ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರನ್ನು ಇನ್ನಿಲ್ಲದಂತೆ ಕಾಡಿ ಕಂಗೆಡಿಸಿವೆ. ಸಾಕಷ್ಟು ಜನರ ಪ್ರಾಣಕ್ಕೆ ಕಂಟಕವಾಗಿವೆ. ಜೀವ ಹಿಂಡುವ ಇಂತಹ ಪೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದೂ, ಈ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಕ್ರೋ
ನಾಳೆಯೇ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ನಾವು ಸುಗ್ರೀವಾಜ್ಞೆ ತರಲು ನಿರ್ಧರಿಸಿದ್ದೇವೆ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸುಮೋಟೋ ಕೇಸ್ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ತಿಳಿಸಿದ್ದೇವೆ. ನಾವು ಸುಗ್ರೀವಾಜ್ಞೆ ತರಲು ನಿರ್ಧರಿಸಿದ್ದೇವೆ, ಅದಕ್ಕೆ ಸಂಬಂಧಪಟ್ಟ ಹಾಗೆ ಇವತ್ತು ಸಭೆಯನ್ನು ಕರೆದಿದ್ದೇವೆ. ಸುಗ್ರೀವಾಜ್ಞೆಯ ಡ್ರಾಫ್ಟ್ ಬಗ್ಗೆ ಚರ್ಚೆ ಮಾಡಿ ತಕ್ಷಣ ನಾವು ಅದನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದರು.
ಡಿಸಿಪಿಗಳಿಗೆ ಹೆಚ್ಚು ಪವರ್ ಕೊಡಬೇಕು ಎಂದು ಪ್ರಸ್ತಾಪವಿದೆ
ಎಲ್ಲಾ ಜಿಲ್ಲಾಧಿಕಾರಿಗಳಿಗೂ ಕೂಡ ಸೂಚನೆ ಹೋಗಿದೆ, ಇದನ್ನು ಕಂಟ್ರೋಲ್ ಮಾಡುತ್ತೇವೆ ಬಿಡೋದಿಲ್ಲ. ನಮ್ಮ ಡ್ರಾಫ್ಟ್ ನಲ್ಲೂ ಕೂಡ ಡಿಸಿಪಿಗಳಿಗೆ ಹೆಚ್ಚು ಪವರ್ ಕೊಡಬೇಕು ಎಂದು ಪ್ರಸ್ತಾಪವಿದೆ. ಇದಕ್ಕೊಂದು ವಿಂಗ್ ಮಾಡಬೇಕು ಎಂಬ ಪ್ರಸ್ತಾಪವಿದೆ. ಇದೆಲ್ಲ ತೀರ್ಮಾನ ಆದ ತಕ್ಷಣವೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತೇವೆ ಎಂದರು.
ಇದನ್ನೂ ಓದಿ: ಕಲಬುರಗಿ| 15 ವರ್ಷದ ಬಾಲಕಿಯ ವಿವಾಹ ಮಾಡಿಸಿದ ಶಿಕ್ಷಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್
ನಾಳೆ ಕ್ಯಾಬಿನೆಟ್ನಲ್ಲಿ ಚರ್ಚೆ
ಕೆಲವು ಕಡೆ ಔಟ್ ಸೋರ್ಸ್ ಮಾಡಿದ್ದಾರೆ ಗೂಂಡಾಗಳ ತರಹ ವರ್ತನೆ ಮಾಡುತ್ತಿದ್ದಾರೆ. ಅದನ್ನು ಮಾಡಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ, ಏಜೆನ್ಸಿ ಯಾವುದಿದೆ ಯಾವ ಮೈಕ್ರೋ ಫೈನಾನ್ಸ್ ನಿಂದ ತಪ್ಪುಗಳಾಗುತ್ತಿದೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅದನ್ನು ಮಾಡಿಯೇ ಮಾಡುತ್ತಿವೆ ಬಿಡುವುದಿಲ್ಲ. ಇವತ್ತು ಹೆಚ್ ಕೆ ಪಾಟೀಲ್ ಕಾನೂನು ಸಚಿವರು, ಕಂದಾಯ ಸಚಿವರು ಹಾಗೂ ನಾನು ಮೂರು ಜನ ಸೇರಿ ಡ್ರಾಫ್ಟ್ ಅಂತಿಮಗೊಳಿಸುತ್ತೇವೆ. ನಾಳೆಯೇ ಕ್ಯಾಬಿನೆಟ್ ಗೆ ತಂದು ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದರು.
ತುಮಕೂರಿಗೆ ವಿಮಾನ ನಿಲ್ದಾಣ ಬರುವ ಕುರಿತು ಚರ್ಚೆ
ತುಮಕೂರಿಗೆ ನೂತನ ಏರ್‌ಪೋರ್ಟ್ ಬರುವ ಸಂಬಂಧ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ನಮ್ಮ ಅಹವಾಲು ಹೇಳಬೇಕಲ್ಲ, ತುಮಕೂರು ಭಾಗದಲ್ಲಿ ಏರ್ ಪೋರ್ಟ್ ಆದ್ರೆ 20 ರಿಂದ 25 ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಕನೆಕ್ಟಿವಿಟಿ ಕೂಡ ಈಗಿನ ಏರ್ಪೋರ್ಟ್ ಸಂಪರ್ಕ ಕಲ್ಪಿಸುವುದು ಸುಲಭವಾಗುತ್ತದೆ. ನೋಡಬೇಕು. ನಮ್ಮ ಮೆಟ್ರೋದ ಡಿಪಿಆರ್ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಡಿಪಿಆರ್ ಬಂದ ನಂತರ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದರು.
ನಿಗಮ ಮಂಡಳಿ ಸದಸ್ಯರ ನೇಮಕ
ನಿಗಮ ಮಂಡಳಿ ಸದಸ್ಯರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ನೇತೃತ್ವದಲ್ಲಿಯೇ ಸಮಿತಿ ಆಗಿತ್ತು. ನಾನು ಶಿಫಾರಸ್ಸು ಮಾಡಿ ಮುಖ್ಯಮಂತ್ರಿಗಳಿಗೆ ಕಳಿಸಿ ಒಂದು ತಿಂಗಳ ಮೇಲಾಯಿತು. ಅವರು ಫೈನಲೈಸ್ ಮಾಡಿಕೊಟ್ಟರೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಘೋಷಣೆ ಆಗುತ್ತದೆ. ಪಕ್ಷದ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷರು ಅಂತಿಮ ಮಾಡಿಕೊಡಬೇಕು. ಶಾಸಕರು ಕೊಟ್ಟ ಶಿಫಾರಸ್ಸಿನ ಆಧಾರದ ಮೇಲೆ ನಾನು ಸಬ್‌ಮಿಟ್ ಮಾಡಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಪಟ್ಟಿ ಕೊಟ್ಟ ತಕ್ಷಣ ನೇಮಕ
ಕೆಪಿಸಿಸಿ ಅಧ್ಯಕ್ಷರು ಇನ್ನೂ ಕೊಟ್ಟಿಲ್ಲ ಕಾರ್ಯಕರ್ತರ ಪಟ್ಟಿ ಸಿಕ್ಕಿದ ತಕ್ಷಣ ಅದನ್ನು ಮುಖ್ಯಮಂತ್ರಿಗಳಿಗೆ ಸಬ್ಮಿಟ್ ಮಾಡುತ್ತೇನೆ. ನಾನು ಮಾಡುವ ಕೆಲಸ ನನಗೆ ಕೊಟ್ಟಿರುವ ಕೆಲಸ ಮಾಡಿಕೊಟ್ಟಿದ್ದೇನೆ. 136 ಶಾಸಕರ ಶಿಫಾರಸು ಆಧಾರದ ಮೇಲೆ ಪಟ್ಟಿ ರೆಡಿ ಮಾಡಿ ನಾನು ಕೊಟ್ಟಿದ್ದೇನೆ. ಇಂತಿಂಥ ಸಮಿತಿಗೆ ಇಂತಿಂಥವರನ್ನ ಹಾಕಬೇಕು ಎಂಬುದನ್ನು ಪಟ್ಟಿ ಮಾಡಿ ಕಳುಹಿಸಿದ್ದೇನೆ ಎಂದು ಹೇಳಿದರು.
ಇದನ್ನೂ ನೋಡಿ: ಕುರ್ಚಿಗಾಗಿನ ಜಗಳ ಬಿಡಿ – ಕೊರಗರ ಉದ್ದಾರಕ್ಕೆ ಗಮನ ಕೊಡಿ – ಬೃಂದಾ ಕಾರಟ್ Janashakthi Media