ಅಯೋಧ್ಯೆ| ನೀರಿನ ಟ್ಯಾಂಕ್‌ ಕುಸಿತ; ಓರ್ವ ಕಾರ್ಮಿಕ ಮೃತ

ಅಯೋಧ್ಯೆ: ಇಂದು ಮಂಗಳವಾರ, ಉತ್ತರ ಪ್ರದೇಶದ ಪುರಕಲಂದರ್‌ ಪ್ರದೇಶದ ಕೆಎಂ ಸಕ್ಕರೆ ಕಾರ್ಖಾನೆಯಲ್ಲಿ ಓವರ್‌ಹೆಡ್‌ ನೀರಿನ ಟ್ಯಾಂಕ್‌ ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40,000 ಲೀಟರ್‌ ನೀರಿನ ಟ್ಯಾಂಕ್‌ ಹಠಾತ್ತನೆ ಕುಸಿದು ಬಿದ್ದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಧುವನ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಕಾರ್ಯಕರ್ತೆಯಿಂದ ಎಚ್‌.ಎಂ ರೇವಣ್ಣ ವಿರುದ್ಧ ಹಲ್ಲೆ ಆರೋಪ

ಘಟನೆಯಲ್ಲಿ ಪ್ರವೇಶ್‌ ರಾವತ್‌ (40) ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂದ ಕುಮಾರ್‌ ಪಾಂಡೆ (46) ಮತ್ತು ವಿನೋದ್‌ ಕುಮಾರ್‌ (30) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ ವಿಕಾಸ್‌ ದುಬೆ ತಿಳಿಸಿದ್ದಾರೆ.

ಇದನ್ನೂ ನೋಡಿ: Karnataka Legislative Assembly Live Day 09 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *