ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವಿರಾರು ಕ್ಯೂಸೆಕ್ ನೀರು ಪೋಲಾಗಿರುವ ಘಟನೆ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಜರುಗಿದೆ.
ಇದನ್ನು ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ: ಸೆನ್ಸೆಕ್ಸ್ 1,079, ನಿಫ್ಟಿ 23,650
ಭಾನುವಾರ ರಾತ್ರಿ ಏಕಾಏಕಿ ಕೆಆರ್‌ಎಸ್ ಡ್ಯಾಂನ +80 ಗೇಟ್ ಓಪನ್ ಆಗಿ ನದಿಗೆ ನೀರು ಹರಿದು ವ್ಯರ್ಥವಾಗಿದೆ. ಭಾನುವಾರ ರಾತ್ರಿ ಓಪನ್ ಆಗಿರುವ ಗೇಟ್‌ನಿಂದ ನಿನ್ನೆ ರಾತ್ರಿವರೆಗೂ ಡ್ಯಾಂ ನೀರು ಹರಿದು ನದಿ ಸೇರಿದೆ. ಗೇಟ್ ಓಪನ್ ಆಗಿದ್ರೂ ಸಹ ಅಧಿಕಾರಿಗಳು ಗೇಟ್ ಮುಚ್ಚದೆ ನಿರ್ಲಕ್ಷ್ಯ ತೋರುವುದು ಮೇಲ್ನೋಟಕ್ಕೆ ತಿಳಿದಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ 2 ಸಾವಿರ ಕ್ಯೂಸೆಕ್ ನೀರು ನದಿ ಪಾಲು ಆಗಿದೆ. ಗೇಟ್ ಇದ್ದಕ್ಕಿದ್ದಂತೆ ಯಾಕೆ? ಹೇಗೆ? ಓಪನ್ ಆಯ್ತು ಎಂಬುದು ಇನ್ನೂ ನಿಗೂಢವಾಗಿದೆ. ಸಿಬ್ಬಂದಿಗಳ ಯಡವಟ್ಟಿನಿಂದ ಗೇಟ್ ಓಪನ್ ಆಯ್ತಾ? ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಅಥವಾ ಸಮಸ್ಯೆ ಉಂಟಾಗಿ ಓಪನ್ ಆಯ್ತ ಎಂಬುದು ಅಸ್ಪಷ್ಟವಾಗಿದೆ. ಸದ್ಯ ಅಧಿಕಾರಿಗಳು ಸಿಬ್ಬಂದಿಗಳು ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿ ಗೇಟ್ ಬಂದ್ ಮಾಡಿದ್ದಾರೆ. ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದಿದ್ರಿಂದ ಗೇಟ್ ಮುಚ್ಚಲು ಈ ವೇಳೆ ಹರಸಾಹಸಪಟ್ಟು ಗೇಟ್ ಬಂದ್ ಮಾಡಿದ್ದಾರೆ.
ಇದನ್ನು ಓದಿ: ಹಣ ಪತ್ತೆ ಪ್ರಕರಣ: ದೆಹಲಿ ಹೈಕೋರ್ಟ್ ನ್ಯಾ. ಯಶವಂತ್ ವರ್ಮಾ ಕರ್ತವ್ಯ ನಿರ್ವಹಿಸದಂತೆ ಆದೇಶ