮ  ಎಂದು ಕೇಂದ್ರ ಸರಕಾರ ಪ್ರಚಾರ ಆರಂಭಿಸಿದೆ.ಆದರೆ ಇದು ತಪ್ಪುದಾರಿಗೆಳೆಯುವ ದಾವೆ ಎಂದು ಗ್ರಾಮೀಣ ಕೆಲಸಗಾರರ ಸಂಘಟನೆಗಳು ಹೇಳುತ್ತಿವೆ. ಮನರೇಗ 2005 ಉದ್ಯೋಗ ಒಂದು ಹಕ್ಕು ಎಂದು ಕಾನೂನಾತ್ಮಕವಾಗಿ ಭರವಸೆ ನೀಡಿದ್ದ, ಬೇಡಿಕೆ-ಚಾಲಿತ ಕಾಯ್ದೆ. ಆದರೆ ವಿಬಿ ಜಿ ರಾಮ್‍ ಜಿ ಹಾಗಿಲ್ಲ, ಅದು ಮನರೇಗವನ್ನು  ಕೇಂದ್ರ ಸರಕಾರದ ಹತೋಟಿಯ ಪೂರೈಕೆ-ಚಾಲಿತ ಯೋಜನೆಯಾಗಿ ಮಾರ್ಪಡಿಸುತ್ತದೆ, ಮತ್ತು ಕೃಷಿ ಚಟುವಟಿಕೆಗಳು ತುತ್ತ ತುದಿಗೇರುವ ದಿನಗಳಲ್ಲಿ ಯೋಜನೆಯನ್ನು ನಿಲ್ಲಿಸುವುದಕ್ಕೆ ಅವಕಾಶ ಕೊಡುತ್ತದೆ.

ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿದ ಪ್ರಖ್ಯಾತ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್, ಈ ಕಾಯ್ದೆಯನ್ನು ನವ-ಉದಾರವಾದಿ ಚೌಕಟ್ಟಿನಲ್ಲಿ ಇಟ್ಟು ವಿಶ್ಲೇಷಿಸುತ್ತ, ವಿಬಿ ಜಿ ರಾಮ್‍ ಜಿ ಕಾಯ್ದೆ ನವೀಕರಣವಲ್ಲ, ಬದಲಿಗೆ ಹಕ್ಕು-ಆಧಾರಿತ ಚೌಕಟ್ಟು ಮತ್ತು ಸುರಕ್ಷತೆಯನ್ನು ಹಾಳುಗೆಡಹುವ ಕಾಯ್ದೆ ಎಂದು ಹೇಳಿದರು. ಜಾಗತಿಕ ಬಂಡವಾಳವು ಗ್ರಾಮೀಣ ಮತ್ತು ಅನೌಪಚಾರಿಕ ಕಾರ್ಮಿಕರ ಮೇಲೆ ತನ್ನ ಅತ್ಯಂತ ಕಠಿಣ ಒತ್ತಡವನ್ನು ಹೇರುತ್ತದೆ. ಮನರೇಗ ಇದರ ವಿರುದ್ಧ ಒಂದು ಕನಿಷ್ಟ ಸುರಕ್ಞಾ ಕವಚವಾಗಿ ಕೆಲಸ ಮಾಡುತ್ತಿತ್ತು, ಹೊಸ ಕಾಯ್ದೆ ಈ ಕನಿಷ್ಟ ಸುರಕ್ಷತೆಯನ್ನೂ ಕೂಡ ಕಳಚಿಹಾಕುವ ಬೆದರಿಕೆಯೊಡ್ಡಿದೆ ಎಂದು ಅವರು ಹೇಳಿದರು. ಭಿಕ್ಷಾಪಾತ್ರೆ

ನರೇಗ ಸಂಘರ್ಷ್ ಮೋರ್ಚಾದ ನಿಖಿಲ್ ಡೇ ಮತ್ತು ಅನುರಾಧಾ ತಲ್ವಾರ್  ಈ ಕಾನೂನು ಕೂಲಿ ಪಾವತಿಗೆ ಸಂಬಂಧಿಸಿದ ಕೇಂದ್ರದ ಹೊಣೆಗಾರಿಕೆಯನ್ನು ಕುಗ್ಗಿಸಿ, ಹಣಕಾಸಿನ ಭಾರವನ್ನು ರಾಜ್ಯಗಳ ಮೇಲೆ ಹಾಕಿದೆ ಮತ್ತು  ಭಾರತದ ಪ್ರಜಾಸತ್ತಾತ್ಮ ಕ ಚೌಕಟ್ಟಿನಲ್ಲಿ ಒಕ್ಕೂಟ ತತ್ವದ ಮೇಲೆ ದಾಳಿಯೂ ಆಗಿದೆ  ಎಂದು ಹೇಳಿದರು. ಭಿಕ್ಷಾಪಾತ್ರೆ

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರತಿನಿಧಿಗಳು ಮನರೇಗ ಇಲ್ಲದಿದ್ದರೆ ಗ್ರಾಮೀಣ ಭಾರತ ಆರ್ಥಿಕ ಆಘಾತಗಳು, ಹವಾಮಾನ ಸಂಕಷ್ಟ ಮತ್ತು ಕೃಷಿ ಅಸ್ಥಿರತೆಯ ಎದುರು ರಕ್ಷಣಾಹೀನವಾಗಿ ಬಿಡುತ್ತದೆ ಎಂದು ಹೇಳಿದರು.

ಸಂಯುಕ್ತ ಕಿಸಾನ್‍ ಮೋರ್ಚಾ ಪ್ರತಿನಿಧಿಗಳು ಹಿಂದಿನ ಮನರೇಗದ ನಾಶವೆಂದರೆ  ಗ್ರಾಮೀಣ ಅರ್ಥವ್ಯವಸ್ಥೆಯ ನಾಶ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ ಮತ್ತು ಐಎನ್‍ಟಿಯುಸಿಯ ಪ್ರತಿನಿಧಿಗಳು ಮನರೇಗ ರದ್ದತಿ ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸರಕಾರ ಮುಂದೊತ್ತುತ್ತಿರುವುದು ಕಾರ್ಮಿಕರಿಗೆ ರಕ್ಷಣೆಗಳನ್ನು ಕಳಚಿ ಹಾಕುವ ಅಜೆಂಡಾದ ಭಾಗಗಳು ಎಂದು ಹೇಳಿದರು.

ಡಿವೈಎಫ್‍ಐ, ಎಐಡಿಡಬ್ಲ್ಯುಎ , ಎಸ್‍ಎಫ್‍ಐ, ಎಐವೈಎಫ್ ಮುಂತಾದ ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳು ಉದ್ಯೋಗ ಅಭದ್ರತೆಯ ಪರಿಣಾಮಗಳನ್ನು ಒತ್ತಿ ಹೇಳುತ್ತ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದವು. ಭಿಕ್ಷಾಪಾತ್ರೆ

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯದರ್ಶಿ ವಿಕ್ರಂ ಸಿಂಗ್‍ ಚರ್ಚೆಯ ಸಾರಾಂಶವನ್ನು ಮಂಡಿಸುತ್ತ, ಕೂಲಿಗಳಲ್ಲಿ ಕಡಿತವಾಗುತ್ತಿದೆ, ಕಾನೂನು ಹಕ್ಕುಗಳನ್ನು ತೆಗೆದು ಹಾಕಲಾಗುತ್ತಿದೆ ಮತ್ತು ಕಾರ್ಮಿಕರನ್ನು ಅವಲಂಬನೆಯತ್ತ ತಳ್ಳಲಾಗುತ್ತಿದೆ, ಒಟ್ಟಿನಲ್ಲಿ “ನಮಗೆ ಭಿಕ್ಷಾಪಾತ್ರಗಳು ಬೇಕಿಲ್ಲ, ನಮಗೆ ಹಕ್ಕುಗಳು ಬೇಕು” ಎಂಬುದು ಹೋರಾಟದ ಕೇಂದ್ರ ಸಂದೇಶ ಎಂದರು. ಭಿಕ್ಷಾಪಾತ್ರೆ

ಐಕ್ಯ ಮತ್ತು ಸಾಮೂಹಿಕ ಕಾರ್ಯಾರಣೆ ಮಾತ್ರವೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಬಿ ಜಿ ರಾಮ್‍ಜಿ ಯನ್ನು ಹಿಂಪಡೆಯುವಂತೆ ಹಾಗೂ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸುವಂತೆ ಮಾಡಬಲ್ಲದು ಎಂದು ಘೋಷಿಸುತ್ತ ಸಭೆ ಸಂಯೋಜಿತ  ಸಾಮೂಹಿಕ ಪ್ರತಿರೋಧದ ಮೊದಲ  ಹಂತವಾಗಿ 10 ಜನವರಿ ಯಿಂದ 12 ಫೆಬ್ರವರಿ ವರೆಗೆ ಒಂದು ತಿಂಗಳ ದೇಶವ್ಯಾಪಿ ಅಭಿಯಾನ ನಡೆಸಲು ತೀರ್ಮಾನ  ಮಾಡಿತು.

ಇದನ್ನೂ ನೋಡಿ: ಮನೆ ಕೆಲಸಗಾರರನ್ನು ಅವಮಾನಿಸಿದ ಬುಕ್‌ಮೈಬಾಯಿ ವಿರುದ್ಧ ಕ್ರಮಕ್ಕೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *