ಅರ್ನಬ್ ಬಾಲಾಕೋಟ್ ವಾಯು ದಾಳಿ ಸಂಭ್ರಮಿಸಿದ್ದ!? ವಾಟ್ಸಪ್ ನಿಂದ ಬಯಲು
ನವದೆಹಲಿ, ಜನವರಿ 19: ಟಿಆರ್ಪಿ ಹಗರಣಕ್ಕೆ ಕುರಿತಂತೆ ನಡೆಯುತ್ತಿರುವ ತನಿಖೆಯ ವೇಳೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸಾಪ್ ಚಾಟ್ ಸೋರಿಕೆಗೊಂಡಿದ್ದು, ಟ್ವಿಟರ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯನ್ನು ಹುಟ್ಟಿ ಹಾಕಿವೆ
ಇವುಗಳು ಬಾರ್ಕ್ ಸಿಇಒ ಮತ್ತು ಅರ್ನಬ್ ಗೋಸ್ವಾಮಿ ನಡುವಿನ ಸೋರಿಕೆಯಾದ ವಾಟ್ಸಾಪ್ ಚಾಟ್‌ಗಳ ಕೆಲವು ಸ್ನ್ಯಾಪ್‌ಶಾಟ್‌ಗಳಾಗಿವೆ. ಇವು ಅವರನ್ನ ಪವರ್ ಬ್ರೋಕರ್ ಆಗಿ ಗುರುತಿಸಿದ್ದು, ಅನೇಕ ಪಿತೂರಿಗಳನ್ನು ತೋರಿಸುತ್ತದೆ ಮತ್ತು ದೇಶದ ಯಾವುದೇ ಕಾನೂನು ನಿಯಮಗಳ ಪ್ರಕಾರ ಅವರು ದೀರ್ಘಕಾಲ ಜೈಲಿನಲ್ಲಿರುತ್ತಾರೆ ” ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಅರ್ನಬ್ ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸಂಭಾಷಣೆಯು ಅಧಿಕೃತವಾಗಿದ್ದರೆ, ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ತಜ್ಙರು ಹೇಳುತ್ತಿದ್ದಾರೆ. ಟಿಆರ್‌ಪಿ ಹಗರಣ ಪ್ರಕರಣದ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಜನವರಿ 29 ರವರೆಗೆ ಮುಂದೂಡಿದೆ. ಮುಂದಿನ ವಿಚಾರಣೆಯವರೆಗೆ ಗೋಸ್ವಾಮಿಯನ್ನು ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಹಾರಾಷ್ಟ್ರ ಸಿಐಡಿ ವಶಕ್ಕೆ
ಈ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಎನ್‌ಸಿಪಿ ಆಗ್ರಹವನ್ನು ಮಾಡಿದೆ. ಸೋರಿಕೆಯಾದ ವಾಟ್ಸಾಪ್ ಸಂಭಾಷಣೆಗಳು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಬಾಲಕೋಟ್ ದಾಳಿಯ ಮಾಹಿತಿ ಅರ್ನಬ್ ಗೋಸ್ವಾಮಿಗೆ ಮೊದಲೇ ತಿಳಿದಿತ್ತು ಎಂಬ ವಿಷಯವೂ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ಮುಖ್ಯಸ್ಥ ಮಹೇಶ್ ತಾಪಸೆ, “ಟಿಆರ್‌ಪಿಗಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಬಳಸಿಕೊಂಡಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ,” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಗೃಹ ಖಾತೆ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಮಂಗಳವಾರ ಭೇಟಿಯಾಗುವುದಾಗಿ ಹೇಳಿರುವ ತಾಪಸೆ, ಈ ‘ಚಾಟ್‌ಗೇಟ್’ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸ್ಪಷ್ಟನೆ ಬಯಸುತ್ತಿರುವುದಾಗಿ ಹೇಳಿದ್ದಾರೆ.
ಇಮ್ರಾನ್ ಖಾನ್ ಆಕ್ರೋಶ : 2019ರ ಬಾಲಾಕೋಟ್ ವಾಯು ದಾಳಿಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ವಾಟ್ಸ್‌ಆಪ್ ಚಾಟ್‌ಗಳು ಲೀಕ್ ಆಗಿದ್ದು, ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಾಕೋಟ್ ಮೇಲಿನ ದಾಳಿ ಬಿಜೆಪಿ ಚುನಾವಣಾ ಲಾಭಕ್ಕಾಗಿ ನಡೆಸಿದ ತೋರಿಕೆಯ ದಾಳಿಯಾಗಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆಯ ಅವಕಾಶಗಳನ್ನು ಹೆಚ್ಚಿಸಲು ಮಾಡಿದ ದಾಳಿ ಎಂದು ಇರ್ಮಾನ್ ಖಾನ್ ಆರೋಪಿಸಿದ್ದಾರೆ. ಅಲ್ಲದೆ ಭಾರತ ಬೇಜವಾಬ್ದಾರಿಯುತ ಸೇನಾ ಕಾರ್ಯಾಚಾರಣೆಯನ್ನು ನಿಲ್ಲಿಸಬೇಕು ಎಂದು ಜಾಗತಿಕ ಸಮುದಾಯವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೊಶ : ಬಾಲ್ ಕೋಟ್ ವಾಯುದಾಳಿಗೆ ಸಂಬಂಧಿಸಿದಂತೆ ಅರ್ನಬ್ ನಡೆ ಕುರಿತು ಪರ ವಿರೊಧದ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯರು ಅರ್ನಬ್ ನನ್ನು ಸಮರ್ತಿಸಿಕೊಂಡರೆ, ಅನೇಕರು ಇವರ ವಿರುದ್ಧ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಅವತ್ತು ದೇಶದ ಮೇಲೆ ದಾಳಿ ನಡೆದಿತ್ತು. ನಲವತ್ತು ವೀರಯೋಧರ ದೇಹಗಳು ಚಿಂದಿಚಿಂದಿಯಾಗಿ ಬಿದ್ದಿದ್ದವು. ನಿಮ್ಮ ಅರ್ನಾಬು ವಿಜಯೋತ್ಸಾಹದ ಕೇಕೆ ಹಾಕಿದನಲ್ಲ, ನಿಮಗೇನೂ ಅನಿಸೋದಿಲ್ವಾ ಅಂತ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶಿಲವಾಗಿರುವ ದಿನೇಶ್ ಕುಮಾರ ದಿನೋ ಅರ್ನಬ್ ಸಮರ್ಥಕರನ್ನು ಪ್ರಶ್ನಿಸಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮ್ಮೀನ್ ಮಟ್ಟು ರವರು ಫೆಸ್ಬುಕ್ ನಲ್ಲಿ ಪ್ರತಿಕ್ರೀಯೆ ನೀಡುದ್ದು ಈ ಕೆಳಗಿನಂತೆ ಬರೆದುಕೊಂಡಿದ್ದಾರೆ. “ಬಾರ್ಕ್ ಸಿಇಒ ದಾಸ್ ಗುಪ್ತಾ, ಅರ್ನಬ್ ಗೋಸ್ವಾಮಿ ಜೊತೆ ಎಷ್ಟೊಂದು ಗಾಢ ಸಂಬಂಧ ಹೊಂದಿದ್ದನೆಂದರೆ ಬಾರ್ಕ್ ನ ರಹಸ್ಯ ಪತ್ರವನ್ನು ಕೂಡಾ ಆತ ಅರ್ನಬ್ ಗೆ ಕಳಿಸಿದ್ದನಂತೆ. ನ್ಯೂಸ್ ಬ್ರಾಡ್ ಕಾಸ್ಟ್ ಅಸೋಸಿಯೇಷನ್ ಬಾರ್ಕ್ ಗೆ ಬರೆದಿರುವ ಪತ್ರವನ್ನು ತಾನು ತಡೆಹಿಡಿದಿದ್ದು ದಾಸ್ ಗುಪ್ತಾ ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸುತ್ತಾ ‘ ಈ ಸಂಬಂಧ ನಾನು ಪ್ರಧಾನಮಂತ್ರಿ ಜೊತೆ ಮಾತನಾಡುತ್ತೇನೆ’’ ಎಂದು ಹೇಳಿದ್ದಾನೆ.”